ಬೆಂಗಳೂರು, ಮಾ.4- ಗೋಬಿಗೆ ಬಳಸುವ ಬಣ್ಣ, ಬಟಾಣಿ, ಪ್ಲಾಸ್ಟಿಕ್ ಹಾಳೆ ಬಳಸಿ ತಯಾರಿಸುವ ಇಡ್ಲಿ, ಹೋಳಿಗೆ ಆಯ್ತು ಈಗ ಸಿಹಿ ತಿನಿಸು ತಯಾರಿಸಲು ಬಳಸುವ ಬೆಲ್ಲವೂ ಕಳಪೆಯಂತೆ….
ಆಹಾರ ಇಲಾಖೆ ಪರೀಕ್ಷೆಯಲ್ಲಿ ಬೆಲ್ಲದ ಗುಣಮಟ್ಟ ಕಳಪೆ ಎನ್ನುವುದು ಖಚಿತವಾಗುತ್ತಿದ್ದಂತೆ ಕಳಪೆ ಬೆಲ್ಲಕ್ಕೂ ಕಡಿವಾಣ ಹಾಕಬೇಕು ಎಂಬ ಒತ್ತಡ ಹೆಚ್ಚಾಗತೊಡಗಿದೆ. ಬೆಂಗಳೂರು ಸೇರಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಬೆಲ್ಲದ ಸ್ಯಾಂಪಲ್ ಪಡೆದ ಆಹಾರ ಇಲಾಖೆ ನಡೆಸಿದ ಸ್ಯಾಂಪಲ್ ಟೆಸ್ಟಿಂಗ್ ವೇಳೆ ಬೆಲ್ಲ ಕೂಡ ಕಳಪೆ ಎನ್ನುವುದು ತಿಳಿದುಬಂದಿದೆ.
ಸಿಹಿ ಪ್ರಿಯರ ಇಷ್ಟದ ಬೆಲ್ಲವೂ ಇದೀಗ ವಿಷವಾಗಿ ಪರಿಣಮಿಸಿದೆ. ಕಳೆದ ತಿಂಗಳು ಪೆಬ್ರವರಿಯಲ್ಲಿ ಬೆಲ್ಲದ ಸ್ಯಾಂಪಲ್‌್ಸಗಳನ್ನು ಪಡೆಯಲಾಗಿತ್ತು. ಈ ವರದಿಯಲ್ಲಿ ಬೆಲ್ಲ ಅಸುರಕ್ಷಿತವಾಗಿರೋ ಶಾಕಿಂಗ್ ಸುದ್ದಿ ಹೊರ ಬಂದಿದೆ. ಆಹಾರ ಇಲಾಖೆ ಬೆಲ್ಲದ ಒಟ್ಟು 600 ಕ್ಕೂ ಹೆಚ್ಚು ಸ್ಯಾಂಪಲ್‌್ಸಗಳಲ್ಲಿ 200 ಕ್ಕು ಹೆಚ್ಚು ಅನ್ ಸೇಫ್ ಎನ್ನುವ ಮಾಹಿತಿ ಬಂದಿದೆ. ೕ ಹಿಂದೆ ಅಲೆಮನೆಗಳಲ್ಲಿ ತಯಾರಿಸುತ್ತಿದ್ದ ಬೆಲ್ಲ ಉತ್ತಮವಾಗಿತ್ತು. ಇತ್ತಿಚೆಗೆ ಬೆಲ್ಲ ತಯಾರಿಸುವ ಘಟಕಗಳಲ್ಲಿ ಬೆಲ್ಲ ಮಾಡಲು ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡುತ್ತಿರುವುದರಿಂದ ಬೆಲ್ಲ ಕೂಡ ತಿನ್ನಲು ಯೋಗ್ಯವಲ್ಲ ಎನ್ನುವುದು ಗೊತ್ತಾಗಿದೆ.