Thursday, March 6, 2025
Homeರಾಜ್ಯವಿಧಾನಸಭೆ ಕಲಾಪಗಳ ನೇರಪ್ರಸಾರದಲ್ಲಿ ಪ್ರತಿಪಕ್ಷ ಸದಸ್ಯರನ್ನು ತೋರಿಸದೆ ಲೋಪವೆಸಗಿದ ಅಧಿಕಾರಿ ಅಮಾನತು

ವಿಧಾನಸಭೆ ಕಲಾಪಗಳ ನೇರಪ್ರಸಾರದಲ್ಲಿ ಪ್ರತಿಪಕ್ಷ ಸದಸ್ಯರನ್ನು ತೋರಿಸದೆ ಲೋಪವೆಸಗಿದ ಅಧಿಕಾರಿ ಅಮಾನತು

Officer suspended for not showing opposition members in live broadcast of assembly proceedings

ಬೆಂಗಳೂರು,ಮಾ.5- ವಿಧಾನಸಭೆ ಕಾರ್ಯ ಕಲಾಪಗಳ ನೇರಪ್ರಸಾರದಲ್ಲಿ ಪ್ರತಿಪಕ್ಷ ಸದಸ್ಯರ ತೋರಿಸದೆ ಲೋಪವೆಸಗಲಾಗುತ್ತಿದೆ ಎಂದು ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಸದನದ ಕಲಾಪದ ನೇರ ಪ್ರಸಾರದಲ್ಲಿ ವಿರೋಧ ಪಕ್ಷದ ಸದಸ್ಯರನ್ನು ತೋರಿಸದೇ, ಕೇವಲ ಆಡಳಿತ ಪಕ್ಷದವರನ್ನು ತೋರಿಸಲಾಗುತ್ತಿತ್ತು.

ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಕಲಾಪವನ್ನು ಸುಮಾರು 10 ನಿಮಿಷಗಳ ಕಾಲ ಮುಂದೂಡಲಾಗಿತ್ತು. ಭೋಜನ ವಿರಾಮದ ಬಳಿಕವೂ ಪ್ರತಿಪಕ್ಷ ನಾಯಕರ ಭಾಷಣ ಪ್ರಸಾರವಾಗಿರಲಿಲ್ಲ ಎಂದು ಹೇಳಿ ಪ್ರಸಾರದ ತುಣುಕು ತೋರಿಸಲಾಯಿತು ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಭಾಧ್ಯಕ್ಷ ಯು.ಟಿ.ಖಾದ‌ರ್ ಅವರು ಈ ಬಗ್ಗೆ ತನಿಖೆ ಕೈಗೊಂಡು ಸಂಬಂಧಪಟ್ಟ ಮುಖ್ಯಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದರು.

ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಅವರು, ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

ಇದಕ್ಕೆ ಬಿಜೆಪಿ ಸದಸ್ಯರು ಕಿರಿಯ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದೆ ಹಿರಿಯ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದಾದ ಕೆಲವು ನಿಮಿಷಗಳ ಬಳಿಕ ಸಮಸ್ಯೆ ಬಗೆಹರಿದಿತ್ತು ಪ್ರಸ್ತುತ ಇದರ ಬಗ್ಗೆ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

RELATED ARTICLES

Latest News