Thursday, March 13, 2025
Homeಬೆಂಗಳೂರುಬೆಂಗಳೂರಲ್ಲಿ ಮತ್ತೆ ಕಸದ ಸಮಸ್ಯೆ ಉಲ್ಬಣ ಸಾಧ್ಯತೆ

ಬೆಂಗಳೂರಲ್ಲಿ ಮತ್ತೆ ಕಸದ ಸಮಸ್ಯೆ ಉಲ್ಬಣ ಸಾಧ್ಯತೆ

Garbage problem likely to worsen again in Bengaluru

ಬೆಂಗಳೂರು,ಮಾ.13- ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕಸದ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ನಗರದ ಕಸ ಹಾಕಲಾಗುತ್ತಿರುವ ಕಣ್ಣೂರು ಕ್ವಾರಿಗೆ ಕಸ ಹಾಕುವುದಕ್ಕೆ ಸ್ಥಳೀಯರು ವ್ಯಾಪಕ ವಿರೋಧ ವ್ಯಕ್ತಪಡಿಸಿರುವುದರಿಂದ ಮತ್ತೆ ಕಸ ವಿಲೇವಾರಿ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಗಳು ಹೆಚ್ಚಿದೆ.

ಇಷ್ಟು ದಿನ ನಗರದ ತ್ಯಾಜ್ಯವನ್ನು ಕಣ್ಣೂರು ಕ್ವಾರಿಗೆ ಸಾಗಿಸಲಾಗುತ್ತಿತ್ತು. ಆದರೆ, ಈಗ ಸ್ಥಳೀಯರು ಬೆಂಗಳೂರಿನ ಕಸ ಡಂಪ್ ಮಾಡಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ 9 ವರ್ಷದಿಂದ ಕಣ್ಣೂರು ಕ್ವಾರಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ಗ್ರಾಮದ ಪರಿಸರ ಹಾಳಾಗುತ್ತಿದೆ ಅವೈಜ್ಞಾನಿಕ ಕಸ ವಿಲೇವಾರಿ ಮಾಡಲಾಗ್ತಿದೆ.

ತ್ಯಾಜ್ಯದೊಂದಿಗೆ ಪ್ರಾಣಿತ್ಯಾಜ್ಯ, ವೈದ್ಯಕೀಯ ತ್ಯಾಜ್ಯ ಹಾಗೂ ಕಾರ್ಖಾನೆಗಳ ವಿಷಪೂರಿತವನ್ನು ಅವೈಜ್ಞಾನಿಕವಾಗಿ ಸುರಿಯಲಾಗುತ್ತಿದೆ.ಸುರಿದ ತ್ಯಾಜ್ಯದಲ್ಲಿ ಶವ ಸಹ ಪತ್ತೆಯಾಗಿದೆ ಎಂದು ಸ್ಥಳೀಯರ ಕಳವಳ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳ ಲಿಚೆಟ್ ಉತ್ಪಾದನೆ ಹೆಚ್ಚಾಗಿ, ಸುತ್ತಮುತ್ತಲಿನ ಕೆರೆ, ಬಾವಿ, ಕಾಲುವೆ ಹಾಗೂ ಕೊಳವೆ ಬಾವಿ ಸೇರುತ್ತಿದೆ.. ಇದರಿಂದ ಅಂತರ್ಜಲ ಸಹ ಕಲುಷಿತವಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೆಟ್ಟ ಗಾಳಿ ಬೀಸುತ್ತಿದೆ. ವೃದ್ಧರು ಮತ್ತು ಮಕ್ಕಳು ಚರ್ಮ ಹಾಗೂ ಉಸಿರಾಟದ ಸಮಸ್ಯೆ ಎದುರಿಗಿದೆ ಎಂದು ಅವರು ಆರೋಪಿಸಿದ್ದಾರೆ.

ಮತ್ತೊಂದು ಕಡೆ ನಗರದಿಂದ ಕಸ ಹೊತ್ತು ಹೊದ ದಾರಿಗಳನ್ನು ತಡೆದು ನಿಲ್ಲಿಸುತ್ತಿದ್ದಾರೆ. ಹೀಗಾಗಿ ಸುಮಾರು 600 ಕ್ಕೂ ಹೆಚ್ಚು ಕಸದ ಲಾರಿಗಳು ಕಣ್ಣೂರಿನ ಕಸದ ಕ್ವಾರಿ ಬಳಿ ನಿಲ್ಲುವಂತಾಗಿದೆ. ಇದರಿಂದ ನಗರದ ಕಸ ವಿಲೇವಾರಿಗೆ ಲಾರಿಗಳು ಇಲ್ಲ.. ಈ ಹಿನ್ನೆಲೆಯಲ್ಲಿ ನಗರದಲ್ಲಿ ಕಸದ ಸಮಸ್ಯೆ ಉಲ್ಬಣವಾಗಲಿದೆ.

ಸದ್ಯ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಈಗಾಗಲೇ ಕಣ್ಣೂರು ಗ್ರಾಮಸ್ಥರ ಬಳಿ ಸಭೆ ನಡೆಸಿದ್ದರೂ ಯಾವುದೇ ಪ್ರಯೋಜನ ಇಲ್ಲ…ಸದ್ಯ ನಗರದ ರಸ್ತೆಗಳಲ್ಲಿ ಕಸ ತುಂಬಿದ ಲಾರಿ ಅಟೋಗಳು ನಿಂತಲ್ಲೆ ನಿಂತ್ತಿವೇ. ಇದನ್ನೇಲ್ಲಾ ನೋಡಿದರೆ ನಗರದ ಕಸದ ಸಮಸ್ಯೆ ಮತ್ತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತ..?ಸಿಲಿಕಾನ್ ಸಿಟಿ ಮಾರ್ಯದೆ ಹಾಳಗುತ್ತ..? ಎಂಬ ಚರ್ಚೆ ಆರಂಭವಾಗಿದೆ.

RELATED ARTICLES

Latest News