Tuesday, March 11, 2025
Homeಅಂತಾರಾಷ್ಟ್ರೀಯ | Internationalಭಾರತ ಸುಂಕ ಕಡಿತಗೊಳಿಸಲು ನಿರ್ಧರಿಸಿದೆ : ಟ್ರಂಪ್

ಭಾರತ ಸುಂಕ ಕಡಿತಗೊಳಿಸಲು ನಿರ್ಧರಿಸಿದೆ : ಟ್ರಂಪ್

Trump says India agrees to cut tariffs after US announces reciprocal trade measures

ವಾಷಿಂಗ್ಟನ್,ಮಾ.08 : ಭಾರತ ಸುಂಕ ಕಡಿತಗೊಳಿಸಲು ನಿರ್ಧರಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಅಮೆರಿಕದ ಆಮದುಗಳ ಮೇಲೆ ಭಾರೀ ಸುಂಕ ವಿಧಿಸುತ್ತಿದ್ದ ಭಾರತವು, ಸುಂಕಗಳನ್ನು ಗಣನೀಯವಾಗಿ ಕಡಿತಗೊಳಿಸಲು ಒಪ್ಪಿಕೊಂಡಿದೆ. ಭಾರತ ನಮ್ಮ ಮೇಲೆ ಭಾರೀ ಸುಂಕ ವಿಧಿಸುತ್ತಿದೆ. ಭಾರತದಲ್ಲಿ ಏನನ್ನೂ ಮಾರಾಟ ಮಾಡಲು ಸಾಧ್ಯವಿಲ್ಲ, ಅಂದಹಾಗೆ, ಅವರು ಸುಂಕ ಕಡಿತಕ್ಕೆ ಒಪ್ಪಿಕೊಂಡಿದ್ದಾರೆ. ಅವರು ಈಗ ತಮ್ಮ ಸುಂಕವನ್ನು ಕಡಿಮೆ ಮಾಡಲು ಬಯಸುತ್ತಾರೆ ಎಂದಿದ್ದಾರೆ.

ಅಮೆರಿಕದಿಂದ ಆದಾಯವನ್ನು ಕಿತ್ತುಕೊಳ್ಳಲಾಗಿದೆ. ನಿಜಕ್ಕೂ ಅನ್ಯಾಯವಾಗಿದೆ. ಅದನ್ನು ನಾವು ತಡೆಯುತ್ತೇವೆ. ಪ್ರಸುತ್ತ ಸುಂಕುಗಳು ತಾತ್ಕಾಲಿಕ ಮತ್ತು ಸಣ್ಣವು, ಏಪ್ರಿಲ್ 2 ರಿಂದ ದೊಡ್ಡ ಬದಲಾವಣೆ ಎಂದು ಟ್ರಂಪ್ ತಿಳಿಸಿದ್ದಾರೆ.

ಎರಡೂ ಸರ್ಕಾರಗಳು ಬಹು-ವಲಯ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಚರ್ಚೆಗಳನ್ನು ಮುಂದುವರಿಸುವ ಪ್ರಕ್ರಿಯೆಯಲ್ಲಿವೆ. ಬಿಟಿಎ ಮೂಲಕ, ಸರಕು ಮತ್ತು ಸೇವಾ ವಲಯದಲ್ಲಿ ಭಾರತ-ಯುಎಸ್ ದ್ವಿಮುಖ ವ್ಯಾಪಾರವನ್ನು ಬಲಪಡಿಸುವುದು, ಮಾರುಕಟ್ಟೆ ಪ್ರದೇಶವನ್ನು ಹೆಚ್ಚಿಸುವುದು, ಸುಂಕ ಮತ್ತು ಸುಂಕ ರಹಿತ ಅಡೆತಡೆಗಳನ್ನು ಕಡಿಮೆ ಮಾಡುವುದು, ಎರಡೂ ದೇಶಗಳ ನಡುವೆ ಪೂರೈಕೆ ಸರಪಳಿ ಏಕೀಕರಣವನ್ನು ಬಿಗಿಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಮುಂದಿನ ತಿಂಗಳುಗಳಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುವ ಪ್ರಯತ್ನವನ್ನು ಟೆಸ್ನಾ ನಡೆಸುತ್ತಿದ್ದು, ಶೂನ್ಯ ಸುಂಕದ ನಿರೀಕ್ಷೆಯಲ್ಲಿದೆ. ಭಾರತ ಪ್ರಸ್ತುತ ಶೇಕಡ 110ರಷ್ಟು ಆಮದು ಸುಂಕವನ್ನು ವಾಹನಗಳ ಆಮದಿನ ಮೇಲೆ ಧಿಸುತ್ತಿದೆ. ಇದನ್ನು ಟೆಸ್ನಾ ಸಿಇಓ ಎಲಾನ್ ಮಸ್ಕ್ ವಿಶ್ವದಲ್ಲೇ ಅತ್ಯಧಿಕ ಸುಂಕ ಎಂದು ಖಂಡಿಸಿದ್ದರು.

ಭಾರೀ ಸುಂಕದ ಕಾರಣದಿಂದ ಈ ಮೊದಲು ವಿಶ್ವದಲ್ಲೇ ವಾಹನ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿರುವ ಟೆಸ್ಲಾ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ನಿರ್ಧಾರವನ್ನು ಕೈಬಿಟ್ಟಿತ್ತು. ಕೆನಡಾ, ಚೀನಾ, ಮೆಕ್ಸಿಕೋ ಮತ್ತು ಭಾರತದ ಮೇಲೆ ಏಪ್ರಿಲ್ 2ರಿಂದ ಜಾರಿಯಾಗುವಂತೆ ಸುಂಕ ಧಿಸಿರುವುದನ್ನು ಟ್ರಂಪ್ ಸಮರ್ಥಿಸಿಕೊಂಡಿದ್ದು, ನಮ್ಮ ದೇಶ ಪ್ರತಿಯೊಬ್ಬರೂ ಕಿತ್ತು ತಿಂದಿದ್ದಾರೆ. ನನ್ನ ಮೊದಲ ಅವಧಿಯಲ್ಲಿ ಇದು ನಿಂತಿತ್ತು. ಅವು ನ್ಯಾಯಸಮ್ಮತವಲ್ಲದ ಕಾರಣ ನಾವು ಅದನ್ನು ನಿಜವಾಗಿಯೂ ಸ್ಥಗಿತಗೊಳಿಸಲಿದ್ದೇವೆ. ಆರ್ಥಿಕ ದೃಷ್ಟಿಕೋನದಿಂದ ನಮ್ಮ ದೇಶವನ್ನು ಬಹುತೇಕ ವಿಶ್ವದ ಎಲ್ಲ ದೇಶಗಳು ಕಿತ್ತು ತಿನ್ನುತ್ತಿವೆ ಎಂದು ಆರೋಪಿಸಿದ್ದರು.

ಅಮೆರಿಕ ಜೊತೆಗಿನ ಯೋಜಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ಉಭಯ ದೇಶಗಳ ನಡುನ ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ದೇಶಾಂಗ ಸಚಿವಾಲಯದ ವಕ್ತಾರ ರಣಧೀ‌ರ್ ಜೈಸ್ವಾಲ್ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ಯಾರಿಫ್ ನೀತಿಯನ್ನು ಶತಾಯಗತಾಯ ಜಾರಿಗೆ ತರಲು ಸಂಕಲ್ಪ ತೊಟ್ಟಂತ್ತಿದ್ದಾರೆ. ಈವರೆಗೂ ಅವರು ತಾವು ಹೇಳಿದಂತೆಯೇ ಮಾಡುತ್ತಿದ್ದರು. ಕೆನಡಾ, ಮೆಕ್ಸಿಕೋ ಮತ್ತು ಚೀನಾ ಮೇಲೆ ಸುಂಕ ವಿಧಿಸಿದ್ದರು. ಭಾರತ, ಐರೋಪ್ಯ ಒಕ್ಕೂಟ ಹಾಗೂ ಇತರ ದೇಶಗಳ ಮೇಲೂ ಬ್ಯಾರಿಫ್ ಹಾಕುವುದಾಗಿ ಹೇಳಿದ್ದರು. ಭಾರತ ಹಾಗೂ ಇತರ ದೇಶಗಳ ಮೇಲೆ ಏಪ್ರಿಲ್ 2ರಿಂದ ರೆಸಿಪ್ರೋಕಲ್ ಟ್ಯಾಕ್ಸ್ ಅಥವಾ ಪ್ರತಿ ಸುಂಕ ವಿಧಿಸುವುದಾಗಿ ಅವರು ಘೋಷಿಸಿಬಿಟ್ಟಿದ್ದಾರೆ. ಏಪ್ರಿಲ್ 1ರಂದೇ ಈ ಕ್ರಮ ಜಾರಿಯಾಗಬೇಕಿತ್ತು. ಆದರೆ, ಅಂದು ಮೂರ್ಖರ ದಿನವಾದ್ದರಿಂದ ಏಪ್ರಿಲ್ 2ಕ್ಕೆ ಅದು ಆರಂಭವಾಗಬೇಕಿತ್ತು.

ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಮತ್ತು ವಿದೇಶಾಂಗ ನೀತಿ ನೇರಾನೇರ ತೋರುತ್ತದೆ. ನಮ್ಮ ಸರಕುಗಳಿಗೆ ಅವರೆಷ್ಟು ಟ್ಯಾಕ್ಸ್ ಹಾಕುತ್ತಾರೋ, ನಾವೂ ಕೂಡ ಅಷ್ಟೇ ತೆರಿಗೆಯನ್ನು ಅವರ ಸರಕುಗಳಿಗೆ ಹಾಕುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ಏಪ್ರಿಲ್ 2ರಿಂದ ಜಾರಿಗೆ ಬರುವ ಹೊಸ ಟ್ಯಾರಿಫ್ ಕ್ರಮದ ಬಗ್ಗೆ ಮಾತಿ ನೀಡಿದ್ದರು.

ಟ್ರಂಪ್ ಆಡಳಿತದಲ್ಲಿ ನಿಮ್ಮ ಉತ್ಪನ್ನವನ್ನು ಅಮೆರಿಕದಲ್ಲಿ ತಯಾರಿಸದೇ ಹೋದಲ್ಲಿ ಸುಂಕ ತೆರಬೇಕಾಗುತ್ತದೆ. ಕೆಲ ಪ್ರಕರಣಗಳಲ್ಲಿ ಹೆಚ್ಚು ಸುಂಕ ಕಟ್ಟಬೇಕಾಗುತ್ತದೆ. ದಶಕಗಳ ಕಾಲ ಬೇರೆ ದೇಶಗಳು ನಮ್ಮ ಮೇಲೆ ಸುಂಕ ಹೇರಿವೆ. ಅಂಥ ದೇಶಗಳ ವಿರುದ್ಧ ಸುಂಕ ವಿಧಿಸುವ ಸರದಿ ಈಗ ನಮ್ಮದು ಎಂದು ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಹಲವು ಅಧ್ಯಕ್ಷರು 4ರಿಂದ 8 ವರ್ಷ ಕಾಲ ಮಾಡಲು ಸಾಧ್ಯವಾಗದಿದ್ದನ್ನು ನಾನು ಕೇವಲ 43 ದಿನಗಳಲ್ಲಿ ಸಾಧಿಸಿದ್ದೇನೆ. ಅಷ್ಟೇ ಅಲ್ಲ ಇದು ಇನ್ನೂ ಆರಂಭ ಮಾತ್ರ ಎಂದು ಡೊನಾಲ್ಡ್ ಟ್ರಂಪ್ ಮುಂಬರುವ ದಿನಗಳಲ್ಲಿ ತಮ್ಮ ಆಡಳಿತದಲ್ಲಿ ಇನ್ನಷ್ಟು ನಿಷ್ಟುರ ನೀತಿಗಳು ಬರಲಿರುವ ಸುಳಿವನ್ನು ನೀಡಿದ್ದಾರೆ.

ಅಮೆರಿಕ ಎಷ್ಟು ಸುಂಕ ಧಿಸುತ್ತದೆ:
ಅಮೆರಿಕ ರೆಸಿಪ್ರೋಕಲ್ ಟ್ಯಾರಿಫ್ ಅಥವಾ ಪ್ರತಿ ಸುಂಕ ನೀತಿ ಅನುಸರಿಸುವ ಉದ್ದೇಶ ಅಮೆರಿಕದ ಉತ್ಪನ್ನಗಳಿಗೆ ಮಾರುಕಟ್ಟೆ ಹೆಚ್ಚಿಸುವುದು. ಹೆಚ್ಚಿನ ದೇಶಗಳು ಹೆಚ್ಚಿನ ಮಟ್ಟದ ಆಮದು ಸುಂಕ ವಿಧಿಸುತ್ತವೆ. ಆದರೆ ಅಮೆರಿಕ ಸರ್ಕಾರ ಕಡಿಮೆ ಸುಂಕ ವಿಧಿಸುತ್ತದೆ. ಈ ಕಾರಣಕ್ಕೆ ಅಮೆರಿಕದ ರಷ್ಟಿಗಿಂತ ಆಮದು ಹೆಚ್ಚಿದೆ. ಆಮೆರಿಕದಲ್ಲಿ ತಯಾರಾದ ಉತ್ಪನ್ನಗಳಿಗೆ ಮಾರುಕಟ್ಟೆ ಸಾಲದಾಗಿದೆ. ಅಮೆರಿಕದ ಕಂಪನಿಗಳು ಬೇರೆ ದೇಶಕ್ಕೆ ಹೋಗಿ ಅಲ್ಲಿ ತಯಾರಿಕೆ ಮಾಡಿ ಉತ್ಪನ್ನಗಳನ್ನು ಮಾರಬೇಕಾಗುತ್ತಿದೆ. ಇದರಿಂದ ತನಗೆ ನಿರೀಕ್ಷಿತ ಆದಾಯ ಬರುವುದಿಲ್ಲ. ಉದ್ಯೋಗ ಸೃಷ್ಟಿ ಆಗುವುದಿಲ್ಲ ಎನ್ನುವುದು ಅಮೆರಿಕದ ವಾದ.

ಈ ಮುಂಚೆ ಅಮೆರಿಕ ದೇಶವು ಕೆನಡಾ ಮತ್ತು ಮೆಕ್ಸಿಕೋದ ಬಹುತೇಕ ಉತ್ಪನ್ನಗಳಿಗೆ ತೆರಿಗೆಯನ್ನೇ ವಿಧಿಸುತ್ತಿರಲಿಲ್ಲ, ಈಗ ಶೇ.25ರಷ್ಟು ತೆರಿಗೆ ಹಾಕಲು ನಿರ್ಧರಿಸಿದೆ. ಭಾರತದ ಸರಕುಗಳ ಮೇಲೆ ಅಮೆರಿಕ ಶೇ.5ರಿಂದ 10ರಷ್ಟು ತೆರಿಗೆ ಹಾಕುತ್ತದೆ. ಆದರೆ ಭಾರತವು ಅಮೆರಿಕದ ಉತ್ಪನ್ನಗಳಿಗೆ ಹಾಕುವ ಸುಂಕವು ಶೇ.20ರಿಂದ 40ರ ಶ್ರೇಣಿಯಲ್ಲಿದೆ. ಕೆಲ ಉತ್ಪನ್ನಗಳಿಗೆ ನೂರಕ್ಕೆ ನೂರು ಸುಂಕ ಹಾಕಲಾಗುತ್ತಿದೆ. ಚೀನಾ ಕೂಡ ದೊಡ್ಡ ಪ್ರಮಾಣದಲ್ಲಿ ಅಮೆರಿಕದ ಉತ್ಪನ್ನಗಳಿಗೆ ಸುಂಕ ವಿಧಿಸುತ್ತದೆ. ಹೀಗಾಗಿಯೇ ಡೊನಾಲ್ಡ್ ಟ್ರಂಪ್ ಅವರು ಭಾರತ, ಚೀನಾದ ಸುಂಕದ ಬಗ್ಗೆ ಬಹಳ ನಿಷ್ಟುರವಾಗಿ ಮಾತನಾಡುತ್ತಿದ್ದರು.

RELATED ARTICLES

Latest News