ಬೆಂಗಳೂರು. ಮಾ.5 ಪಿಜ್ಜಾ ಬರ್ಗರ್ ತಿಂದರೆ ರೋಗ ಬರುತ್ತದೆ. ಮುದ್ದೆ ಉಂಡರೆ ನಿರೋಗಿಗಳಾಗಬಹುದು ಎಂದು ಶಾಸಕ ಸತೀಶ್ ರೆಡ್ಡಿ ಹೇಳಿದರು. ಬಿಳೇಕನಹಳ್ಳಿಯ ಮುಲ್ಕಿ ಸುಂದರಾಮ್ ಸಭಾಂಗಣದಲ್ಲಿ ದಶಮುಖ ಸಾಮಾಜಿಕ ಸೇವಾ ಟ್ರಸ್ಟ್ ಆಯೋಜಿಸಿದ್ದ ನಾಟಿ ಕೋಳಿ ಸಾರಿನಲ್ಲಿ ಮುದ್ದೆ ಉಣ್ಣುವ ಸ್ಪರ್ಧೆ ಹಾಗು ರಾಗಿ ಮಹತ್ವ ಸಾರುವ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಸೊಗಡಿನ ಶೈಲಿಯ ಊಟ ಮಾಡುವುದು ಎಂದರೆ ತುಂಬಾ ಇಷ್ಟ ಪಿಜ್ಜಾ, ಬರ್ಗರ್ ತಿಂದರೆ ರೋಗ ಬರುತ್ತದೆ. ಮುದ್ದೆ ತಿಂದ್ದವ ನಿರೋಗಿಯಾಗಿ ಬಾಳುತ್ತಾನೆ.ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮುದ್ದೆಯ ಮಹತ್ವ ಮತ್ತು ಅದರ ಆರೋಗ್ಯ ಮೇಲೆ ಬೀರುವ ಉತ್ತಮ ಪರಿಣಾಮದ ಕುರಿತು ಬೆಳಕು ಚೆಲ್ಲಿದರು ಎಂದು ಅವರು ತಿಳಿಸಿದರು.
ಮುದ್ದೆ ಆಹಾರ ಬಗ್ಗೆ ಬ್ರಾಂಡ್ ಅಂಬಾಸಿಡರ್ ಎಂದರೆ ಹೆಚ್.ಡಿ.ದೇವೇಗೌಡರು. ಇಂದಿನ ಯುವ ಸಮುದಾಯ ಆಧುನಿಕ ಆಹಾರ ತಿನ್ನುವ ಪದ್ದತಿ ಬಿಡಬೇಕು, ರಾಗಿ ಮುದ್ದೆ, ಬಸ್ಸಾರು, ಮೊಳಕೆ ಕಾಳುಗಳನ್ನು ತಿಂದರೆ ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಂತರಾಗಿ ಬಾಳಬಹುದು ಎಂದರು. ನಗರ ಪ್ರದೇಶದ ಜನರಿಗೆ ರಾಗಿಯ ಮಹತ್ವ, ಮುದ್ದೆ ಆರೋಗ್ಯಕರ ಅಂಶಗಳ ತಿಳಿಸಲು, ಅರಿವು ಮೂಡಿಸಲು ಮುದ್ದೆ ತಿನ್ನುವ ಸ್ಪರ್ಧೆ ಏರ್ಪಡಿಸಿವುದು ಸಂತೋಷದಾಯಕವಾದ ವಿಷಯವಾಗಿದೆ. ವಿದೇಶಿ ಆಹಾರ ಪದ್ದತಿ ತ್ಯಜಿಸಿ, ದೇಶಿಯ ಆಹಾರ ಪದ್ಧತಿ ಮುದ್ದೆ ತಿನ್ನಿ ಎಂದು ಅವರು ಕಿವಿಮಾತು ಹೇಳಿದರು.
ಅತಿ ಹೆಚ್ಚು ಮುದ್ದೆ ತಿಂದವರಿಗೆ ಪ್ರಥಮಾ ಬಹುಮಾನ 25ಸಾವಿರ, ದ್ವಿತೀಯ ಬಹುಮಾನ 15ಸಾವಿರ, ತೃತೀಯ ಬಹುಮಾನ 7500ಸಾವಿರ. ನೀಡಲಾಗುತ್ತಿದೆ. ಭಾಗ್ಯಲಕ್ಷ್ಮಿ ಮುರುಳಿ, ವಿಶ್ವ ಒಕ್ಕಲಿಗರ ಮಹಾ ವೇದಿಕೆ ಅಧ್ಯಕ್ಷ ವೈ.ಡಿ.ರವಿಶಂಕರ್, ದಶಮುಖ ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್ ಬೊಮ್ಮೇಗೌಡ, ಪದಾಧಿಕಾರಿಗಳಾದ ನಂದಕುಮಾರ್, ಎಂ.ಶಿವೇಗೌಡ, ಪ್ರಶಾಂತ್ ಗೌಡ, ರವಿಶಂಕರ್, ಕುಮಾರ್, ಹನುಮಂತ, ರಮೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.