Hyderabad : ಪತ್ನಿ ಹಾಗೂ ಮಗ ಸೇರಿಕೊಂಡು ವೈದ್ಯರೊಬ್ಬರನ್ನು ಕೊಲೆ ಮಾಡಿರುವ ಘಟನೆ ಹೈದರಾಬಾದ್‌ನ ಬಂಡ್ಲಗುಡದಲ್ಲಿ ನಡೆದಿದೆ. ಮೃತ ವೈದ್ಯರನ್ನು ಡಾ. ಮಸಿಯುದ್ದೀನ್ ಎಂದು ಗುರುತಿಸಲಾಗಿದೆ.
ಅವರು ಇಲ್ಲಿನ ಕ್ರಿಸ್ಟಕ್ ಕಾಲೊನಿಯಲ್ಲಿ ಪತ್ನಿ ಶಬಾನಾ ಹಾಗೂ ಮಗ ಸಮೀರ್ ಜತೆ ವಾಸಿಸುತ್ತಿದ್ದರು. ಶಬಾನಾ ಹಾಗೂ ಸಮೀರ್ ಮಸಿಯುದ್ದೀನ್ ಅವರ ಕೈ-ಕಾಲುಗಳನ್ನು ಕಟ್ಟಿಹಾಕಿ ಕತ್ತು ಸೀಳುವ ಮೂಲಕ ಕೊಲೆ ಮಾಡಿದ್ದಾರೆ.ಕೊಲೆಯ ಬಗ್ಗೆ ಮಾಹಿತಿ ಪಡೆದ ಬಂಡ್ಲಗುಡ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.
ಅಧಿಕಾರಿಗಳು ಪ್ರಕರಣವನ್ನು ಎಲ್ಲಾ ಸಂಭಾವ್ಯ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪತಿ ಪತ್ನಿಯರ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು ಎನ್ನಲಾಗಿದೆ ಆದರೆ ಮಗ ಹಾಗೂ ಪತ್ನಿ ಕೊಲೆ ಮಾಡುವ ಹಂತಕ್ಕೆ ಹೋಗಿದ್ದಾರೆ ಎಂದರೆ ಇದರ ಹಿಂದೆ ಬೇರೆ ಉದ್ದೇಶ ಇರಬೇಕು ಎಂದು ಶಂಕಿಸಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.