ಕೋಲ್ಕತಾ, ಮಾ. 13: ಜಾದವ್‌ಪುರ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಮಾರ್ಚ್ 1ರಂದು ನಡೆದ ಅಶಾಂತಿ ಮತ್ತು ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ.
ಟಿಎಂಸಿಯ ಪಶ್ಚಿಮ ಬಂಗಾಳ ಕಾಲೇಜು ಮತ್ತು ವಿಶ್ವವಿದ್ಯಾಲಯ ಪ್ರಾಧ್ಯಾಪಕರ ಸಂಘದ ಎಜಿಎಂ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತತ್ವಶಾಸ್ತ್ರದ ವಿದ್ಯಾರ್ಥಿ ಸೌಮ್ಯದೀಪ್ ಮಹತಾ ಅವರನ್ನು ಜಾದವ್‌ಪುರ ಪೊಲೀಸ್ ಠಾಣೆಗೆ ಕರೆಸಲಾಗಿದೆ ಎಂದು ಜೆಯು ಎಸ್‌ಎಫ್‌ಐ ಘಟಕದ ಮುಖಂಡರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಗುಂಪು ಬಸು ಅವರ ಕಾರಿನ ಸುತ್ತಲೂ ಮಾನವ ಸರಪಳಿ ರಚಿಸಿ, ಅವರು ಹೊರಹೋಗದಂತೆ ತಡೆಯಲು ಪ್ರಯತ್ನಿಸಿತು, ಬಾಕಿ ಇರುವ ವಿದ್ಯಾರ್ಥಿ ಸಂಘದ ಚುನಾವಣೆಯ ಬಗ್ಗೆ ತಕ್ಷಣ ಚರ್ಚೆ ನಡೆಸಬೇಕೆಂದು ಒತ್ತಾಯಿಸಿದರು.
ಸಚಿವರ ಕಾರು ಮಾನವ ಸರಪಳಿ ದಾಟಿ ಕ್ಯಾಂಪಸ್ ನಿಂದ ಹೊರಟಾಗ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ನಂತರದ ಪ್ರತಿಭಟನೆಯಲ್ಲಿ, ಟಿಎಂಸಿ ಬೋಧಕೇತರ ಸಿಬ್ಬಂದಿಯ ಶಿಕ್ಷಣ ವಿಭಾಗದ ಕಚೇರಿಗೆ ಬೆಂಕಿ ಹಚ್ಚಲಾಯಿತು ಮತ್ತು ಕ್ಯಾಂಪಸ್‌ನಲ್ಲಿ ಹಲವಾರು ಹೋರ್ಡಿಂಗ್‌ಗಳು ಹಾಕಿ ಪ್ರತಿಭಟನೆ ನಡೆಸಲಾಗಿತ್ತು.