ನವದೆಹಲಿ, ಮಾ.14: ಐಪಿಎಲ್ 2025ರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಭಾರತದ ಆಂಡರ್ ಅಕ್ಷರ್ ಪಟೇಲ್ ಅವರನ್ನು ನೇಮಕ ಮಾಡಲಾಗಿದೆ. 31 ವರ್ಷದ ಅಕ್ಷರ್ 2019 ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದಾರೆ ಮತ್ತು ಅವರನ್ನು 16.50 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ.
ಅವರ ಐಪಿಎಲ್ ನಾಯಕತ್ವದ ಅನುಭವ ಸೀಮಿತವಾಗಿದ್ದರೂ, ಅವರು ದೇಶೀಯ ಕ್ರಿಕೆಟ್‌ನಲ್ಲಿ ಗುಜರಾತ್ ತಂಡವನ್ನು ಮುನ್ನಡೆಸಿದ್ದರು. ಮತ್ತು ಈ ವರ್ಷದ ಆರಂಭದಲ್ಲಿ ಭಾರತದ ಟಿ 20 ಉಪನಾಯಕನಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಋತುವಿನಲ್ಲಿ ಅವರು ಸುಮಾರು 30 ಸರಾಸರಿಯಲ್ಲಿ 235 ರನ್ ಗಳಿಸಿದ್ದರು ಮತ್ತು 7.65 ಎಕಾನಮಿಯಲ್ಲಿ 11 ವಿಕೆಟ್ ಗಳನ್ನು ಪಡೆದಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುವುದು ನನ್ನ ಸಂಪೂರ್ಣ ಗೌರವವಾಗಿದೆ ಎಂದು ನಾಯಕನಾಗಿ ನೇಮಕಗೊಂಡ ಅಕ್ಷರ್ ಪಟೇಲ್ ಹೇಳಿದರು. ನಾನು ಕ್ರಿಕೆಟಿಗನಾಗಿ ಬೆಳೆದಿದ್ದೇನೆ ಮತ್ತು ಈ ತಂಡವನ್ನು ಮುನ್ನಡೆಸಲು ನಾನು ಸಿದ್ದ ಮತ್ತು ವಿಶ್ವಾಸ ಹೊಂದಿದ್ದೇನೆ.
ಇದೇ ತಂಡದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಅವರು ಇದ್ದು ಅವರ ಹೆಸರು ನಾಯಕತ್ವಕ್ಕೆ ಕೇಳಿಬಂದಿತ್ತು. ಆದರೆ, ಸ್ವತಃ ಅವರೇ ನನಗೆ ನಾಯಕತ್ವ ಬೇಡ ಎಂದು ಹೇಳಿದ್ದರಿಂದ ಅಕ್ಷರ್ ಅವರಿಗೆ ನಾಯಕ ಪಟ್ಟ ಒಲಿದುಬಂದಿದೆ.