ಬೆಂಗಳೂರು, ಮಾ.3- ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಲೋಕಸಭೆ ಮಾಜಿ ಸದಸ್ಯ ಎಂ.ಶ್ರೀನಿವಾಸ್ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಸಂತಾಪ ಸೂಚಿಸಲಾಯಿತು.
ಸಂತಾಪ ಸೂಚನ ನಿರ್ಣಯ ಮಂಡಿಸಿದ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ವಿಧಾನಸಭೆಯ ಮಾಜಿ ಸದಸ್ಯರಾಗಿದ್ದ ಎಂ.ಶ್ರೀನಿವಾಸ್, ಜಯವಾಣಿ ಮಂಚೇಗೌಡ, ಖ್ಯಾತ ಚಿತ್ರನಿರ್ಮಾಪಕ ಶ್ಯಾಮ್ ಬೆನಗಲ್, ಹಿರಿಯ ಸಾಹಿತಿ ಡಿಸೋಜ, ಜನಪದ ಹಾಡುಗಾರ್ತಿ ಸುಕ್ರಿ ಬೊಮ್ಮಗೌಡ ಅವರು ನಿಧನ ಹೊಂದಿರುವುದನ್ನು ಸದನಕ್ಕೆ ಅತ್ಯಂತ ವಿಷಾದಿಂದ ತಿಳಿಸಿದರು.
ಮನಮೋಹನ್ ಸಿಂಗ್ ಅವರು 1932ರ ಸೆಪ್ಟೆಂಬರ್ 26ರಂದು ಅವಿಭಜಿತ ಪಂಜಾಬ್ ಪಾಂತ್ಯದಲ್ಲಿ ಜನಿಸಿದ್ದರು. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಹಾನರ್ಸ್ ಪದವಿ, ಆಕ್ ವಿವಿಯಿಂದ ಡಿಫಿಲ್ ಪದವಿಯನ್ನು ಪಡೆದಿದ್ದರು. ಜಿನಿವಾದಲ್ಲಿನ ದಕ್ಷಿಣ ಆಯೋಗಕ್ಕೆ ಮಹಾಪ್ರಧಾನ ಕಾರ್ಯದರ್ಶಿ ಹಾಗೂ ಕಮೀಷನರ್ ಆಗಿ ನೇಮಕಗೊಂಡಿದ್ದರು.
ವಾಣಿಜ್ಯ ಸಚಿವಾಲಯದಲ್ಲಿ ಆರ್ಥಿಕ ಸಲಹೆಗಾರ, ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಗೌರರ್ ಆಗಿ ಪ್ರಧಾನಮಂತ್ರಿಯ ಸಲಹೆಗಾರರಾಗಿ ಯುಜಿಸಿಯ ಅಧ್ಯಕ್ಷರಾಗಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು ಎಂದು ಸ್ಮರಿಸಿದರು.
ಆರು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ಅವರು ಕೇಂದ್ರ ಹಣಕಾಸು ಸಚಿವರಾಗಿ ಮಾಡಿದ ಆರ್ಥಿಕ ಸುಧಾರಣೆಗಳು ವಿಶ್ವದ ಮನ್ನಣೆ ಪಡೆದಿವೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಮಾಹಿತಿ ಹಕ್ಕು ಅಧಿನಿಯಮ ಸೇರಿದಂತೆ ಹತ್ತು ಹಲವು ಜನಪ್ರಿಯ ಶಾಸನಗಳು ಹಾಗೂ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆರ್ಥಿಕ ಸುಧಾರಣೆಯ ಹರಿಕಾರ, ಅರ್ಥ ಕ್ರಾಂತಿಯ ರಾಜನೀತಿಜ್ಞ ಆಗಿದ್ದ ಅವರು ಪದ್ಮವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಇವರು 2024ರ ಡಿಸೆಂಬರ್ 26ರಂದು ನಿಧನ ಹೊಂದಿದ್ದಾರೆ ಎಂದು ವಿಷಾದಿಸಿದರು.
ಎಂ.ಶ್ರೀನಿವಾಸ್ ಅವರು ಉತ್ತರಹಳ್ಳಿಯಲ್ಲಿ 1942ರ ಅಕ್ಟೋಬರ್ 30ರಂದು ಜನಿಸಿದ್ದರು. ಕೃಷಿಕರು ಹಾಗೂ ಕೈಗಾರಿಕೋದ್ಯಮಿಯಾಗಿದ್ದ ಅವರು ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಕನಕಪುರ ಕ್ಷೇತ್ರದಿಂದ ಲೋಕಸಭೆಗೂ ಆಯ್ಕೆಯಾಗಿದ್ದರು. 2025 ಜನವರಿ 16ರಂದು ನಿಧನರಾದರು ಎಂದು ಹೇಳಿದರು. ಜಯವಾಣಿ ಮಂಚೇಗೌಡ ಅವರು ಮದ್ದೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ 7ನೇ ವಿಧಾನಸಭೆಗೆ ಆಯ್ಕೆಯಾಗಿದ್ದರು. ಇವರು ಜ.3ರಂದು ನಿಧನರಾಗಿದ್ದಾರೆ ಎಂದರು.
ಸಿನಿಮಾ ನಿರ್ದೇಶಕ ಶ್ಯಾಮ್ ಬೆನಗಲ್ ಅವರು 1934ರಲ್ಲಿ ಅಂದಿನ ಹೈದರಾಬಾದ್ ಪ್ರಾಂತ್ಯದ ತಿರುಮಲಗಿರಿಯಲ್ಲಿ ಜನಿಸಿದ್ದರು. ಅತ್ಯುತ್ತಮ ನಿರ್ದೇಶಕರಾಗಿದ್ದ ಅವರು, ರಾಜ್ಯ ಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ದಾದಾ ಸಾಹೇಬ್ ಫಾಲ್ಕೆ, ಪದ್ಮಭೂಷಣ ಸೇರಿದಂತೆ ಹಲವು ಪ್ರಶ್ನೆಗಳಿಗೆ ಭಾಜನರಾಗಿದ್ದರು. 2024ರ ಡಿಸೆಂಬರ್ 23ರಂದು ನಿಧನರಾಗಿದ್ದಾರೆ ಎಂದು ತಿಳಿಸಿದರು.
ಪರಿಸರ ಕಾಳಜಿಯುಳ್ಳ ಹಿರಿಯ ಸಾಹಿತಿ ನಾ.ಡಿಸೋಜ ಅವರು 1937ರ ಜೂನ್ ೧ರಂದು ಸಾಗರದಲ್ಲಿ ಜನಿಸಿದ್ದರು. 75 ಕಾದಂಬರಿಗಳು, ಆರು ಚಾರಿತ್ರಿಕ ಕಾದಂಬರಿಗಳು, 500 ಕಥೆಗಳು, 25 ಮಕ್ಕಳ ಕಾದಂಬರಿಗಳು, ಹತ್ತಾರು ನಾಟಕಗಳನ್ನು ರಚಿಸಿದ್ದರು. 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಡಿಸೋಜ ಅವರ ಜನವರಿ 5ರಂದು ನಿಧನ ಹೊಂದಿದ್ದಾರೆ ಎಂದರು.
ಸುಕ್ರಿ ಬೊಮ್ಮಗೌಡ ಅವರು ಆಲಕ್ಕಿ ಜನಾಂಗದ ಕಡು ಬಡ ಕುಟುಂಬದಲ್ಲಿ ಜನಿಸಿದ್ದರು. ವಿದ್ಯೆ ಕಲಿಯದಿದ್ದರೂ ಸಮುದಾಯದ ಹಾಡು, ಸುಗ್ಗಿ, ತಾರ್ಲೆ ಕುಣಿತವನ್ನು ಕಲಿತಿದ್ದರು. ಇವರು ಜಾನಪದ ಕಲೆಯ ಕಂಪನ್ನು ದೇಶಾದ್ಯಂತ ಹರಡಿದ್ದರು. ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖರಾಗಿದ್ದರು.
ಪದ್ಮಶ್ರೀ, ಜನಪದ ಪ್ರಶಸ್ತಿ, ನಾಡೋಜ, ರಾಜ್ಯೋತ್ಸವ ಸೇರಿದಂತೆ 80ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಕಾಡಿನ ಹಕ್ಕಿ, ಜಾನಪದ ಕೋಗಿಲೆ ಎಂದೇ ಪ್ರಸಿದ್ದರಾಗಿದ್ದು ಬೊಮ್ಮಗೌಡ ಅವರ ಫೆ.13ರಂದು ನಿಧನರಾಗಿದ್ದಾರೆ ಎಂದು ವಿಷಾದಿಸಿದರು.
ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಮನಮೋಹನ್ ಸಿಂಗ್ ಅವರು ಅಧಿಕಾರ ಸಿಕ್ಕಾಗ ಆ ಹುದ್ದೆಗಳಿಗೆ ಗೌರವ ತಂದುಕೊಟ್ಟರು. ಆರ್ಥಿಕವಾಗಿ ದೂರದೃಷ್ಟಿ ಹೊಂದಿದ್ದರು. ದೇಶದ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಸೂತ್ರ ನೀಡಿದರು. ದೇಶದ ಪರಿವರ್ತನೆಗೆ ಕಾರಣರಾದರು. ರಾಜಕಾರಣದಲ್ಲಿ ಮಿತಭಾಷಿ ಎಂಬುದನ್ನು ತೋರಿಸಿಕೊಟ್ಟರು ಎಂದು ಗುಣಗಾನ ಮಾಡಿ ಆಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಶಾಸಕರು ಆಗಲಿದ ಗಣ್ಯರ ಗುಣಗಾನ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು. ನಂತರ ಮೃತರ ಗೌರವಾರ್ಥ ಸದನದ ಸದಸ್ಯರು ಎದ್ದು ನಿಂತು ಮೌನಾಚರಣೆ ಮಾಡುವ ಶ್ರದ್ಧಾಂಜಲಿ ಸೂಚಿಸಿದರು.
ವಿಧಾನಪರಿಷತ್ ನಲ್ಲೂ ಸಂತಾಪ :
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ವಿಧಾನಪರಿಷತ್ ಸದಸ್ಯ ಪಟೇಲ್ ಶಿವರಾಮ್, ಪದ್ಮ ಪ್ರಶಸ್ತಿ ಪುರಸ್ಕೃತರಾದ ಸಕ್ರಿ ಬೊಮ್ಮನಗೌಡ, ಖ್ಯಾತ ಸಾಹಿತಿ ಡಿಸೋಜ, ಚಲನಚಿತ್ರ ನಟ ಸರಿಗಮ ವಿಜಿ ಸೇರಿದಂತೆ ಸೇರಿದಂತೆ ಇತ್ತೀಚೆಗೆ ಆಗಲಿದ ಗಣ್ಯರಿಗೆ ವಿಧಾನಪರಿಷತ್‌ನಲ್ಲಿ ಭಾವಪೂರ್ಣ ಸಂತಾಪ ಸೂಚಿಸಲಾಯಿತು.
ಸಂತಾಪ ಸೂಚನ ನಿರ್ಣಯ ಮಂಡಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಅಗಲಿದ ಗಣ್ಯರ ಸಾಧನೆಯನ್ನು ಗುಣಗಾನ ಮಾಡಿದರು. ಸಂತಾಪ ನಿರ್ಣಯದ ಮೇಲೆ ಸಭಾಪತಿ ಬಸವರಾಜ ಹೊರಟ್ಟಿ, ಸಭಾನಾಯಕ ಭೋಸರಾಜ್, ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಎಚ್.ವಿಶ್ವನಾಥ್ ಸೇರಿದಂತೆ ಮತ್ತಿತರರು ಮಾತನಾಡಿದರು.
ಮೊದಲು ಮಾತನಾಡಿದ ಸಭಾಪತಿ ಹೊರಟ್ಟಿ ಅವರು, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು, 1932ರ ಸೆಪ್ಟೆಂಬರ್ 26ರಂದು ಅವಿಭಜಿತ ಪಂಜಾಬ್ ಪಾಂತ್ಯದಲ್ಲಿ ಜನಿಸಿದ್ದರು. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಹಾನರ್ಸ್ ಪದವಿ, ಆಕ್ಸ್ ವಿವಿಯಿಂದ ಡಿಫಿಲ್ ಪದವಿಯನ್ನು ಪಡೆದಿದ್ದರು. ಜಿನಿವಾದಲ್ಲಿನ ದಕ್ಷಿಣ ಆಯೋಗಕ್ಕೆ ಮಹಾಪ್ರಧಾನ ಕಾರ್ಯದರ್ಶಿ ಹಾಗೂ ಕಮೀಷನರ್ ಆಗಿ ನೇಮಕಗೊಂಡಿದ್ದರು.
ವಾಣಿಜ್ಯ ಸಚಿವಾಲಯದಲ್ಲಿ ಆರ್ಥಿಕ ಸಲಹೆಗಾರ, ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಗೌರರ್ ಆಗಿ ಪ್ರಧಾನಮಂತ್ರಿಯ ಸಲಹೆಗಾರರಾಗಿ ಯುಜಿಸಿಯ ಅಧ್ಯಕ್ಷರಾಗಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು ಎಂದು ಸ್ಮರಿಸಿದರು.
ಆರು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ಅವರು ಕೇಂದ್ರ ಹಣಕಾಸು ಸಚಿವರಾಗಿ ಮಾಡಿದ ಆರ್ಥಿಕ ಸುಧಾರಣೆಗಳು ವಿಶ್ವದ ಮನ್ನಣೆ ಪಡೆದಿವೆ. ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಮಾಹಿತಿ ಹಕ್ಕು ಅಧಿನಿಯಮ ಸೇರಿದಂತೆ ಹತ್ತು ಹಲವು ಜನಪ್ರಿಯ ಶಾಸನಗಳು ಹಾಗೂ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆರ್ಥಿಕ ಸುಧಾರಣೆಯ ಹರಿಕಾರ, ಅರ್ಥ ಕ್ರಾಂತಿಯ ರಾಜನೀತಿಜ್ಞ ಆಗಿದ್ದ ಅವರು ಪದ್ಮವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಇವರು 2024ರ ಡಿಸೆಂಬರ್ 26ರಂದು ನಿಧನ ಹೊಂದಿದ್ದಾರೆ ಎಂದು ವಿಷಾದಿಸಿದರು.
ಪರಿಸರ ಕಾಳಜಿಯುಳ್ಳ ಹಿರಿಯ ಸಾಹಿತಿ ನಾ.ಡಿಸೋಜ ಅವರು 1937ರ ಜೂನ್ 6ರಂದು ಸಾಗರದಲ್ಲಿ ಜನಿಸಿದ್ದರು. 75 ಕಾದಂಬರಿಗಳು, ಆರು ಚಾರಿತ್ರಿಕ ಕಾದಂಬರಿಗಳು, 500 ಕಥೆಗಳು, 25 ಮಕ್ಕಳ ಕಾದಂಬರಿಗಳು, ಹತ್ತಾರು ನಾಟಕಗಳನ್ನು ರಚಿಸಿದ್ದರು. 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಡಿಸೋಜ ಅವರ ಜನವರಿ 3ರಂದು ನಿಧನ ಹೊಂದಿದ್ದಾರೆ ಎಂದರು.ಸಕ್ರಿ ಬೊಮ್ಮಗೌಡ ಅವರು ಆಲಕ್ಕಿ ಜನಾಂಗದ ಕಡು ಬಡ ಕುಟುಂಬದಲ್ಲಿ ಜನಿಸಿದ್ದರು. ವಿದ್ಯೆ ಕಲಿಯದಿದ್ದರೂ ಸಮುದಾಯದ ಹಾಡು, ಸುಗ್ಗಿ, ತಾರ್ಲೆ ಕುಣಿತವನ್ನು ಕಲಿತಿದ್ದರು. ಇವರು ಜಾನಪದ ಕಲೆಯ ಕಂಪನ್ನು ದೇಶಾದ್ಯಂತ ಹರಡಿದ್ದರು. ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖರಾಗಿದ್ದರು.
ಪದ್ಮಶ್ರೀ, ಜನಪದ ಪ್ರಶಸ್ತಿ, ನಾಡೋಜ, ರಾಜ್ಯೋತ್ಸವ ಸೇರಿದಂತೆ 80ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಕಾಡಿನ ಹಕ್ಕಿ, ಜಾನಪದ ಕೋಗಿಲೆ ಎಂದೇ ಪ್ರಸಿದ್ದರಾಗಿದ್ದು ಬೊಮ್ಮಗೌಡ ಅವರ ಫೆ.13ರಂದು ನಿಧನರಾಗಿದ್ದಾರೆ ಎಂದು ವಿಷಾದಿಸಿದರು.
ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಸಭಾನಾಯಕ ಭೋಸರಾಜ್ ಮಾತನಾಡಿ, ಮನಮೋಹನ್ ಸಿಂಗ್ ಅವರು ಅಧಿಕಾರ ಸಿಕ್ಕಾಗ ಆ ಹುದ್ದೆಗಳಿಗೆ ಗೌರವ ತಂದುಕೊಟ್ಟರು. ಆರ್ಥಿಕವಾಗಿ ದೂರದೃಷ್ಟಿ ಹೊಂದಿದ್ದರು. ದೇಶದ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಸೂತ್ರ ನೀಡಿದರು. ದೇಶದ ಪರಿವರ್ತನೆಗೆ ಕಾರಣರಾದರು. ರಾಜಕಾರಣದಲ್ಲಿ ಮಿತಭಾಷಿ ಎಂಬುದನ್ನು ತೋರಿಸಿಕೊಟ್ಟರು ಎಂದು ಗುಣಗಾನ ಮಾಡಿ ಆಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು.ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸದಸ್ಯರಾದ ಹರಿಪ್ರಸಾದ್, ವಿಶ್ವನಾಥ್ ಕೂಡ ಆಗಲಿದ ಗಣ್ಯರ ಸೇವೆಯನ್ನು ಗುಣಗಾನ ಮಾಡಿದರು. ನಂತರ ಮೃತರ ಗೌರವಾರ್ಥ ಸದನದ ಸದಸ್ಯರೆಲ್ಲರೂ ಎದ್ದು ನಿಂತು ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸೂಚಿಸಿದರು.