ಪಾಲ್ವರ್, ಮಾ. 14: ಮಹಾರಾಷ್ಟ್ರದ ಪಾಲ್ವರ್ ಜಿಲ್ಲೆಯಲ್ಲಿ ಸೂಟ್‌ಕೇಸ್‌ನಲ್ಲಿ ಮಹಿಳೆಯ ಕತ್ತರಿಸಿದ ತಲೆ ಪತ್ತೆಯಾಗಿದೆ. ಘಟನೆ ಕುರಿತಂತೆ ತನಿಖೆ ಆರಂಭಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ತೀವ್ರ ಕಾರ್ಯಚರಣೆ ನಡೆಸುತ್ತಿದ್ದಾರೆ. ವಿರಾರ್ ಪ್ರದೇಶದ ಪಿರ್ಕುಂದಾ ದರ್ಗಾ ಬಳಿ ಸಿಕ್ಕ ಸೂಟ್‌ಕೇಸ್‌ನಲ್ಲಿ ಮಹಿಳೆ ತಲೆ ಪತ್ತೆಯಾಗಿದೆ.
ಕೆಲವು ಸ್ಥಳೀಯ ಮಕ್ಕಳು ಬಿಟ್ಟುಹೋದ ಸೂಟ್ ಕೇಸ್ ಅನ್ನು ಕಂಡು ಕುತೂಹಲದಿಂದ ಅದನ್ನು ತೆರೆದರು. ಅದರಲ್ಲಿದ್ದ ಮಹಿಳೆಯ ತಲೆಯನ್ನು ಕಂಡು ಭಯಭೀತರಾಗಿ ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಾಂಡ್ಲಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಯಾರೋ ದುಷ್ಕರ್ಮಿಗಳು ಮಹಿಳೆಯನ್ನು ಬೇರೆ ಕಡೆ ಕೊಲೆ ಮಾಡಿ ರುಂಡ ಮುಂಡವನ್ನು ಬೇರ್ಪಡಿಸಿ ಬಿಸಾಡುವ ಉದ್ದೇಶದಿಂದ ಮಹಿಳೆಯ ತಲೆಯನ್ನು ಸೂಟ್‌ಕೇಸ್‌ನಲ್ಲಿಟ್ಟು ಪರಾರಿಯಾಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.