ಬೆಳ್ತಂಗಡಿ, ಮಾ.8- ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಫೆ.8ರಂದು ನಡೆದ ಹಿಂದೂ ಸಮಾಜ ರಕ್ಷಣಾ ಕಾರ್ಯಕ್ರಮದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ದೇವಾಲಯಗಳ ಬಗ್ಗೆ ಜನರಲ್ಲಿ ಅನುಮಾನ ಹುಟ್ಟಿಸುವ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹೇಳಿಕೆಗಳನ್ನು ನೀಡಿದ್ದಾರೆಂದು ದೂರು ದಾಖಲಾಗಿದ್ದು, ಠಾಣೆಯಲ್ಲಿ ಎಫ್‌ಐ ಆರ್ ದಾಖಲಾಗಿದೆ.
ಒಬ್ಬ ಅಧರ್ಮಿಯಿಂದ ಧರ್ಮ ನಾಶವಾಗುತ್ತಿದೆ, ಇಂದು ಧಾರ್ಮಿಕ ಸ್ಥಳಗಳಿಗೆ ಮತ್ತು ಹಿಂದೂ ಸಮಾಜಕ್ಕೆ ಅಧರ್ಮಿಗಳ ಪ್ರಭಾವ ಹೆಚ್ಚಾಗಿದೆ. ನಾವು ನಮ್ಮ ಸಂಪ್ರದಾಯವನ್ನು ಉಳಿಸಿಕೊಳ್ಳಬೇಕಾದ ಸಮಯ ಬಂದಿದೆ. ಅಧರ್ಮಿಯರ ದುಡ್ಡು ತಂದು ಧರ್ಮಸ್ಥಳ ಮಾತ್ರವಲ್ಲ, ಉಡುಪಿ ದೇವಾಲಯಗಳು ಇರಿಸಿಕೊಳ್ತಿದ್ದಾರೆ ಎಂಬ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.