ಬೆಂಗಳೂರು,ಮಾ.3-ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಸರ್ಕಾರದ ನಟ್ಟು-ಬೋಲ್ಟು ಸಂಪೂರ್ಣವಾಗಿ ಸಡಿಲವಾಗಿದೆ ಎಂದು ಟೀಕೆ ಮಾಡಿರುವ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯಪಾಲರ ಮೂಲಕ ಹೇಳಿಸಿ ಸುಳ್ಳು ಭಾಷಣ ಮಾಡಿದ್ದಾರೆಂದು ಟೀಕಿಸಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರ ಜಂಟಿ ಭಾಷಣದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ವರ್ಷದ ಅವಧಿಯಲ್ಲಿ ಸರ್ಕಾರ ಅಭಿವೃದ್ಧಿಯನ್ನೇ ಮಾಡಿಲ್ಲ. ಇವರ ನಟ್ಟು-ಬೋಲ್ಟುಗಳೇ ಸಡಿಲವಾಗಿರುವಾಗ ಇನ್ನು ಅಭಿವೃದ್ಧಿ ಎಲ್ಲಿಂದ ಬರುತ್ತದೆ ಎಂದು ಪ್ರಶ್ನೆ ಮಾಡಿದರು.
ರಾಜ್ಯಪಾಲರು ಮಾಡಿರುವ ಭಾಷಣ ಸಂಪೂಣವಾಗಿ ಸುಳ್ಳಿನಿಂದ ಕೂಡಿದೆ. ಇದರಲ್ಲಿ ಸರ್ಕಾರ ಮಾಡಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಪ್ರಸ್ತಾಪವೇ ಇಲ್ಲ. ಎರಡು ವರ್ಷದಿಂದ ನಾವು ಅಭಿವೃದ್ಧಿ ಭಾಗ್ಯವನ್ನು ಹೆಚ್ಚಿಸಿದ್ದೇವೆ ಎಂದು ಸುಳ್ಳು ಹೇಳಿಸಿದ್ದಾರೆ. ಇವರ ಅಭಿವೃದ್ಧಿಗೆ ದೇವರಿಗೇ ಪ್ರೀತಿ ಎಂದು ವ್ಯಂಗ್ಯವಾಡಿದರು. ರಾಜ್ಯದ ಅಭಿವೃದ್ಧಿ ಬಗ್ಗೆ ರಾಜ್ಯಪಾಲರ ಕೈಯಲ್ಲಿ ಹೇಳಿಸಿ ಸಮಯ ವ್ಯರ್ಥ ಮಾಡಿದ್ದಾರೆ. ಹಣಕಾಸು ಸಧೃಡಗೊಳಿಸುತ್ತೇವೆ ಅಂದಿದ್ದಾರೆ.
ಹಸಿ ಸುಳ್ಳನ್ನು ಹೇಳಿಸಿದ್ದಾರೆ. ಅಭಿವೃದ್ಧಿ ಬಗ್ಗೆ ಚಕಾರವನ್ನೇ ಎತ್ತಿಲ್ಲ. ಕ್ರಮ, ಸ್ಥಾಪನೆ, ಅಭಿವೃದ್ಧಿ ಮಾಡಲಾಗುತ್ತಿದೆ ಎನ್ನುತ್ತಾರೆ. ಆದರೆ ಯಾವ ಅಂಕಿಅಂಶಗಳನ್ನ ನೀಡಿಲ್ಲ ಎಂದು ಆಕ್ಷೇಪಿಸಿದರು.
ಕಳೆದ ಎರಡು ವರ್ಷದಲ್ಲಿ ರಾಜ್ಯದಲ್ಲಿ ಅಭಿವೃದ್ಧಿಯೇ ಆಗಿಲ್ಲ, ರಾಜ್ಯದ ಅಭಿವೃದ್ಧಿಯಲ್ಲಿ ನಟ್ಟು ಬೋಲ್ಟ್ ಲೂಸ್ ಆಗಿದೆ. ಇದು ರಾಜ್ಯಪಾಲರ ಭಾಷಣದಲ್ಲಿ ಗೋಚರಿಸಿದೆ ಎಂದು ಪುನರುಚ್ಚರಿಸಿದ್ದಾರೆ.
ಹೈನುಗಾರಿಕೆಗೆ ಪ್ರೋತ್ಸಾಹ ಅನ್ನುತ್ತಾರೆ. ಸಾವಿರಾರು ಕೋಟಿ ಪ್ರೋತ್ಸಾಹ ಧನ ಕೊಟ್ಟಿಲ್ಲ, ಎರಡು ವರ್ಷದಲ್ಲಿ ಎಷ್ಟು ಖರ್ಚು ಮಾಡಿದ್ದಾರೆ. ಬಡವರು ಬೀದಿಗೆ ಬರುವಂತಾಗಿದೆ. ಮುಂದೆ ಇವರು ಬರಗಾಲ ಹೇಗೆ ನಿಭಾತಿಸುತ್ತಾರೋ ಇಲ್ಲವೋ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ರಾಜ್ಯಪಾಲರ ಬಾಯಲ್ಲಿ ಹೇಳಿಕೆ ಕೊಡಿಸಿದ್ದಾರೆ. ಅಭಿವೃದ್ಧಿ ಶೂನ್ಯ ವಿಕಾಸ ಎಂದು ಹೇಳಿಸಿದ್ದಾರೆ. ಕಳೆದ ಎರಡು ವರ್ಷದಲ್ಲಿ ಏನು ವಿಕಾಸ ಆಗಿದೆ. ಕಾಂಗ್ರೆಸ್ ಶಾಸಕರ ಜೋಬು ತುಂಬಿದೆ ಎಂದು ವ್ಯಂಗ್ಯವಾಡಿದರು. ರಾಜಭವನ, ರಾಜ್ಯ ಪಾಲರಿಗೆ ಅಗೌರವ ತೋರಿದರೂ ಅವರನ್ನ ಪದೇ ಪದೇ ಅವಹೇಳನ ಮಾಡಿಸಿದರು. ಇಂದು ಸುಳ್ಳುಗಳ ಸರಮಾಲೆ ಹೇಳಿಸಿದ್ದಾರೆ.
ಕೈಗೆಟಕುವ ದರದಲ್ಲಿ ಆರೋಗ್ಯ ಅಂದಿದ್ದಾರೆ. ಆಸ್ಪತ್ರೆಗಳಲ್ಲಿ ವಿಸಿಟಿಂಗ್ ಚಾರ್ಜ್ ಜಾಸ್ತಿ ಮಾಡಿದ್ದಾರೆ. ಬಾಣಂತಿ, ಮಗುವಿನ ಮರಣ ಮೃದಂಗ ನಡೆದಿದೆ. ಅವರ ಕಟಿಬದ್ಧ ಸರ್ಕಾರ ಎಂದು ಹೇಳಿಸಿದ್ದಾರೆಂದು ವ್ಯಂಗ್ಯವಾಡಿದರು.
ಅಭಿವೃದ್ಧಿ ನಮ್ಮ ಮೂಲ ಮಂತ್ರ ಅಂದಿದ್ದಾರೆ. ಎಸ್ಸಿಎಸ್ಟಿ 145 ಕೋಟಿ ಹಣ ಲೂಟಿ ಹೊಡೆದಿದ್ದಾರೆ. ಅವರ ಅಭಿವೃದ್ಧಿ ಹಣ ಲೂಟಿ ಮಾಡಿದ್ದಾರೆ. ಬೆಂಗಳೂರು ರಸ್ತೆಗೆ 1000 ಕೋಟಿಯಂತೆ, ಇರುವ ರಸ್ತೆಗಳೇ ಗುಂಡಿ ಬಿದ್ದಿವೆ ಎಂದು ಟೀಕಿಸಿದರು.
ಕಂದಾಯ ಇಲಾಖೆಯಲ್ಲಿ ಸುವರ್ಣ ಪರ್ವ ಅನ್ನುತ್ತಾರೆ. ಕಾಂಟ್ರಾಕ್ಟ್ ಮಾಡಿ ಹಣ ಕೊಡಿ ಅಂತಿದ್ದಾರೆ. ನೀರಾವರಿಗೆ ಹೆಚ್ಚಿನ ಆಧ್ಯತೆ ಅಂದಿದ್ದಾರೆ. ಎಲ್ಲಿ ಯಾವ ಡ್ಯಾಂ ಕಟ್ಟಿದ್ದೀರ ಹೇಳಬೇಕಲ್ಲ, 19 ತಿಂಗಳಲ್ಲಿ ಏನು ಘಟನೆ ಆಗಿಲ್ಲವಂತೆ. ಬ್ಯಾಂಕುಗಳ ದರೋಡೆ ಆಗಿವೆ. ಬೀದರ್‌ನಲ್ಲಿ ಅಪರಾದಿಗಳನ್ನ ಬಂಧಿಸಿಲ್ಲ, ಮೈಸೂರಿನಲ್ಲಿ ಠಾಣೆಯ ಮೇಲೆ ಅಟ್ಯಾಕ್, ಲಾಂಗ್ ಮಚ್ಚು ಹಿಡಿದು ಓಡಾಡುತ್ತಾರೆ. ಇಷ್ಟಾದರೂ ಏನೂ ಇಲ್ಲ ಎಂದು ಹೇಳಿಸಿದ್ದಾರೆ ಎಂದು ಕಿಡಿಕಾರಿದರು.
ಪಾರದರ್ಶಕ ಆಡಳಿತ ಅಂತ ಹೇಳುತ್ತಾರೆ. ಏನು ಲೂಟಿ ಮಾಡೋದೇ ಪಾರದರ್ಶಕವೇ. 19 ತಿಂಗಳಲ್ಲಿ ಎಷ್ಟು ಲೂಟಿಯಾಗಿದೆ ಎಂದು ಸರ್ಕಾರದ ವಿರುದ್ಧವಾಗ್ದಾಳಿ ಮಾಡಿದರು.
ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ಮಾತನಾಡಿ, ರಾಜ್ಯಪಾಲರ ಹಕ್ಕನ್ನು ಸರ್ಕಾರ ಕಿತ್ತುಕೊಳ್ಳೋಕೆ ಹೋಗಿದೆ. ರಾಜ್ಯಪಾಲರ ಗೌರವ ಹಾಳುಮಾಡಲು ಹೊರಟರು. ಈಗ ಅವರ ಬಾಯಲ್ಲೇ ಸುಳ್ಳು ಹೇಳಿಸಿದ್ದಾರೆ ಎಂದರು.
ಕಲ್ಯಾಣ ಕರ್ನಾಟಕಕ್ಕೆ 5000 ಕೋಟಿ ಅಂದರು. ಮೊದಲೇ 2500 ಕೋಟಿ ಕೊಡಲಾಗಿತ್ತು. ಅದು ಎಲ್ಲಿ ಹೋಯ್ತು ಗೊತ್ತಿಲ್ಲ. ಈಗ 5000 ಕೋಟಿ ಕೊಟ್ಟಿದ್ದೇವೆ ಅನ್ನುತ್ತಾರೆ ಎಲ್ಲಿ 11 ಸಾವಿರ ಯೋಜನೆಗೆ ಅನುಮೋದನೆ ಅಂದರು. ಎಲ್ಲಿ ಹಣವನ್ನ ಬಿಡುಗಡೆ ಮಾಡಿದರು ಎಂದು ಪ್ರಶ್ನಿಸಿದರು. ಕೇವಲ ಸುಳ್ಳುಗಳನ್ನ ರಾಜ್ಯಪಾಲರಿಂದ ಹೇಳಿಸಿದ್ದಾರೆ. 5 ಕೆಜಿ ಅಕ್ಕಿಮೋದಿ ಕೊಡೋದು ಮುಟ್ಟಿಸಿದ್ದಾರೆ. ಆರೇಳು ತಿಂಗಳಿಂದ ಜನರಿಗೆ ಹಣ ತಲುಪಿಲ್ಲ, 2000 ಗೃಹ ಲಕ್ಷ ಹಣ ಇನ್ನೂ ಕೊಟ್ಟಿಲ್ಲ.
ಆರು ತಿಂಗಳಿಂದ ಅವರಿಗೆ ಹಣ ತಲುಪಿಸಿಲ್ಲ, ಐದು ವರ್ಷ ಸುಳ್ಳು ಹೇಳಿಯೇ ಸರ್ಕಾರ ನಡೆಸೋಕೆ ಹೊರಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಸಕ ಹರೀಶ್ ಪೂಂಜಾ ಮಾತನಾಡಿ, ರಾಜ್ಯಪಾಲರ ಭಾಷಣದಲ್ಲಿ ಕರಾವಳಿಯೇ ಇಲ್ಲ.ಕರಾವಳಿ ಇದೆಯೋ ಇಲ್ಲವೋ ಗೊತ್ತಿಲ್ಲ. ದಕ್ಷಿಣ ಕನ್ನಡ ಉಡುಪಿಯಲ್ಲಿ ಯಾವ ಅಭಿವೃದ್ಧಿಯಿಲ್ಲ. ಕರಾವಳಿ ಜಿಲ್ಲೆಗಳನ್ನು ಯಾಕೆ ನಿರ್ಲಕ್ಷ್ಯ ಮಾಡುತ್ತಿದ್ದೀರ? ಇದಕ್ಕೆ ರಾಜ್ಯ ಸರ್ಕಾರ ಉತ್ತರ ಕೊಡಬೇಕು ಎಂದರು. ರಾಜ್ಯಪಾಲರ ಭಾಷಣ ಕರಾವಳಿ ವಿರೋಧವಿದೆ. ಸಿಎಂಗೆ ನಾನು ಆಗ್ರಹ ಮಾಡುತ್ತೇವೆ. ಬಜೆಟ್ ನಲ್ಲಿ ದ.ಕ, ಉಡುಪಿ ಅವಿಭಾಜ್ಯ ಅಂಗ ಅದನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.