ಬೆಂಗಳೂರು,ಮಾ.10– ಕುಂಭಮೇಳ ಪ್ರವಾಸದ ಹೆಸರಿನಲ್ಲಿ ಅಮಾಯಕರಿಂದ ಲಕ್ಷಾಂತರ ಹಣ ಪಡೆದು ವಂಚಿಸಿದ ಆರೋಪಿಯನ್ನು ಗೋವಿಂದರಾಜ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಸಿಕೆಡಬ್ಯೂ ಲೇಔಟ್ ನಿವಾಸಿ ರಾಘವೇಂದ್ರರಾವ್(35) ಬಂಧಿತ ಆರೋಪಿ.
ತಮ ಪಾಂಚಜನ್ಯ ಟೂರ್‌ರಸ ಅಂಡ್ ಟ್ರಾವೆಲ್‌್ಸನಿಂದ ಕುಂಭಮೇಳದ ಪ್ರವಾಸ ಮಾಡಿಸುವುದಾಗಿ ಫೇಸ್‌ಬುಕ್‌ನಲ್ಲಿ ಈತ ಜಾಹಿರಾತು ನೀಡಿ ಆ ಮೂಲಕ ಅಮಾಯಕರನ್ನು ಸಂಪರ್ಕಿಸಿ ಅಯೋಧ್ಯೆ, ಕಾಶಿ, ಪ್ರಯಾಗ್‌ರಾಜ್ ಸೇರಿದಂತೆ ಮುಂತಾದ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಮಾಡಿಸುವುದಾಗಿ ಹೇಳಿ ಒಬ್ಬರಿಂದ 49 ಸಾವಿರ ಪಡೆದಿದ್ದಾನೆ.
ಅದರಂತೆ ಮೊದಲು ಒಂದು ತಂಡವನ್ನು ಪ್ರವಾಸಕ್ಕೆ ಕರದೊಯ್ದು ವಾಪಸ್ ಕರೆತಂದು ನಂತರ ನಂಬಿಕೆ ಗಳಿಸಿದ್ದಾನೆ. ತದನಂತರ ನೂರಕ್ಕೂ ಹೆಚ್ಚು ಮಂದಿಯಿಂದ ಪ್ರವಾಸದ ಹೆಸರಿನಲ್ಲಿ ಸುಮಾರು 35ರಿಂದ 40ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಿಕೊಂಡು ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಇದುವರೆಗೂ 21 ಮಂದಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಗೋವಿಂದ ರಾಜ ನಗರ ಠಾಣೆ ಪೊಲೀಸರು ಹಲವು ಮಾಹಿತಿಗಳನ್ನು ಸಂಗ್ರಹಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.