Friday, March 14, 2025
Homeಅಂತಾರಾಷ್ಟ್ರೀಯ | Internationalಉಕ್ರೇನ್ ಮೇಲಿನ ದಾಳಿ ನಿಲ್ಲಿಸಲು ರಷ್ಯಾ ಷರತ್ತು ಬದ್ದ ಸಮ್ಮತಿ

ಉಕ್ರೇನ್ ಮೇಲಿನ ದಾಳಿ ನಿಲ್ಲಿಸಲು ರಷ್ಯಾ ಷರತ್ತು ಬದ್ದ ಸಮ್ಮತಿ

Vladimir Putin sets out conditions for Ukraine Ceasefire

ಮಾಸ್ಕೋ, ಮಾ. 14- ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಕದನ ವಿರಾಮ ಘೋಷಿಸುವಂತೆ ಅಮೆರಿಕ ಮಾಡಿಕೊಂಡಿರುವ ಮನವಿಗೆ ರಷ್ಯಾ ಸಮ್ಮತಿಸಿದೆ. ಅಮೆರಿಕದ ಸಲಹೆಗೆ ಷರತ್ತುಬದ್ಧ ಒಪ್ಪಿಗೆ ಸೂಚಿಸಿದ ರಷ್ಯಾ ಅಧ್ಯಕ್ಷ ಪ್ಲಾಡಿಮಿರ್ ಪುಟಿನ್ ಅವರು ಈ ಒಪ್ಪಿಗೆ ಜೊತೆಗೆ ಹಲವು ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಕದನ ವಿರಾಮವು ಶಾಶ್ವತ ಶಾಂತಿಗೆ ಕಾರಣವಾಗಬೇಕು. ಸಂಘರ್ಷದ ಮೂಲ ಕಾರಣಗಳನ್ನು ಪರಿಹರಿಸಬೇಕು. ಯುದ್ಧ ವಿರಾಮ ಉಕ್ರೇನ್ ಮತ್ತೆ ಸಶಸ್ತ್ರೀಕರಣಗೊಳ್ಳಲು ಅವಕಾಶ ನೀಡಬಹುದು.

ತನ್ನ ಸೇನೆಯನ್ನು ಮತ್ತೆ ಸಜ್ಜುಗೊಳಿಸಲು ಸಹಕಾರಿಯಾಗಬಹುದು ಎಂದು ಪುಟಿನ್ ಬೇಡಿಕೆ ಮುಂದಿಟ್ಟಿದ್ದಾರೆ. ರಷ್ಯಾದ 2,000 ಕಿಲೋಮೀಟರ್ ವ್ಯಾಪ್ತಿಯಲ್ಲಿ ಉಕ್ರೇನ್ ಸೇನೆ ಸಾಕಷ್ಟು ನಷ್ಟ ಮಾಡಿದೆ.

ಬಂಧಿತ ಸೈನಿಕರನ್ನು ಹಾಗೇ ಹೋಗಲು ಬಿಡಬೇಕೇ? ಉಕ್ರೇನ್ ಅವರಿಗೆ ಶರಣಾಗಲು ಸೂಚಿಸುತ್ತದೆಯೇ? ಅಮೆರಿಕದ ಅಧಿಕಾರಿಗಳು ಅಥವಾ ಟ್ರಂಪ್ ಜೊತೆಗೆ ಮಾತುಕತೆಗೆ ಸಿದ್ದ.
ಸಂಘರ್ಷವನ್ನು ಶಾಂತಿಯುತವಾಗಿ ಕೊನೆಗೊಳಿಸಲು ನಾವು ಸಿದ್ದ ಎಂದು ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸುತ್ತಲೇ ರಷ್ಯಾ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ.

RELATED ARTICLES

Latest News