Thursday, March 13, 2025
Homeಬೆಂಗಳೂರುಬೆಂಗಳೂರಿಗರಿಗೆ ಮತ್ತೊಂದು ಬರೆ, ಆಟೋ ಪ್ರಯಾಣ ದರ 10 ರೂ. ಏರಿಕೆ ಸಾಧ್ಯತೆ

ಬೆಂಗಳೂರಿಗರಿಗೆ ಮತ್ತೊಂದು ಬರೆ, ಆಟೋ ಪ್ರಯಾಣ ದರ 10 ರೂ. ಏರಿಕೆ ಸಾಧ್ಯತೆ

Auto fare likely to increase by Rs 10 soon

ಬೆಂಗಳೂರು,ಮಾ.12- ಬಸ್‌‍,ಮೆಟ್ರೋ ಏರಿಕೆ ಬೆನಲ್ಲೇ ರಾಜಧಾನಿ ಬೆಂಗಳೂರಿನ ಜನರಿಗೆ ಮತ್ತೊಂದು ದರ ಏರಿಕೆಯ ಬಿಸಿ ತಟ್ಟಿಲಿದೆ. ಬೆಂಗಳೂರಿನ ಆಟೋ ಮೀಟರ್‌ ದರ ಏರಿಕೆ ವಾರದಲ್ಲಿ ಜಾರಿಗೆ ಬರಲಿದೆ. ಇಂದು ಆಟೋ ದರ ಏರಿಕೆ ಬಗ್ಗೆ ಮಹತ್ವದ ಸಭೆ ನಡೆಯಲಿದೆ.

ಆಟೋದ ಕನಿಷ್ಠ ದರವನ್ನು 30 ರೂಪಾಯಿಯಿಂದ 40 ರೂಪಾಯಿಗೆ
ಹೆಚ್ಚಿಸಬೇಕೆಂದು ಆಟೋ ಚಾಲಕರು ಒತ್ತಾಯಿಸುತ್ತಿದ್ದಾರೆ. ಪ್ರತಿ ಕಿಲೋಮೀಟರಿಗೆ 15 ರೂಪಾಯಿ ದರವನ್ನು 20 ರೂಪಾಯಿಗೆ ಹೆಚ್ಚಿಸಬೇಕೆಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಚೇರಿಯಲ್ಲಿ ಸಭೆ ವಿವಿಧ ಆಟೋ ಚಾಲಕರ ಸಂಘಟನೆಗಳು ಈ ಸಭೆಯಲ್ಲಿ ಭಾಗವಹಿಸಿ, ಸದ್ಯದ ಸಮಸ್ಯೆಪಟ್ಟಿ ನೀಡಿದ್ದಾರೆ.

ಜನವರಿಯಲ್ಲಿ ರಾಜ್ಯರಸ್ತೆ ಸಾರಿಗೆ,ಬಿಎಂಟಿಸಿ ಬಸ್‌‍ಗಳ ದರವೂ ಏರಿಕೆ ಮಾ ಫೆಬ್ರವರಿಯಲ್ಲಿ ನಮ ಮೆಟ್ರೋ ದರವೂ ಭಾರಿಹೆಚ್ಚಳವಾಗಿತ್ತು. ಸದ್ಯ ಮಾರ್ಚ್‌ ನಲ್ಲಿ ಆಟೋ ಮೀಟರ್‌ ದರ ಏರಿಕೆ ಸಾಧ್ಯತೆ ಇದೆ,

ಬಹಳ ದಿನದಿಂದ ಆಟೋ ಚಾಲಕರು ಬೇಡಿಕೆ ಮಂಡಿಸುತ್ತಿದ್ದರು ಕಳೆದ 3 ತಿಂಗಳಿನಿಂದ ನಿಗದಿಯಾಗಿದ್ದ ಸಭೆ ಮುಂದೂಡಲಾಗಿತ್ತು ಆದರೆ ಈಗ ವಿಸ್ತುತ ಚರ್ಚೆ ನಡೆದಿದ್ದು ದರ ಏರಿಕೆ ನಿಶ್ಚಿತ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ರಸ್ತೆ ಹಾಳಾಗಿರುವುದು,ಅರ್ಧಕ್ಕೆ ನಿಂತ ಕಾಮಗಾರಿಗಳು,ಪೊಲೀಸರ ಕಿರುಕುಳ ಸೇರಿದಂತೆ ಹಲವು ಸಮಸ್ಯಯನ್ನು ಸಾರಿಗೆ ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾರೆ. ವಾದದ ನಂತರ ಪ್ರತಿ ಕಿ.ಮೀಗೆ 7 ರಿಂದ 10 ರೂ ಹೆಚ್ಚಳ ಸಾಧ್ಯತೆ ಇದ್ದು ,ಮಿನಿಮಮ್‌ ದರ 45 ರೂ ನಿಗದಿಯಾಗುವ ಸಾಧ್ಯತೆ ಇದೆ.

RELATED ARTICLES

Latest News