Sunday, March 9, 2025
Homeರಾಜ್ಯಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸುವ ಶಿಫಾರಸುಗಳನ್ನೊಳಗೊಂಡ ವರದಿ ವಿಧಾನಸಭೆಯಲ್ಲಿ ಮಂಡನೆ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸುವ ಶಿಫಾರಸುಗಳನ್ನೊಳಗೊಂಡ ವರದಿ ವಿಧಾನಸಭೆಯಲ್ಲಿ ಮಂಡನೆ

Greater Bengaluru Authority Report presented in the Legislative Assembly

ಬೆಂಗಳೂರು, ಮಾ.5- ಬೆಂಗಳೂರಿನ ಆಡಳಿತ ಸುಧಾರಣೆಗಾಗಿ ಗರಿಷ್ಠ 7 ಪಾಲಿಕೆಗಳನ್ನಾಗಿ ಬಿಬಿಎಂಪಿಯನ್ನು ವಿಂಗಡಿಸುವುದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಸೇರಿದಂತೆ ಹಲವು ಮಹತ್ವದ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಶಿವಾಜಿನಗರದ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರ ಅಧ್ಯಕ್ಷತೆಯ 2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಪರಿಶೀಲಿಸಿ ವರದಿ ನೀಡಲು ರಚಿಸಲಾಗಿದ್ದ ಕರ್ನಾಟಕ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿ ವರದಿಯನ್ನು ಇಂದು ಮಂಡನೆ ಮಾಡಲಾಯಿತು.

ವರದಿಯಲ್ಲಿನ ಶಿಫಾರಸುಗಳ ಪ್ರಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯಿದೆ ಅಧಿಸೂಚನೆ ಜಾರಿಯಾದ ತಕ್ಷಣ ಅನುಷ್ಟಾನಕ್ಕೆ ಬರಲಿದೆ. ಗ್ರೇಟರ್ ಬೆಂಗಳೂರಿನಲ್ಲಿ 7 ಕ್ಕೂ ಮೀರದಂತೆ ಮಹಾನಗರ ಪಾಲಿಕೆಗಳಿರಬೇಕು ಎಂದು ಸಲಹೆ ನೀಡಲಾಗಿದೆ.

ಪ್ರತಿ ಪಾಲಿಕೆಯು ಕನಿಷ್ಠ 10 ಲಕ್ಷ ಲಕ್ಷ ಜನಸಂಖ್ಯೆ ಹೊಂದಿರಬೇಕು. ಜನಸಾಂದ್ರತೆ ಪ್ರತಿ ಕಿ.ಮೀ.ಗೆ 5 15 ಸಾವಿರಕ್ಕಿಂತ ಕಡಿಮೆ ಇರಬಾರದು. ಸ್ಥಳೀಯ ಆಡಳಿತದಿಂದ ವರ್ಷಕ್ಕೆ ಗರಿಷ್ಠ 300 ಕೋಟಿಗೂ ಹೆಚ್ಚಿನ ಆದಾಯ ಇರಬೇಕು. ಕೃಷಿಯೇತರ ಚಟುವಟಿಕೆಗಳ ಉದ್ಯೋಗ ಪ್ರಮಾಣ ಶೇ.50 ಕ್ಕಿಂತಲೂ ಕಡಿಮೆ ಇರಬಾರದು ಎಂದು ಉಲ್ಲೇಖಿಸಲಾಗಿದೆ.

ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳನ್ನು ಸೇರ್ಪಡೆ ಮಾಡಬಹುದು. ಮಹಾನಗರ ಪಾಲಿಕೆಗಳಿಗೆ ಮೇಯರ್ ಇರಲಿದ್ದು ಅವರ ಅಧಿಕಾರಾವಧಿ 5 ವರ್ಷ ಆಗಿರಲಿದೆ. ವಾರ್ಡ್ ವಿಂಗಡಣೆಯನ್ನು ಜನಸಂಖ್ಯೆ ಆಧಾರದ ಮೇಲೆ ಸರ್ಕಾರವೇ ನಿರ್ಧರಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯೊಳಗೆ ವಾರ್ಡ್ಗಳನ್ನು ಸೀಮಿತಗೊಳಿಸಬೇಕು. ಒಂದು ವಾರ್ಡನ್ನು 2 ವಿಧಾನಸಭಾ ವ್ಯಾಪ್ತಿಗೆ ಒಳಗೊಳ್ಳುವಂತೆ ವಿಂಗಡಣೆ ಮಾಡಬಾರದು ಎಂದು ಸಲಹೆ ನೀಡಲಾಗಿದೆ.

ಪ್ರಮುಖವಾಗಿ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಲಿದೆ. ಅದರ ಕೆಳಗೆ ಮಹಾನಗರ ಪಾಲಿಕೆಗಳಿರಲಿದ್ದು, ಮೇಯರ್, ಆಯುಕ್ತರು, ಜಂಟಿ ಆಯುಕ್ತರು. ಸ್ಥಾಯಿ ಸಮಿತಿ ಮತ್ತು ವಾರ್ಡ್ ಸಮಿತಿಗಳನ್ನು ರಚಿಸಲಾಗುತ್ತದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರು ಗ್ರೇಟರ್ ಬೆಂಗಳೂರಿನ ಉಪಾಧ್ಯಕ್ಷರಾಗಿರಲಿದ್ದಾರೆ.

ರಾಜ್ಯ ಸಚಿವ ಸಂಪುಟವನ್ನು ಪ್ರತಿನಿಧಿಸುವ ಒಬ್ಬರು ಎಕ್ಸ್ ಆಫಿಷಿಯೋ ಸದಸ್ಯರಾಗಿರಲಿದ್ದಾರೆ. ಗ್ರೇಟರ್ ಬೆಂಗಳೂರು ಮುಖ್ಯ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಲಿದ್ದು, ಮಹಾನಗರ ಪಾಲಿಕೆಗಳ ಮೇಯರ್‌ಗಳು, ಬಿಡಿಎ, ಬಿಡಬ್ಲ್ಯೂಎಸ್ಎಸ್ ಬಿ ಮತ್ತು ಪಾಲಿಕೆಗಳ ಆಯುಕ್ತರು ಸದಸ್ಯರುಗಳಾಗಿರಲಿದ್ದಾರೆ. ಜೊತೆಗೆ ಬಿಎಂಆರ್‌ಸಿಎಲ್, ಬೆಸ್ಕಾಂ, ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಒಳಪಡುವ ಕಂದಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಎಫ್‌ಡಿಗಳು, ಪೊಲೀಸ್ ಆಯುಕ್ತರು, ಬಿಎಂಎಲ್‌ಟಿಎ ಸಿಇಒ ಘನತ್ಯಾಜ್ಯ ನಿರ್ವಹಣಾ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ನಗರ ಯೋಜನೆಯ ಮುಖ್ಯ ಯೋಜನಾಧಿಕಾರಿ, ಗ್ರೇಟರ್ ಬೆಂಗಳೂರಿನ ಮುಖ್ಯ ಎಂಜಿನಿಯರ್, ರಾಜ್ಯ ಅಗ್ನಿ ಮತ್ತು ತುರ್ತು ಸೇವೆಗಳ ನಿರ್ದೇಶಕರು ಗ್ರೇಟರ್ ಬೆಂಗಳೂರಿನ ಸದಸ್ಯರಾಗಿರಲಿದ್ದಾರೆ.

ಜೊತೆಗೆ ಲೋಕಸಭೆ, ರಾಜ್ಯ ಸಭೆ, ವಿಧಾನಸಭೆ, ವಿಧಾನಪರಿಷತ್‌ ಚುನಾಯಿತ ಸದಸ್ಯರು, ಬಿಎಂಆರ್‌ಸಿಎಲ್, ಬೆಂಗಳೂರಿನ ಸಂಚಾರಿ ಪೊಲೀಸರು, ರೈಲ್ವೆ ಮೂಲ ಸೌಲಭ್ಯ ಅಭಿವೃದ್ಧಿ, ಕೆರೆ ಅಭಿವೃದ್ಧಿ, ಕೊಳಚೆ ಪ್ರದೇಶಗಳ ಅಭಿವೃದ್ಧಿ ಸೇರಿದಂತೆ ವಿವಿಧ ಏಜೆನ್ಸಿಗಳ ಮುಖ್ಯಸ್ಥರು ಗ್ರೇಟರ್ ಬೆಂಗಳೂರಿನ ಸದಸ್ಯರಾಗಿರಲಿದ್ದಾರೆ.

ಪ್ರಾಧಿಕಾರದ ಆಯುಕ್ತರ ಅಧಿಕಾರಾವಧಿಯನ್ನು ವರ್ಷಗಳಿಗೆ ನಿಗದಿ ಮಾಡಲು ಸಲಹೆ ನೀಡಲಾಗಿದ್ದು, ಪ್ರಾಧಿಕಾರ ಕನಿಷ್ಠ ತಿಂಗಳಿಗೊಮ್ಮೆ ಸಭೆ ಸೇರಬೇಕು ಎಂದು ಶಿಫಾರಸು ಮಾಡಲಾಗಿದೆ. ಅಲ್ಲದೆ ಗ್ರೇಟರ್ ಬೆಂಗಳೂರಿನ ವ್ಯಾಪ್ತಿಯಲ್ಲಿ ಆರ್ಥಿಕ ಸೇರಿದಂತೆ ವಿವಿಧ ಸಮಿತಿಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ವಲಯ ಸಮಿತಿಗಳು ಮತ್ತು ಪ್ರದೇಶ ಸಭೆಗಳನ್ನು ಕೈಬಿಡಬೇಕು. ಪ್ರತಿ ಪಾಲಿಕೆಯಲ್ಲೂ ವಾಡ್ ೯ಗಳ ಸಂಖ್ಯೆ 100ಕ್ಕಿಂತ ಹೆಚ್ಚು 200ಕ್ಕಿಂತ ಕಡಿಮೆ ಇರಬೇಕು. ಪ್ರತಿಯೊಬ್ಬ ಅಭ್ಯರ್ಥಿಯು ಒಂದು ವಾರ್ಡ್‌ ನಲ್ಲಿ ಮಾತ್ರ ಸ್ಪರ್ಧಿಸಬೇಕು. ಎರಡು ಕಡೆ ಸ್ಪರ್ಧಿಸಲು ಅವಕಾಶವಿಲ್ಲ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರನ್ನು ಬದಲಾವಣೆ ಮಾಡಿಕೊಳ್ಳುವಂತಿಲ್ಲ ಎಂದು ಸಲಹೆ ನೀಡಲಾಗಿದೆ.

ನಗರ ಪಾಲಿಕೆಯನ್ನು ವಿಸರ್ಜನೆ ಮಾಡುವ ಅಧಿಕಾರವನ್ನು ರಾಜ್ಯಸರ್ಕಾರವೇ ಹೊಂದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಉಪಕರವನ್ನು ಕೈಬಿಡುವುದು ಮತ್ತು ಮನರಂಜನೆ ಹಾಗೂ ವಿನೋದ ಕಾರ್ಯಕ್ರಮಗಳ ಮೇಲೆ ತೆರಿಗೆ ವಿಧಿಸುವುದು, ಆಸ್ತಿ ತೆರಿಗೆ ಪಾವತಿ ಮಾಡದೇ ಇದ್ದರೆ 2 ವರ್ಷಗಳ ಬಳಿಕ ಆಸ್ತಿ ಜಪ್ತಿ ಮಾಡುವುದು, ಆ ಬಳಿಕ ಒಂದು ವರ್ಷದಲ್ಲಿ ಆಸ್ತಿ ಮಾರಾಟಕ್ಕೆ ಕ್ರಮ ವಹಿಸಲು ಕಾಯಿದೆ ರೂಪಿಸುವಂತೆ ಸಲಹೆ ನೀಡಲಾಗಿದೆ.

RELATED ARTICLES

Latest News