Monday, March 10, 2025
Homeಬೆಂಗಳೂರುಬ್ರಾಂಡ್ ಬೆಂಗಳೂರು ಎಂದು ಗಾರ್ಬೇಜ್ ಸಿಟಿ ಮಾಡಿದ ಕಾಂಗ್ರೆಸ್ : ಜೆಡಿಎಸ್

ಬ್ರಾಂಡ್ ಬೆಂಗಳೂರು ಎಂದು ಗಾರ್ಬೇಜ್ ಸಿಟಿ ಮಾಡಿದ ಕಾಂಗ್ರೆಸ್ : ಜೆಡಿಎಸ್

Congress has turned Bangalore into a garbage city: JDS

ಬೆಂಗಳೂರು, ಮಾ.10- ಬ್ರಾಂಡ್ ಬೆಂಗಳೂರು ಎಂದು ಗಾರ್ಬೇಜ್ ಸಿಟಿ ಮಾಡಿದ ಕಾಂಗ್ರೆಸ್ ಎಂದು ಜೆಡಿಎಸ್‌ ಆರೋಪಿಸಿದೆ. ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಬೆಂಗಳೂರು ಎಂದರೆ ಗಾರ್ಡನ್ ಸಿಟಿ ಎಂದೇ ವಿಶ್ವವಿಖ್ಯಾತಿ ಪಡೆದಿದೆ. ಆದರೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಗಾರ್ಡನ್ ಸಿಟಿಯನ್ನು ಗಾರ್ಬೇಜ್ ಸಿಟಿಯನ್ನಾಗಿ ಪರಿವರ್ತಿಸಿದೆ ಎಂದು ಟೀಕಿಸಿದೆ.

ನಗರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಎದ್ದು ಕಾಣಿಸುತ್ತಿದೆ. ಕಸ ವಿಲೇವಾರಿಗೆ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವ ಬದಲು ಅದರಲ್ಲೂ ದುಡ್ಡು ಮಾಡುತ್ತಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸ್ಕ್ಯಾಮ್ ಸರ್ಕಾರ ಎಂದು ಆರೋಪಿಸಿದೆ.

ಸರ್ಕಾರಕ್ಕೆ ಜನಸಮಾನ್ಯರ ಆರೋಗ್ಯ ರಕ್ಷಣೆ ಬಗ್ಗೆಯೂ ಕಾಳಜಿ ಇಲ್ಲ. ಎರಡು ವರ್ಷವಾಗುತ್ತಾ ಬಂದರೂ ಬೆಂಗಳೂರಿನ ಗುಂಡಿ ಬಿದ್ದಿರುವ ರಸ್ತೆಗಳಿಗೆ ಸರಿಯಾಗಿ ತೇಪೆ ಹಾಕಲು ಸಾಧ್ಯವಾಗಿಲ್ಲ. ಇದೀಗ ನಗರದೆಲ್ಲೆಡೆ ಕಸದ ಸಮಸ್ಯೆ ಉಲ್ಬಣಿಸಿದೆ. ಇದು ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಜೆಡಿಎಸ್‌ ಟೀಕಿಸಿದೆ.

RELATED ARTICLES

Latest News