Friday, March 7, 2025
Homeರಾಜ್ಯಕಾನೂನು ಸುವ್ಯವಸ್ಥೆ ಹಾಳು ಮಾಡಿದರೆ ಕಠಿಣ ಕ್ರಮ : ಗೃಹ ಸಚಿವ ಪರಮೇಶ್ವರ್‌

ಕಾನೂನು ಸುವ್ಯವಸ್ಥೆ ಹಾಳು ಮಾಡಿದರೆ ಕಠಿಣ ಕ್ರಮ : ಗೃಹ ಸಚಿವ ಪರಮೇಶ್ವರ್‌

Strict action if law and order is disrupted: Home Minister Parameshwara

ಬೆಂಗಳೂರು,ಮಾ.6– ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಲು ಯಾರಾದರೂ ಯತ್ನಿಸಿದರೆ ಅಂಥವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಕಠಿಣ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಜೆಡಿಎಸ್‌‍ನ ಗೋವಿಂದರಾಜ ಅವರ ಪ್ರಶ್ನೆಗೆ ಉ್ತತರಿಸಿದ ಸಚಿವರು ಕಾನೂನು ಸುವ್ಯವಸ್ಥೆ ಹಾಳು ಮಾಡಲು ರಾಜ್ಯ ಸರ್ಕಾರ ಅವಕಾಶ ಕೊಡುವುದಿಲ್ಲ. ಒಂದು ವೇಳೆ ಕಾನೂನು ಕೈಗೆತ್ತಿಕೊಂಡರೆ ಅಂಥವರ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಗುಡುಗಿದರು.

ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ರೌಡಿಗಳು, ಗೂಂಡಾಗಳು, ಸಮಾಜಘಾತುಕ ಶಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಯಾರೂ ಕೂಡ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವಂತಿಲ್ಲ ಎಂದು ಹೇಳಿದರು.

ಚಾಕು, ಚೂರಿ, ಲಾಂಗು ಹಿಡಿದುಕೊಂಡು ಓಡಾಡುವವರ ಮೇಲೆ ತೀವ್ರ ನಿಗಾವಹಿಸಲಾಗಿದೆ. ನಾಗರಿಕರಿಗೆ ತೊಂದರೆ ಕೊಟ್ಟು ಶಾಂತಿ ಸುವ್ಯವಸ್ಥೆ ಕದಡಿದರೆ ನಾವು ನೋಡಿಕೊಂಡು ಸುಮೆನೆ ಇರಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.

ರಾಜಾಧಾನಿ ಬೆಂಗಳೂರು ಸೇರಿದಂತೆ ಇತರೆ ಕಡೆ ವೀಲಿಂಗ್‌ ನಡೆಸುವವರ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ. ಈ ರೀತಿ ಮಾಡಿದರೆ ಸೂಚನೆ ಕೊಡುತ್ತಾರೆ. ಆ ವೇಳೆ ಕಾನೂನು ಉಲ್ಲಂಘನೆ ಮಾಡಿದರೆ ನಿಯಮದ ಪ್ರಕಾರ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

2023 ರಲ್ಲಿ ವೀಲಿಂಗ್‌ ಚೇಸ್‌‍ ನಡೆಸಿ 223 ಪ್ರಕರಣ ದಾಖಲಾಗಿದ್ದವು, ಇದರಲ್ಲಿ 136 ಮಂದಿಯನ್ನು ಬಂಧಿಸಲಾಗಿತ್ತು. 2024 ರಲ್ಲಿ 126 ಪ್ರಕರಣಗಳು ದಾಖಲಾಗಿ, 179 ಮಂದಿಯನ್ನು ಬಂಧಿಸಿಲಾಗಿತ್ತು. 2025ರಲ್ಲಿ 47 ಪ್ರರಕರಣಗಳು ದಾಖಲಾಗಿ, 37 ಜನರನ್ನು ಬಂಧಿಸಲಾಗಿದೆ.

ಇನ್ನು ಮಚ್ಚು, ಲಾಂಗ್‌, ಚೂರಿ ಹಿಡಿದುಕೊಂಡು ಓಡಾಡಿದವರ ಮೇಲೂ ಇಲಾಖೆ ಕ್ರಮ ಕೈಗೊಂಡಿದೆ. 2023ರಲ್ಲಿ 449 ಪ್ರಕರಣಗಳು ದಾಖಲಾಗಿ, 225 ಮಂದಿಯನ್ನು ಬಂಧಿಸಲಾಗಿತ್ತು. 2024ರಲ್ಲಿ 66 ಪ್ರಕರಣಗಳನ್ನು ದಾಖಲಿಸಲಾಗಿದೆ. 2025ರಲ್ಲಿ 65 ಪ್ರಕರಣಗಳು ದಾಖಲಾಗಿದ್ದು, ಹಾಗೂ 26 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಕಾನೂನು ಸುವ್ಯವಸ್ಥೆ ಹದೆಗೆಡಲು ಸರ್ಕಾರ ಅವಕಾಶ ಕೊಡುವುದಿಲ್ಲ. ಬೆಂಗಳೂರು ಸೇರಿದಂತೆ ಎಲ್ಲಾ ಕಡೆ ಕರ್ತವ್ಯ ನಿರತ ಪೊಲೀಸರಿಗೆ ಅಧುನಿಕ ಉಪಕರಣಗಳನ್ನು ನೀಡಲಾಗಿದೆ.
ಹೊಯ್ಸಳ ವಾಹನಗಳಿಗೆ ಆಧುನಿಕ ಉಪಕರಣಗಳು ರಿವಾಲ್‌ವಾರ್‌ ನೀಡಿದ್ದೇವೆ. 24×7 ಸೇವೆ ಕಲ್ಪಿಸಲಾಗಿದೆ. ಅಲ್ಲದೇ ಪಿಂಕ್‌ ಸಿಟಿ ವಾಹನಗಳನ್ನು ಮಹಿಳೆಯರಿಗೆ ನೀಡಿದ್ದೇವೆ. ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡಿದ್ದೇವೆ ಎಂದರು.

ನಾನು ಹಿಂದೆ ಗೃಹ ಸಚಿವನಾಗಿದ್ದಾಗ ದೆಹಲಿಯ ಮೆಟ್ರೋ ಪೊಲೀಸ್‌‍ ಅಧಿಕಾರಿ ಹೇಗೆ ಕೆಲಸ ಮಾಡುತ್ತಾರೆ ಎಂದು ಖುದ್ದು ವೀಕ್ಷಣೆ ಮಾಡಿದ್ದೆ. ಅದೇ ನಿಯಮವನ್ನು ಅಳವಡಿಸಿಕೊಂಡಿದ್ದೇವೆ.
ಕಂಟ್ರೋಲ್‌ ರೂಂ(ನಿಯಂತ್ರಣ ಕೊಠಡಿ)ಗೆ ಯಾರಾದರೂ ಸಹಾಯ ಬೇಡಿ ಕರೆ ಮಾಡಿದರೆ 9 ನಿಮಿಷಗಳಲ್ಲಿ ಘಟನಾಸ್ಥಳಕ್ಕೆ ತೆರೆಳುತ್ತಾರೆ.

ಅಗತ್ಯವಿದ್ದರೇ ಹೆಚ್ಚಿನ ಪಡೆಯನ್ನು ಕರೆದೊಯ್ಯುತ್ತಾರೆ ಬೆಂಗಳೂರು ನಗರದಲ್ಲಿ 7ಸಾವಿರ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದೇವೆ. ಎಐ ಬಳಸಿ ಇಂಟಲಿಜನ್ಸಿ ಬಳಸಿ ಮುಂದೆ ಯಾವತ್ತು ಕೂಡ ವ್ಯಕ್ತಿಯನ್ನು ಪತ್ತೆಹಚ್ಚಲು ಅನುಕೂಲವಾಗುತ್ತದೆ.

ಇಲಾಖೆಯಲ್ಲಿ ನಾವು ಪೊಲೀಸರಿಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದೇವೆ. ಗುಂಡಾ ಪ್ರಕರಣವು ಸಹ ನಿಯಂತ್ರಣಕ್ಕೆ ಬರುತ್ತದೆ. ಇಷ್ಟೇಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದರೂ, ಕೆಲವು ಬಾರಿ ಕಾನೂನು ಉಲ್ಲಂಘನೆ ಆಗ್ತುತದೆ. ಇನ್ನು ಹೆಚ್ಚಿನ ರೀತಿಯಲ್ಲಿ ಕ್ರಮ ಕೈಗೊಂಡು ನಿಯಂತ್ರಿಸಲಾಗುವುದು ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿ ಬಿಟ್ಟಿದೆ ಎಂದು ಆಗ್ಗಾಗೆ ಆರೋಪ ಕೇಳಿ ಬರುತ್ತಿದೆ ಎಂದರು.

ಕೊಲೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿವೆ ದುರಂತವೆಂದರೆ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಜನ ಜಾಗೃತಿ ಅಭಿಯಾನ ಮಾಡಿದರು. ಜನರು ವಂಚನೆಗೆ ಒಳಗಾಗುತ್ತಿದ್ದರು.

ವರ್ಟಿಕಲ್‌ ಡಿಜೆ ಹುದ್ದೆ ಸೃಷ್ಠಿಸಿ ಸೈಬರ್‌ ಅಪರಾಧ ಪ್ರಕರಣಗಳನ್ನು ತಡೆಯಲು ಗಂಭೀರ ಚಿಂತನೆ ಮಾಡಿದ್ದವೆ. 2025ರಲ್ಲಿ 10ಸಾವಿರ ಪ್ರಕರಣಗಳು ದಾಖಲಾಗಿದ್ದರೆ. 2024ರಲ್ಲಿ 21 ಸಾವಿರ ಪ್ರಕರಣಗಳು ದಾಖಲಾಗಿವೆ ಎಂದು ಪರಮೇಶ್ವರ್‌ ಹೇಳಿದರು.

ಆಗ ಸದಸ್ಯ ಭೋಜೆಗೌಡ ಅವರು ಮಧ್ಯರಾತ್ರಿ ಯಾವ ವಾಹನಗಳು ತಿರುಗಾಡುತ್ತವೆ ಎಂಬುವುದನ್ನು ಪತೆಹಚ್ಚಬೇಕು. ಇವರಲ್ಲಿ ಉತ್ತಮ ನಟರ ಮಕ್ಕಳು, ರಾಜಾಕಾರಣಿ ಮಕ್ಕಳು, ಹೈಫೈ ಕಾರುಗಳಲ್ಲಿ ತಿರುಗಾಡುತ್ತಾರೆ. ಅಧಿಕಾರಿಗಳು, ರಾಜಕಾರಣಿಗಳ ಮಕ್ಕಳು ಇದ್ದರೆ ಅಂಥವರ ಮಕ್ಕಳನ್ನು ಹಿಡಿದು ಒಳಗೆ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Latest News