Saturday, March 15, 2025
Homeರಾಷ್ಟ್ರೀಯ | Nationalಹೋಳಿ ಹಬ್ಬಕ್ಕೆ ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ಹೋಳಿ ಹಬ್ಬಕ್ಕೆ ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

Holi 2023: PM Modi greets people as color festival celebrated with enthusiasm across country

ನವದೆಹಲಿ,ಮಾ.14– ಹೋಳಿಹಬ್ಬ ಪ್ರತಿಯೊಬ್ಬರ ಜೀವನದಲ್ಲಿ ಹೊಸ ಉತ್ಸಾಹ ಮತ್ತು ಶಕ್ತಿ ತುಂಬಲಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಶುಭ ಕೋರಿದ್ದಾರೆ. Xನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿರುವ ಅವರು, ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು.

ಸಂತೋಷದಿಂದ ತುಂಬಿರುವ ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಉತ್ಸಾಹ ತುಂಬಲಿ. ದೇಶವಾಸಿಗಳಲ್ಲಿ ಏಕತೆಯ ಬಣ್ಣವನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಬರೆದುಕೊಂಡಿದ್ದಾರೆ.

ದೇಶದೆಲ್ಲೆಡೆ ಹೋಳಿಯ ಸಂಭ್ರಮ ಮನೆ ಮಾಡಿದೆ. ಭಾರತದಲ್ಲಿ ಸಡಗರದಿಂದ ಆಚರಿಸಲಾಗುವ ಅತ್ಯಂತ ಜನಪ್ರಿಯ ಹಿಂದೂ ಹಬ್ಬಗಳಲ್ಲಿ ಹೋಳಿ ಸಹ ಒಂದು. ಹೋಳಿ, ಜಗತ್ತಿಗೆ ಮೋಡಿ ಮಾಡಿರುವ ಹಬ್ಬ.ಈ ಹಬ್ಬ ಸಂಪ್ರದಾಯ, ಆಧುನಿಕತೆ, ಆಕರ್ಷಣೆ, ಜನಪ್ರಿಯತೆಗಳಲ್ಲಿ ವಿಶೇಷ ಸ್ಥಾನ ಗಳಿಸಿದೆ ಎಂದು ಹೇಳಿದ್ದಾರೆ.

RELATED ARTICLES

Latest News