Thursday, March 6, 2025
Homeರಾಷ್ಟ್ರೀಯ | Nationalರಾಜಸ್ಥಾನ : ಟ್ರಕ್‌ಗೆ ಕಾರು ಅಪ್ಪಳಿಸಿ ಆರು ಮಂದಿ ಸಾವು

ರಾಜಸ್ಥಾನ : ಟ್ರಕ್‌ಗೆ ಕಾರು ಅಪ್ಪಳಿಸಿ ಆರು ಮಂದಿ ಸಾವು

6 Ahmedabad residents die as car collides with truck in Rajasthan

ಜೈಪುರ,ಮಾ.6- ರಾಜಸ್ಥಾನದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ವೇಗವಾಗಿ ಚಲಿಸುತ್ತಿದ್ದ ಕಾರು ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಬು ರಸ್ತೆಯ ಕಿಡ್ರಾಲಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ ಎಂದು ಮೌಂಟ್ ಅಬು ಸರ್ಕಲ್ ಆಫೀಸರ್ ಗೋಮಾರಾಮ್ ತಿಳಿಸಿದ್ದಾರೆ.

ಮೃತರನ್ನು ನಾರಾಯಣ್ ಪ್ರಜಾಪತ್, ಅವರ ಪತ್ನಿ ಪೋಶಿ ದೇವಿ, ಮಗ ದುಶ್ಯಂತ್, ಚಾಲಕ ಕಾಲೂರಾಮ್ ಮತ್ತು ಇತರ ಇಬ್ಬರು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟವರೆಲ್ಲಾ ಅಹ್ಮದಾಬಾದ್ ನಿವಾಸಿಗಳಾಗಿದ್ದಾರೆ.

RELATED ARTICLES

Latest News