Monday, March 10, 2025
Homeರಾಷ್ಟ್ರೀಯ | Nationalತಲೆಮರೆಸಿಕೊಂಡಿದ್ದ ಉಗ್ರನ ಸೇರೆ ಹಿಡಿದ ಯುಪಿ ಪೊಲೀಸರು

ತಲೆಮರೆಸಿಕೊಂಡಿದ್ದ ಉಗ್ರನ ಸೇರೆ ಹಿಡಿದ ಯುಪಿ ಪೊಲೀಸರು

UP Police Arrests Hizbul Mujahideen Terrorist

ಮೊರಾದಾಬಾದ್, ಮಾ.9-ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಕತ್ತರ್ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಹಿಜ್ಜುಲ್ ಮುಜಾಹಿದ್ದೀನ್ ಭಯೋತ್ಪಾದಕನನ್ನು ಬಂಧಿಸಿದ್ದಾರೆ.

ಕಳೆದ 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಗ್ರನನ್ನು ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಭಯೋತ್ಪಾದಕನನ್ನು ಉಲ್ಫತ್ ಹುಸೇನ್ ಎಂದು ಗುರುತಿಸಲಾಗಿದ್ದು, ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

2002ರಲ್ಲಿ ಇತರ ನಾಲ್ವರೊಂದಿಗೆ ಆತನನ್ನು ಬಂಧಿಸಿ 2008ರಲ್ಲಿ ಬಿಡುಗಡೆ ಮಾಡಲಾಗಿತ್ತು ಎಂದು ಎಸ್ಪಿ ರಣವಿಜಯ್ ಸಿಂಗ್ ತಿಳಿಸಿದ್ದಾರೆ. ಎಟಿಎಸ್‌ ಸಹರಾನ್ಸುರ ಮತ್ತು ಕತ್ತರ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ, ಹಿಜ್ಜುಲ್ ಮುಜಾಹಿದ್ದೀನ್‌ಗೆ ಸೇರಿದ ಭಯೋತ್ಪಾದಕ ಉಲ್ಫತ್ ಹುಸೇನ್ ಅವರನ್ನು ನಿನ್ನೆ ಪೂಂಚ್ ಜಿಲ್ಲೆಯಿಂದ ಬಂಧಿಸಲಾಯಿತು ಮತ್ತು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

2002ರಲ್ಲಿ ಇತರ ನಾಲ್ವರೊಂದಿಗೆ ಆತನನ್ನು ಬಂಧಿಸಲಾಗಿದ್ದು, ಆತನಿಂದ ಭಾರಿ ಪ್ರಮಾಣದ ಡಿಟೋನೇಟರ್‌ಗಳು, ಸ್ಪೋಟಕಗಳು, ಪಿಸ್ತೂಲ್‌ ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದಲ್ಲದೆ, ಹುಸೇನ್ ಅವರನ್ನು 2008 ರಲ್ಲಿ ರಿಮಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ; ಆದಾಗ್ಯೂ, ಅವರ ವಿರುದ್ಧ ಸಮನ್ಸ್ ಮತ್ತು ವಾರಂಟ್‌ಗಳನ್ನು ಹೊರಡಿಸಲಾಗಿದ್ದರೂ ಆತ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ.

RELATED ARTICLES

Latest News