ಥಾಣೆ, ಮಾ.12-ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಸರ್ಕಾರಿ ಸ್ವಾಮ್ಯದ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಇಬ್ಬರು ಉದ್ಯೋಗಿಗಳನ್ನು ಲಂಚ ಪಡೆದ ಆರೋಪದ ಮೇಲೆ ಬಂಧಿಸಿದೆ.
ಎಸಿಬಿಯ ಥಾಣೆ ಘಟಕಕ್ಕೆ ದೂರು ನೀಡಿದ ನಂತರ ನಡೆದ ಕಾರ್ಯಾಚರಣೆಯಲ್ಲಿ ಕಛೇರಿಯ ಹಿರಿಯ ಗುಮಾಸ್ತ ಹರೀಶ್ ಮರಾಠ (47) ಮತ್ತು ಕಿರಿಯ ಗುಮಾಸ್ತ ಹೇಮಂತ್ ಕಿರ್ಪಣ್ (39) ಅವರನ್ನು ಬಂಧಿಸಲಾಗಿದೆ.
ದೂರುದಾರರ ತಾಯಿಯ ವೈದ್ಯಕೀಯ ಬಿಲ್‌ಗಳನ್ನು ಪಾವತಿಸಲು ಇಬ್ಬರೂ ಲಂಚ ಕೇಳಿದ್ದರು ಲಂಚದ ಮೊತ್ತವನ್ನು ಸ್ವೀಕರಿಸುತ್ತಿದ್ದಾಗ ಕಿರ್ಪಣ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಯಿತು. ಎಂದು ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರು ಆರಂಭದಲ್ಲಿ 23,000 ರೂ.ಗಳಿಗೆ ಬೇಡಿಕೆ ಇಟ್ಟರು, ಆದರೆ ನಂತರ 15,000 ರೂ.ಗಳನ್ನು ಸ್ವೀಕರಿಸಲು ಒಪ್ಪಿಕೊಂಡರು ಎಂದು ದೂರುದಾರರು ಆರೋಪಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.