Thursday, March 13, 2025
Homeರಾಷ್ಟ್ರೀಯ | Nationalಮಧ್ಯಪ್ರದೇಶ : ಗ್ಯಾಸ್ ಟ್ಯಾಂಕರ್ ಡಿಕ್ಕಿ ಯಾಗಿ 7 ಜನರ ಸಾವು

ಮಧ್ಯಪ್ರದೇಶ : ಗ್ಯಾಸ್ ಟ್ಯಾಂಕರ್ ಡಿಕ್ಕಿ ಯಾಗಿ 7 ಜನರ ಸಾವು

7 killed, 3 injured as gas tanker hits two vehicles in MP's Dhar district

ಧಾರ್,ಮಾ.13- ಗ್ಯಾಸ್ ಟ್ಯಾಂಕರ್ ವಾಹನ ಚಾಲಕ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ.

ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಬದ್ಘಾವರ್‌ ಉಜ್ಜಯಿನಿ ಹೆದ್ದಾರಿಯ ಬಮನ್‌ಸುತಾ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಕಾರು ಮತ್ತು ಜೀಪ್‌ನಲ್ಲಿದ್ದ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಧಾರ್ ಎಸ್‌ಪಿ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರ ಮೂವರು ಗಾಯಗೊಂಡು ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.ಹಿರಿಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಕ್ರೇನ್ ಬಳಸಿ ವಾಹನಗಳಿಂದ ಸಿಕ್ಕಿಬಿದ್ದ ಜನರನ್ನು ಹೊರತೆಗೆಯುವ ಕಾರ್ಯಾಚರಣೆಯಲ್ಲಿ ಸ್ಥಳೀಯ ನಿವಾಸಿಗಳು ಸಹಾಯ ಮಾಡಿದರು ಎಂದು ಎಸ್‌ಪಿ ಹೇಳಿದರು.

ಮೂವರು ಗಾಯಾಳುಗಳನ್ನು ನೆರೆಯ ರತ್ನಂ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಮೃತರನ್ನು ಮಧ್ಯಪ್ರದೇಶ ರತ್ನಂ, ಮಂದೌರ್, ಮತ್ತು ರಾಜಸ್ಥಾನದ ಜೋಧುರ್ ಜಿಲ್ಲೆಯವರು ಅಪಘಾತದ ನಂತರ ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ.

RELATED ARTICLES

Latest News