ದುಬೈ,ಮಾ.8- ಶತಕೋಟಿ ಭಾರತೀಯರು ಚಾತಕ ಪಕ್ಷಯಂತೆ ಎದುರು ನೋಡುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಪಿ- 2025 ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಫೈನಲ್ ಪಂದ್ಯ ನಾಳೆ ನಡೆಯಲಿದೆ. ಎರಡು ತಂಡಗಳು ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಸಲಿದ್ದು, ಫೈನಲ್ ಪಂದ್ಯವು ನಾಳೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಈ ಅಂತಿಮ ಪಂದ್ಯದಲ್ಲಿ ಭಾರತ ಗೆದ್ದು ಬರಲಿ ಎಂದು ಕ್ರೀಡಾಭಿಮಾನಿಗಳು ದೇಶಾದ್ಯಂತ ಹೋಮ-ಹವನ ಪೂಜೆಪುನಸ್ಕಾರದಲ್ಲಿ ತೊಡಗಿದ್ದಾರೆ. ವಿಶೇಷತೆ ಎಂದರೆ ಉಭಯ ತಂಡಗಳು 25 ವರ್ಷಗಳ ಬಳಿಕ ಐಸಿಸಿ ಚಾಂಪಿಯನ್‌್ಸ ಟ್ರೋಫಿ ಫೈನಲ್ನಲ್ಲಿ ಎದುರಾಗುತ್ತಿರುವುದು. ಅಜೇಯವಾಗಿ ಫೈನಲ್ ಪ್ರವೇಶಿಸಿರುವ ರೋಹಿತ್ ಶರ್ಮ ಪಡೆ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗೋಚರಿಸಿದರಾದರೂ ಇತಿಹಾಸವನ್ನೊಮೆ ಕೆದಕಿದರೆ ಐಸಿಸಿ ಪ್ರಶಸ್ತಿ ಸುತ್ತಿನಲ್ಲಿ ಕೀಸ್ ವಿರುದ್ಧ ಭಾರತ ಇದುವರೆಗೂ ಗೆದ್ದಿಲ್ಲ.
ಹಾಲಿ ಚಾಂಪಿಯನ್ ಆಗಿದ್ದ ಭಾರತ ತಂಡ 2017ರ ಆವೃತ್ತಿಯಲ್ಲಿಯೂ ಫೈನಲ್ ಪ್ರವೇಶಿಸಿತ್ತು. ಆದರೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಲೀಗ್ ಹಂತದಲ್ಲಿ ಪಾಕಿಸ್ತಾನಕ್ಕೆ 8 ವಿಕೆಟ್ ಸೋಲುಣಿಸಿದ್ದ ಭಾರತ ಫೈನಲ್ನಲ್ಲಿ ಶರಣಾಯಿತು. ಅದು ಕೂಡ 180 ರನ್ ಅಂತರದ ಸೋಲು! ವಿರಾಟ್ ಕೊಹ್ಲಿ ಭಾರತ ತಂಡದ ನಾಯಕನಾಗಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದ ವೇಳೆ ಹೆನ್ರಿ ಗಾಯಗೊಂಡಿದ್ದರು. ಆದಾಗ್ಯೂ ನ್ಯೂಜಿಲೆಂಡ್ ಆ ಪಂದ್ಯವನ್ನು 50 ರನ್ಗಳಿಂದ ಗೆದ್ದು ಫೈನಲ್ ಪ್ರವೇಶಿಸಿತ್ತು.
ನ್ಯೂಜಿಲೆಂಡ್ ಗೆ ಆರಂಭದಲ್ಲೇ ಆಘಾತ!
2025ರ ಐಸಿಸಿ ಚಾಂಪಿಯನ್‌್ಸ ಟ್ರೋಫಿ ಫೈನಲ್ ಪಂದ್ಯಕ್ಕೆ ಮುನ್ನ ನ್ಯೂಜಿಲೆಂಡ್ ತಂಡಕ್ಕೆ ಆಘಾತ ಎದುರಾಗಿದ್ದು, ಪ್ರಮುಖ ವೇಗಿ ಮ್ಯಾಟ್ ಹೆನ್ರಿ ಭುಜದ ಗಾಯದಿಂದಾಗಿ ಫೈನಲ್ನಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.
ಹೆನ್ರಿ ಮೈದಾನದಲ್ಲಿ ಬಿದ್ದಾಗ ಅವರ ಭುಜಕ್ಕೆ ಪೆಟಾಗಿತ್ತು. ನಂತರ ಅವರು ಸ್ವಲ್ಪ ಅಸ್ವಸ್ಥರಾಗಿದ್ದರು. ಆದರೆ ಅವರು ಮತ್ತೆ ಬೌಲಿಂಗ್ ಮಾಡಲು ಮರಳಿದ್ದು ನಮಗೆ ಸಂತಸ ತಂದಿದೆ ಎಂದು ನ್ಯೂಜಿಲೆಂಡ್ ಮುಖ್ಯ ಕೋಚ್ ಗ್ಯಾರಿ ಸ್ಟೀಡ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಹೆನ್ರಿ ಫೈನಲ್ನ್ನಲ್ಲಿ ಆಡಲು ನಾವು ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆ. ಈ ಹಂತದಲ್ಲಿ ಅವರ ಗಾಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಭುಜಕ್ಕೆ ಪೆಟ್ಟಾದಾಗಿನಿಂದ ಹೆನ್ರಿ ನೋವಿನಲ್ಲಿದ್ದಾರೆ. ಆದರೆ, ಅವರು ಶೀಘ್ರವೇ ಚೇತರಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ.
ಈ ಚಾಂಪಿಯನ್‌್ಸ ಟ್ರೋಫಿಯಲ್ಲಿ ಹೆನ್ರಿ ನ್ಯೂಜಿಲೆಂಡ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ನಾಲ್ಕು ಪಂದ್ಯಗಳಲ್ಲಿ 10 ವಿಕೆಟ್ಗಳನ್ನು ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಮಾರ್ಚ್ 2ರಂದು ಭಾರತ ವಿರುದ್ಧದ ಪಂದ್ಯದಲ್ಲಿ ಹೆನ್ರಿ 42 ರನ್ಗಳಿಗೆ 5 ವಿಕೆಟ್ಗಳನ್ನು ಪಡೆದು ಮಿಂಚಿದ್ದರು.
ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಅವರಂತಹ ಬ್ಯಾಟ್ಸಮೆನ್ಗಳ ವಿಕೆಟ್ ಪಡೆಯುವ ಮೂಲಕ ಹೆನ್ರಿ ತಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಆದರೆ ಹೆನ್ರಿ ಅವರ ಅಮೋಘ ಪ್ರದರ್ಶನ ವ್ಯರ್ಥವಾಗಿತ್ತು. ಭಾರತ ತಂಡ ಆ ಪಂದ್ಯವನ್ನು 44 ರನ್ಗಳಿಂದ ಗೆದ್ದಿತ್ತು.
ಭಾರತದ ಪರ ಸ್ಪಿನ್ನರ್ ವರುಣ್ ಚಕ್ರವರ್ತಿ 5 ಆ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟ್ ಮಾಡಿ 249/9 ರನ್ ಗಳಿಸಿತ್ತು. ಶ್ರೇಯಸ್ ಅಯ್ಯರ್ 79 ರನ್ ಗಳಿಸಿ ಭಾರತದ ಸ್ಕೋರ್ 250ರ ಗಡಿ ದಾಟಲು ನೆರವಾದರು. ಪಂದ್ಯದಲ್ಲಿ 8 ಓವರ್ ಬೌಲಿಂಗ್ ಮಾಡಿದ ಹೆನ್ರಿ 42 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು.
ನಾಳೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಹೆನ್ರಿ ಆಡುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಒತ್ತಡದ ಪರಿಸ್ಥಿತಿಯಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೆನ್ರಿಗೆ ಇದೆ.ಭಾರತ ಮತ್ತು ನ್ಯೂಜಿಲೆಂಡ್ ನಡುನ ಫೈನಲ್ ಪಂದ್ಯ ರೋಮಾಂಚಕವಾಗುವ ನಿರೀಕ್ಷೆುದೆ. ಚಾಂಪಿಯನ್ಸ್ ಟ್ರೋಫಿಯ ಪ್ರತಿಷ್ಠಿತ ಪ್ರಶಸ್ತಿಯನ್ನು ಎತ್ತಿ ಹಿಡಿಯಲು ಎರಡೂ ತಂಡಗಳು ಸರ್ವಶಕ್ತಿಯನ್ನು ಒಡ್ಡಲಿವೆ.
2000 (ರನ್ನರ್ ಅಪ್):
ಕೀನ್ಯಾದಲ್ಲಿ ನಡೆದಿದ್ದ ಈ ಆವೃತ್ತಿಯಲ್ಲಿ ಗಂಗೂಲಿ ಸಾರಥ್ಯದ ಭಾರತ ತಂಡ ಅಮೋಘ ಪ್ರದರ್ಶನದೊಂದಿಗೆ ಫೈನಲ್ಗೆ ಲಗ್ಗೆ ಇರಿಸಿತ್ತು. ಆದರೆ ಅಲ್ಲಿ ನ್ಯೂಜಿಲೆಂಡಿಗೆ ಶರಣಾಗಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಫೈನಲ್ ಪಂದ್ಯದಲ್ಲಿ ಗಂಗೂಲಿ (117)-ತೆಂಡೂಲ್ಕರ್ (69) ಜೋಡಿಯ ಅಮೋಘ ಆರಂಭದ ನೆರನಿಂದ ಭಾರತ 6ಕ್ಕೆ 264 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಕಿವೀಸ್ ಕ್ರಿಸ್ ಕೇರ್ನ್‌್ಸ ಅವರ ಅಜೇಯ ಶತಕ (102)ದ ನೆರನಿಂದ 49.4 ಓವರ್ಗಳಲ್ಲಿ 6ಕ್ಕೆ 265 ರನ್ ಪೇರಿಸಿ ಗೆದ್ದಿತು. ಇದು ನ್ಯೂಜಿಲೆಂಡ್ ಗೆದ್ದ ಮೊದಲ ಐಸಿಸಿ ಟ್ರೋಫಿಯಾಗಿತ್ತು.
ಲಂಕಾ ಜತೆ ಜಂಟಿ ವಿಜೇತ:
ಮೂರನೇ ಆವೃತ್ತಿಯ ಆತಿಥ್ಯ ಭಾರತ ವಹಿಸಬೇಕಿತ್ತು, ಆದರೆ ಕೇಂದ್ರ ಸರಕಾರ ತೆರಿಗೆ ವಿನಾಯ್ತಿ ನೀಡದ ಕಾರಣ ಆತಿಥ್ಯವನ್ನು ಶ್ರೀಲಂಕಾಕ್ಕೆ ನೀಡಲಾಯಿತು. ಭಾರತ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿತ್ತು. ಆದರೆ ಭಾರತ-ಶ್ರೀಲಂಕಾ ನಡುನ ಫೈನಲ್ ಪಂದ್ಯ ಮಳೆಯಿಂದಾಗಿ ಜಂಟಿ ವಿಜೇತರೆಂದು ಘೋಷಿಸಬೇಕಾಯಿತು. ಶ್ರೀಲಂಕಾ 7 ವಿಕೆಟಿಗೆ 222 ರನ್ ಮಾಡಿದರೆ, ಭಾರತದ ಚೇಸಿಂಗ್ ವೇಳೆ ಒಂದು ಕೆಟ್ಗೆ 38 ರನ್ ಮಾಡಿತ್ತು.
2004ರಲ್ಲಿ ಇಂಗ್ಲೆಂಡ್ ಆತಿಥ್ಯದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು. ಬದ್ಧ ಎದುರಾಳಿ ಪಾಕಿಸ್ತಾನ ರುದ್ಧವೂ ಸೋಲು ಕಂಡು ಗ್ರೂಪ್ ಹಂತದಲ್ಲೇ ನಿರ್ಗಮಿಸಿತ್ತು.
ಭಾರತದ ಆತಿಥ್ಯದಲ್ಲೇ ನಡೆಸಿದ್ದ ಈ ಟೂರ್ನಿಯಲ್ಲಿ ಭಾರತ ತಂಡ ಲೀಗ್ ಹಂತದಲ್ಲೇ ನಿರ್ಗಮಿಸಿತ್ತು. ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಜತೆ ಎ ಗುಂಪಿನಲ್ಲಿದ್ದ ಭಾರತ ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಮಾತ್ರ ಸಾಧಿಸಿತ್ತು. ಏಕೈಕ ಗೆಲುವು ಇಂಗ್ಲೆಂಡ್ ರುದ್ಧ ದಾಖಲಾಗಿತ್ತು.
ಚೊಚ್ಚಲ ಆವೃತ್ತಿಯ ಚಾಂಪಿಯನ್ ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆದ ಈ ಟೂರ್ನಿಯಲ್ಲಿಯೂ ಭಾರತ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಫಲವಾಗಿತ್ತು. ಏಕೈಕ ಗೆಲುನೊಂದಿಗೆ ಗ್ರೂಪ್ ಹಂತದಲ್ಲೇ ನಿರ್ಗಮಿಸಿತ್ತು. ಪಾಕ್ ವಿರುದ್ಧ 54 ರನ್ ಸೋಲು ಎದುರಾಗಿತ್ತು.
2013ರಲ್ಲಿ ಚಾಂಪಿಯನ್:
2011ರ ಏಕದಿನ ವಿಶ್ವಕಪ್ ಗೆಲುನ 2 ವರ್ಷಗಳ ಬಳಿಕ ನಡೆದಿದ್ದ ಈ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಭಾರತ ಅತ್ಯಂತ ಆಕ್ರಮಣಕಾರಿ ಆಟವಾಡಿ ಅಜೇಯವಾಗಿ ಫೈನಲಿಗೆ ಲಗ್ಗೆ ಇರಿಸಿತು. ಬರ್ನಿಂಗ್ಹ್ಯಾಮ್ನಲ್ಲಿ ನಡೆದಿದ್ದ ಫೈನಲ್ ಪಂದ್ಯಕ್ಕೆ ಭಾರೀ ಮಳೆ ಸುರಿದುದರಿಂದ ಈ ಪಂದ್ಯವನ್ನು 20 ಓವರ್ಗ್ಗಳಿಗೆ ಇಳಿಸಲಾಗಿತ್ತು. ಭಾರತ 5 ರನ್ಗಳಿಂದ ಇಂಗ್ಲೆಂಡನ್ನು ಸೋಲಿಸಿ ಚಾಂಪಿಯನ್ ಎನಿಸಿಕೊಂಡಿತು. ಇದು ಭಾರತ ಪೂರ್ಣ ಪ್ರಮಾಣದಲ್ಲಿ ಗೆದ್ದ ಮೊದಲ ಟ್ರೋಫಿಯಾಗಿತ್ತು.