Sunday, March 9, 2025
Homeರಾಜ್ಯಬಜೆಟ್‌ನಲ್ಲಿ ಗ್ಯಾರಂಟಿಗಳನ್ನು ಬಲವಾಗಿ ಸಮರ್ಥಿಸಿಕೊಂಡ ಸಿಎಂ, ಆರ್ಥಿಕ-ಸಾಮಾಜಿಕ ಹೂಡಿಕೆಗಳೆಂದು ಬಣ್ಣನೆ

ಬಜೆಟ್‌ನಲ್ಲಿ ಗ್ಯಾರಂಟಿಗಳನ್ನು ಬಲವಾಗಿ ಸಮರ್ಥಿಸಿಕೊಂಡ ಸಿಎಂ, ಆರ್ಥಿಕ-ಸಾಮಾಜಿಕ ಹೂಡಿಕೆಗಳೆಂದು ಬಣ್ಣನೆ

CM strongly defends guarantees in budget

ಬೆಂಗಳೂರು, ಮಾ.7- ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳನ್ನು ತಮ್ಮ ಬಜೆಟ್‌ನಲ್ಲಿ ಪ್ರಬಲವಾಗಿ ಸಮರ್ಥನೆ ಮಾಡಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಇವುಗಳು ಆರ್ಥಿಕ ಮತ್ತು ಸಾಮಾಜಿಕ ತತ್ವದಲ್ಲಿ ಮಾಡಿರುವ ಹೂಡಿಕೆಗಳು ಎಂದು ಹೇಳಿದ್ದಾರೆ.

ಪಂಚ ಗ್ಯಾರಂಟಿಗಳು ಸೇರಿದಂತೆ ನಮ್ಮ ಸರ್ಕಾರ ನೀಡಿರುವ ಕಲ್ಯಾಣ ಕಾರ್ಯಕ್ರಮಗಳು ಉಚಿತ ಕೊಡುಗೆಗಳಲ್ಲ ಎಂದು ಸಮರ್ಥಿಸಿಕೊಳ್ಳುವ ಮೂಲಕ ಗ್ಯಾರಂಟಿ ಯೋಜನೆಗಳು ಸದ್ಯಕ್ಕೆ ಸ್ಥಗಿತವಾಗುವುದಿಲ್ಲ ಎಂಬ ಸೂಚನೆಯನ್ನು ಸಹ ಸಿದ್ದರಾಮಯ್ಯ ನೀಡಿದ್ದಾರೆ.

ಇವು ಆರ್ಥಿಕ ಮತ್ತು ಸಾಮಾಜಿಕ ತತ್ವದಲ್ಲಿ ಮಾಡಿರುವ ಹೂಡಿಕೆಗಳು ಎಂದು ಆತ್ಮವಿಶ್ವಾಸದಿಂದ ಹೇಳುತ್ತೇನೆ ಎಂದು ಗ್ಯಾರಂಟಿಗಳನ್ನು ಟೀಕೆ ಮಾಡುತ್ತಿದ್ದ ವಿರೋಧ ಪಕ್ಷಗಳಿಗೆ ಟಾಂಗ್ ಕೊಟ್ಟರು.

ವಿದ್ವಾಂಸರಾಗಿದ್ದ ಮುಜಾಫರ್ ಅಸ್ಸಾದಿ ಅವರು ಗ್ಯಾರಂಟಿ ಯೋಜನೆಗಳ ಹಿಂದೆ ಬಡತನವಿದೆ, ನೋವಿದೆ, ಬಡತದನ ಹಿಂಸೆ ಇದೆ, ಮಹಿಳೆಯರ ನೋವಿದೆ. ಅಸಾಮಾನ್ಯ ಭಾರತದ ಪರಿಕಲ್ಪನೆ ಇದೆ ಎಂಬುದನ್ನು ಉಲ್ಲೇಖಿಸಿದ್ದಾರೆ.

ಜನರಲ್ಲಿ ಕೊಂಡುಕೊಳ್ಳುವ ಶಕ್ತಿ ಲಭಿಸಲಿ ಎಂಬ ಕಾರಣಕ್ಕಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಮಹಿಳಾ ಸಶಸ್ತ್ರೀಕರಣದ ಮೂಲಕ ನಾಡನ್ನು ಬಲಗೊಳಿಸುವುದು ಒಂದು ಕಡೆಯಾದರೆ, ಹಸಿರು ಆರ್ಥಿಕತೆ ಮೂಲಕ ಪರಿಸರದ ಬಿಕ್ಕಟ್ಟುಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತದೆ ಎಂದರು.

ಬಲಿಷ್ಠವಾದುದು ಮಾತ್ರ ಬದುಕುತ್ತದೆ ಎಂಬುದು ಮೃಗೀಯ ತತ್ವ, ಮನುಷ್ಯ ಸಮಾಜದಲ್ಲೂ ಈ ರೀತಿಯಾದರೆ ಅದನ್ನು ಸೋಶಿಷಯಲ್ ಡಾರ್ವಿನಿಸಂ ಎಂದು ಕರೆಯುತ್ತಾರೆ. ಮಾನವೀಯ ನೆಲೆಯಲ್ಲಿ ಸಮಸಮಾಜದ ಆಶಯದ ಮೂಲಕ ದೇಶವನ್ನು ಕಟ್ಟಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟಿದ್ದಾರೆ. ಬುದ್ಧ, ಬಸವ, ನಾರಾಯಣಗುರು ಮುಂತಾದ ದಾರ್ಶನಿಕರ ಕನಸುಗಳಿವೆ ಎಂದು ಹೇಳಿದ್ದಾರೆ.

ಲಭ್ಯ ಸಂಪನ್ಮೂಲವು ಸರ್ವರಿಗೂ ಅನ್ವಯವಾಗುವಂತೆ ನೋಡಿಕೊಳ್ಳುವುದು ಸರ್ಕಾರದ ಅದ್ಯಕರ್ತವ್ಯ. ಆರ್ಥಿಕ ಅಭಿವೃದ್ಧಿ ಹಾಗೂ ಜನ ಕಲ್ಯಾಣಗಳ ನಡುವೆ ಸಮತೋಲನ ಸಾಧಿಸಿ ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯ ಮೂಲಕ ಕರ್ನಾಟಕವನ್ನು ಮಾದರಿ ರಾಜ್ಯ ಮಾಡುವತ್ತ ಹೆಜ್ಜೆ ಇಟ್ಟಿದ್ದೇವೆ ಎಂದು ತಿಳಿಸಿದರು.

ರಾಜ್ಯದ ಪ್ರತಿ ಪ್ರಜೆಯ ಕನಸನ್ನು ಸಾಕಾರಗೊಳಿಸುವ ನಾಳಿನ ಬಗ್ಗೆ ಭರವಸೆ ಮೂಡಿಸುವ, ನುಡಿದಂತೆ ನಡೆಯುವ ನಮ್ಮ ವಾಗ್ದಾನವನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದರು.

ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಪರಿಸರಕ್ಕೆ ಹಾನಿಕರವಲ್ಲದ ಕೈಗಾರಿಕೆಗಳಿಗೆ ಉತ್ತೇಜನ ಕೊಡುತ್ತಿದ್ದೇವೆ. ಬಳಸಿದ ನೀರನ್ನು ಶುದ್ದೀಕರಿಸಿ ಸಶಕ್ತವಾಗಿ ಮರುಬಳಕೆ ಮಾಡುತ್ತಿರುವ ವಿಧಾನವೂ ಕೂಡ ಶ್ಲಾಘನೀಯವಾದುದು ಎಂದು ಪ್ರಶಂಸಿಸಿದ್ದಾರೆ.

2024-25ನೇ ಸಾಲಿಗೆ ಗ್ಯಾರಂಟಿ ಯೋಜನೆಗಳಿಗೆ 51,034 ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದ್ದೇವೆ. ಕಳೆದ ಎರಡು ಬಜೆಟ್‌ಗಳಲ್ಲಿ ನಾವು ಖಾತರಿಗಳನ್ನು ಜಿಎಸ್‌ಡಿಪಿ ಶೇಕಡಾ 3ರಷ್ಟು ವೇಚನಾಯುಕ್ತ ಹಣಕಾಸಿನ ಕೊರತೆ ಮಾನದಂಡ ಮತ್ತು ಸಾಲ-ಜಿಎಸ್‌ಡಿಪಿ ಅನುಪಾತವು ಶೇಕಡಾ 25ರೊಳಗೆ ನಿರ್ವಸಿಹಿದ್ದೇವೆ ಎಂಬುದನ್ನು ಗಮನಿಸಬೇಕು ಎಂದು ಹೇಳಿದ್ದಾರೆ.

RELATED ARTICLES

Latest News