Wednesday, March 12, 2025
Homeರಾಜ್ಯನಟಿ ರನ್ಯಾ ರಾವ್ ಜೊತೆ ನಂಟು ಹೊಂದಿರುವ ಇಬ್ಬರು ಪ್ರಭಾವಿ ಸಚಿವರು ಯಾರು?

ನಟಿ ರನ್ಯಾ ರಾವ್ ಜೊತೆ ನಂಟು ಹೊಂದಿರುವ ಇಬ್ಬರು ಪ್ರಭಾವಿ ಸಚಿವರು ಯಾರು?

Who are the two influential ministers who are linked to actress Ranya Rao?

ಬೆಂಗಳೂರು, ಮಾ.11 – ಚಿತ್ರನಟಿ ರನ್ಯಾ ರಾವ್ ಅವರನ್ನು ಬಳಸಿಕೊಂಡು ವಿದೇಶದಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಜಾಲದ ಜೊತೆ ನಂಟು ಹೊಂದಿರುವ ರಾಜ್ಯದ ಆ ಇಬ್ಬರು ಪ್ರಭಾವಿ ಸಚಿವರು ಯಾರು? ಎಂದು ಜೆಡಿಎಸ್ ಪ್ರಶ್ನಿಸಿದೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಯಾರು ಆ ಗೋಲ್ಡ್ ಸ್ಮಗ್ಲಿಂಗ್ ಸಚಿವರು? ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಕೇಳಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ್ಮ ಶೇ. 60ರಷ್ಟು ಕಮಿಷನ್ ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಚಿನ್ನ ಕಳ್ಳಸಾಗಣಿಕೆಯೂ ಕೂಡ ಒಂದು ಭಾಗವೇ? ಎಂದು ಪ್ರಶ್ನಿಸಿದೆ.

ಗೋಲ್ಡ್ ಸ್ಮಗ್ಲಿಂಗ್ ಸಿಂಡಿಕೇಟ್ ಜೊತೆ ಹವಾಲಾ ದಂಧೆಯಲ್ಲಿಯೂ ಕಾಂಗ್ರೆಸ್ ಕೈವಾಡವಿರುವುದು ಬೆಳೆಕಿಗೆ ಬಂದಿದೆ. ಇನ್ನೂ ಚಿನ್ನದ ಕಳ್ಳ ಮಂತ್ರಿಯ ಬಗ್ಗೆ ವಿಧಾನಸೌಧದ ಪಡಸಾಲೆಯಲ್ಲಿ ಗುಸುಗುಸು ಜೋರಾಗಿದೆ ಎಂದು ಟೀಕಿಸಿದೆ.

RELATED ARTICLES

Latest News