ಬೆಂಗಳೂರು,ಮಾ.6– ರಾಜ್ಯದಾದ್ಯಂತ ಚಿತ್ರಮಂದಿರಗಳಿಗೆ ಏಕರೂಪದ ಟಿಕೆಟ್ ದರವನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಜಾರಿ ಮಾಡಲಿದ್ದೇವೆ ಎಂದು ಗೃಹ ಸಚಿವ ಡಾ. ಪರಮೇಶ್ವರ್ ಅವರು ಹೇಳಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಸದಸ್ಯ ಗೋವಿಂದ್ ರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಚಿತ್ರ ಮಂದಿರಗಳಿಗೆ ಟಿಕೆಟ್ ದರವನ್ನು ಚಿತ್ರಮಂದಿರಗಳ ಮಾಲೀಕರೇ ನಿರ್ಧಾರ ಮಾಡುವ ಪದ್ಧತಿ ಇದೆ..
ಅವಶ್ಯಕ ಎನಿಸಿದಾಗ ಸಿದಾಗ ದರ ನಿಗದಿ ಮಾಡು ಅಧಿಕಾರ ಸರ್ಕಾರಕ್ಕೆ ಇದೆ. ಮುಂದಿನ ದಿನಗಳಲ್ಲಿ ಏಕರೂಪದ ಟಿಕೆಟ್ ದರವನ್ನು ನಿಗಧಿಪಡಿಸುವ ಸಂಬಂಧ ಸಂಬಂಧಪಟ್ಟವರ ಜೊತೆ ಚರ್ಚೆ ಮಾಡಲಿದ್ದೇವೆ ಎಂದು ತಿಳಿಸಿದರು.
ಮಲ್ಟಿಪ್ಲೆಕ್‌್ಸ ಚಿತ್ರ ಮಂದಿರಗಳು ಬಹು ಪರದೆಗಳನ್ನು ಹೊಂದಿವೆ.ಇದರಿಂದ ಕನ್ನಡ ಭಾಷಾ ಚಿತ್ರ ಗಳಿಗೆ ಯಾವುದೇ ತೊಂದರೆ ಆಗಿಲ್ಲ. ಕನ್ನಡ ಚಿತ್ರಗಳಿಗೆ ಚಿತ್ರ ಮಂದಿರ ಕೊರತೆ ಸರ್ಕಾರದ ಗಮನಕ್ಕೆ ಬಂದಿದೆ. ಅನ್ಯ ಭಾಷೆ ಸಿನಿಮಾಗಳಿಗೆ ಮಾತ್ರ ಟಿಕೆಟ್ ದರ ಹೆಚ್ಚಳ ಮಾಡುತ್ತಿರುವ ಬಗ್ಗೆ ದೂರು ಬಂದಿಲ್ಲ ಎಂದು ಪುನರುಚ್ಚರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಸದಸ್ಯ ಗೋವಿಂದ್ ರಾಜ್ ಅವರು, ಬೆಂಗಳೂರು ಚಿತ್ರ ಮಂದಿರದಿಂದ ಸರ್ಕಾರಕ್ಕೆ ಎಷ್ಟು ಆದಾಯ ಬಂದಿದೆ.ಏಕರೂಪ ಟೀಕೆ ದರವನ್ನು ನಿಗಧಿಪಡಿಸಲು ಸರ್ಕಾರಕ್ಕೆ ಯಾಕೆ ಸಾಧ್ಯವಿಲ್ಲಾ..?ಹಲವು ಚಿತ್ರ ಮಂದಿರಗಲನ್ನು ಬಂದ್ ಮಾಡಲಾಗಿದೆ ಇದಕ್ಕೆ ಸರ್ಕಾರದ ಕ್ರಮ ಏನು ತೆಗೆದುಕೊಂಡಿದೆ ಎಂದು ಪ್ರಶ್ನೆ ಮಾಡಿದರು.