ರಾಗಿಣಿ ದ್ವಿವೇದಿ ಅಭಿನಯಿಸಿರುವ ‘ನನ್ ಬೂ’ ಎಂಬ ಮ್ಯೂಸಿಕಲ್ ವಿಡಿಯೋ ರಿಲೀಸ್ ಆಗಿದೆ. ಸದ್ಯ ಈ ಹಾಡಿಗೆ ಉತ್ತಮ ರೆಸ್ಪಾನ್ಸ್ ಬರ್ತಾ ಇದ್ದು, ವಿಎಫ್ಎಕ್ಸ್ ಅಂತು ಕ್ರೇಜಿಯಾಗಿದೆ. ಜೊತೆಗೆ ರಾಗಿಣಿ ಕೂಡ ಬೇರೆ ರೀತಿಯೇ ಕಾಣಿಸ್ತಾ ಇದಾರೆ. ಇನ್ನು ಈ ವಿಡಿಯೋ ಸಾಂಗ್ ನಿರ್ದೇಶನ ಮಾಡಿರುವವರು ಟಬ್ಬಿ. ಬರೀ ನಿರ್ದೇಶನವೊಂದೇ ಅಲ್ಲ ಸಾಹಿತ್ಯ ಬರೆದು ಹಾಡನ್ನು ಹಾಡಿದ್ದಾರೆ. ಒಂದು ಸಿನಿಮಾ ಆಗಲಿ, ಮ್ಯೂಸಿಕ್ ವಿಡಿಯೋವಾಗಲಿ ವಿಭಿನ್ನವಾಗಿದ್ದರೆ ಜನರನ್ನ ಆಕರ್ಷಿಸುತ್ತದೆ.
ನಿರ್ದೇಶಕ ಟಬ್ಬಿ ಮೂಲತಃ ಬಳ್ಳಾರಿ ಜಿಲ್ಲೆಯ ಹೊಸಪೇಟೆಯವರು. ಸೃಜನಶೀಲತೆಯ ಮಿತಿಗಳನ್ನು ಮರು ವ್ಯಾಖ್ಯಾನಿಸುವ ಬಹುಮುಖ ಕಲಾವಿದ ಟಬ್ಬಿ.. ಒಬ್ಬ ದಾರ್ಶನಿಕ ಚಲನಚಿತ್ರ ನಿರ್ಮಾಪಕರಾಗಿ ಅವರು ವಿಶೇಷ ಸಿನೀಮಿಯ ಸ್ಪರ್ಶದೊಂದಿಗೆ ಕಥೆಗಳಿಗೆ ಜೀವ ತುಂಬುತ್ತಾರೆ. ಟಬ್ಬಿ ಒಬ್ಬ ರ್ಯಾಪರ್, ಗೀತರಚನೆಕಾರರಾಗಿ ಗಮನ ಸೆಳೆದಿದ್ದಾರೆ. ಅವ್ರ ಕಥೆ ಹೇಳುವ ಶೈಲಿ, ಜೀವನದ ವಾಸ್ತವಗಳನ್ನು ತೋರಿಸುವ ರೀತಿ ಅವ್ರ ಕಲಾತ್ಮಕತೆ ಯಾವುದೇ ಒಂದು ಮಾಧ್ಯಮಕ್ಕೆ ಸೀಮಿತವಾಗಿಲ್ಲ
ಹಳೆಯ ಕಾಲದ ಪ್ರಣಯ ಗೀತೆಯಿಂದ ಪ್ರೀತಿಯನ್ನು ಮರು ವ್ಯಾಖ್ಯಾನ ಮಾಡೋಕೆ ಬಂದಿದೆ ನನ್ ಬೂ ಈ ಹಾಡೇನಿದೆಯಲ್ಲ ತುಂಬಾ ಫ್ರೆಶ್ ಆಗಿದ್ದು, ಆಕರ್ಷಕವಾಗಿದೆ ಈ ಹಾಡೇನಿದೆಯಲ್ಲ ನೇರವಾಗಿ ಹೃದಯದಿಂದಾನೆ ಬರುವಂತ ಹಾಡು, ಮನಸೆಳೆಯುವಂಥ ಧ್ವನಿ. 2024 ರಲ್ಲಿ ಈ ಕನ್ನಡ ಪಾಪ್ ಬ್ಯಾಂಗರ್ ರಚೆನಯಾಯ್ತು..ಇದ್ರಲ್ಲಿ ಪ್ರೀತಿ, ಮೋಜು ,ತಮಾಷೆ ಎಲ್ಲವೂ ಕೂಡಿದೆ. ಈ ಸಂಗೀತ ತುಂಬಾ ಮನಮೋಹಕವಾಗಿದ್ದು, ತುಂಬಾ ವಿಶೇಷ ವಿನ್ಯಾಸದೊಂದಿಗೆ ಬೆಸೆದುಕೊಂಡಿದೆ
ಮಧುರ ಸಂಗೀತ, ಮಕ್ಕಳಂತಹ ಧ್ವನಿಯನ್ನು ಒಳಗೊಂಡಿದೆ ಕನ್ನಡ ಸಂಗೀತ ಪ್ರಿಯರಿಗೆ ಈ ಹಾಡಿನ, ಸಂಗೀತದ ವ್ಯಸನವನ್ನೇ ಹತ್ತುವಂತೆ ಮಾಡಿದ್ದಾರೆ. ರೋಮಾಂಚಕವಾಗಿದ್ದು, ಒಂದ್ ರೀತಿಲಿ infect ಆಗ್ಬಿಟ್ಟಿದೆ. ನ್ಯಾನ್ಬೂ ಅನ್ನೋದು ಕೇವಲ ಹಾಡು ಮಾತ್ರ ಅಲ್ಲ, ಅದೊಂದು ಅನುಭವ. ಈ ವರ್ಷದ ಮೆಮೊರಿಯೇಬಲ್ ಹುಕ್ ಸ್ಟೆಪ್ಗೆ ನೀವೆಲ್ಲ ರೆಡಿ ಆಗಿ, ಇದಂತೂ ಡ್ಯಾನ್ಸರ್ಗೆ , ರೀಲ್ ಮೇಕರ್ಸ್ಗೆ ಹೇಳಿ ಮಾಡಿಸಿದಂತ ಹಾಡು ಅಷ್ಟೇ ಅಲ್ಲ, ಹೊಸತನ ಬಯಸುವಂತಹ ಸಂಗೀತ ಪ್ರಿಯರಿಗೂ ಹೇಳಿ ಮಾಡಿಸಿದಂತ ಹಾಡು.

ಈ ಮ್ಯೂಸಿಕ್ ವಿಡಿಯೋವನ್ನು MADD DAWG ENTMNT ಸಂಸ್ಥೆಯಡಿ ದಿನೇಶ್ ನಿರ್ಮಾಣ ಮಾಡಿದ್ದು, ಟಬ್ಬಿ ಅವರೇ ನಿರ್ದೇಶನ ಮಾಡಿದ್ದಾರೆ. ಇನ್ನು ಉದಾಸ್, ಅಂಕುಶ್, ರೋನಾಕ್, ಪ್ರಖ್ಯಾತ್, ಮಮ್ತೇಶ್, ಅಭಿಷೇಕ್ ಹೊಸಪೇಟೆ, ಪ್ರೀತಮ್ ತಾರಾ ಬಳಗದಲ್ಲಿದ್ದಾರೆ. ಉಳಿದಂತೆ ಪ್ರಮುಖ ಪಾತ್ರದಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ.