ಬೆಳಗಾವಿ, ಮಾ.8- ಕೆಎಸ್‌ಆರ್‌ಟಿಸಿ ಮೆಕ್ಯಾನಿಕ್ ಒಬ್ಬರು ಬಸ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಡಿಪೋವೊಂದರಲ್ಲಿ ನಡೆದಿದೆ. ಬೆಳಗಾವಿಯ ಅಳ್ವಾವರ್ ಬಳಿ ಇರುವ ಡಿವೋನಲ್ಲಿ ಕೇಶವ ಕಮದೋಡಿ (57) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದ ಹಳೆ ಗಾಂಧಿನಗರದಲ್ಲಿ ವಾಸವಾಗಿದ್ದ ಅವರು ಈ ಡಿಪೋನಲ್ಲಿ ಬಸ್ ವಾಷಿಂಗ್ ಮತ್ತು ದುರಸ್ತಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅವರಿಗೆ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಲು ರಜೆ ಕೇಳಿದ್ದರು. ಆದರೆ, ಅಧಿಕಾರಿಗಳು ನೀಡಿರಲಿಲ್ಲ ಎಂದು ನೊಂದುಕೊಂಡಿದ್ದರು.
ನಿನ್ನೆ ಕೆಲಸಕ್ಕೆ ಹಾಜರಾಗಿ ರಾತ್ರಿ ಬಸ್‌ನೊಳಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೇಶವ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.
ಸ್ಥಳಕ್ಕೆ ಮಾರ್ಕೆಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.