ನೋಯ್ಡಾ, ಮಾ. 14: ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ತಂದೆ ಹಾಗೂ ಅಣ್ಣ ಸೇರಿಕೊಂಡು ಯುವತಿಯನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಅಪ್ಪ ಮತ್ತು ಅಣ್ಣನಿಂದಲೇ ಹತ್ಯೆಯಾದ ಮಹಿಳೆಯನ್ನು ನೇಹಾ ರಾಥೋಡ್ ಎಂದು ಗುರುತಿಸಲಾಗಿದೆ.
ಮಗಳ ಪ್ರೇಮ ವಿವಾಹವನ್ನು ಅರಗಿಸಿಕೊಳ್ಳಲಾಗದೆ ಮಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಅಪ್ಪ, ಮಗ ಯುವತಿಯನ್ನು ಕೊಂದ ನಂತರ, ಇಬ್ಬರೂ ಆಕೆಯ ದೇಹವನ್ನು ಸುಟ್ಟು ಹಾಕಿ ಸಾಕ್ಷ್ಯವನ್ನು ನಾಶಮಾಡಲು ಪ್ರಯತ್ನಿಸಿದ್ದರು.
ಸಂತ್ರಸ್ತೆ ನೇಹಾ ರಾಥೋಡ್ ಉತ್ತರ ಪ್ರದೇಶದ ಹಾಪುರ್ ನಿವಾಸಿ ಸೂರಜ್ ಜೊತೆ ಪ್ರೇಮ ಸಂಬಂಧ ಹೊಂದಿದ್ದರು. ಇದಕ್ಕೆ ಆಕೆಯ ಕುಟುಂಬದವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂದು ನೋಯ್ಡಾ ಸೆಂಟ್ರಲ್‌ನ ಡಿಸಿಪಿ ಶಕ್ತಿ ಮೋಹನ್ ಅವಸ್ಥೆ ಹೇಳಿದ್ದಾರೆ.
ಆಕೆಯ ಕುಟುಂಬವು ಸೂರಜ್ ನನ್ನು ಭೇಟಿಯಾಗುವುದನ್ನು ಹಲವು ಬಾರಿ ತಡೆದಿತ್ತು. ಆದರೆ ಅವಳು ಈ ಎಲ್ಲವನ್ನೂ ಧಿಕ್ಕರಿಸಿ ಮಾರ್ಚ್ 11 ರಂದು ಗಾಜಿಯಾಬಾದ್‌ನ ಆರ್ಯ ಸಮಾಜ ಮಂದಿರದಲ್ಲಿ ಸೂರಜ್ ನನ್ನು ವಿವಾಹವಾಗಿದ್ದಳು.
ಅವರ ವಿವಾಹದ ಬಗ್ಗೆ ಮಾಹಿತಿ ಪಡೆದ ನಂತರ, ಆರೋಪಿ ಭಾನು ರಾಥೋಡ್ ಮತ್ತು ಅವರ ಮಗ ಹಿಮಾಂಶು ರಾಥೋಡ್ ಮಾರ್ಚ್ 12 ರ ಬೆಳಗ್ಗೆ ನೇಹಾಳನ್ನು ಕೊಲೆ ಮಾಡಿದ್ದರು.ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದರು. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಹಾಪುರದಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದಾಗಿನಿಂದ ಒಬ್ಬರಿಗೊಬ್ಬರು ಪರಿಚಿತರಾಗಿದ್ದರು. ಆ ಯುವಕ ಪ್ರಸ್ತುತ ಹಾವುರದಲ್ಲಿ ಪಿಕಪ್ ಟ್ರಕ್ ಓಡಿಸುತ್ತಾನೆ. ಆ ಯುವಕರು ಜಾಟ್ ಸಮುದಾಯಕ್ಕೆ ಸೇರಿದವನಾಗಿದ್ದು, ಆದರೆ ಹುಡುಗಿ ತೇಲಿ ಸಮುದಾಯಕ್ಕೆ ಸೇರಿದವಳು ಎನ್ನಲಾಗಿದೆ.