Friday, March 14, 2025
Homeಬೆಂಗಳೂರುಬೆಂಗಳೂರಿಗರಿಗೆ ಸಂಕಟದ ಸುದ್ದಿ : ಬಸ್‌.. ಮೆಟ್ರೋ..ವಿದ್ಯುತ್‌ ಬಳಿಕ ಈಗ ನೀರಿನ ದರ ಏರಿಕೆ 'ಗ್ಯಾರಂಟಿ'

ಬೆಂಗಳೂರಿಗರಿಗೆ ಸಂಕಟದ ಸುದ್ದಿ : ಬಸ್‌.. ಮೆಟ್ರೋ..ವಿದ್ಯುತ್‌ ಬಳಿಕ ಈಗ ನೀರಿನ ದರ ಏರಿಕೆ ‘ಗ್ಯಾರಂಟಿ’

Bad news for Bengaluru residents: After bus, metro, electricity, now water price hike

ಬೆಂಗಳೂರು,ಮಾ.14- ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ನೀರಿನ ದರವನ್ನು 1 ಪೈಸೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ಉಸ್ತುವಾರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿಧಾನಪರಿಷತ್‌ನಲ್ಲಿ ಪ್ರಕಟಿಸಿದ್ದಾರೆ.

ಶೂನ್ಯವೇಳೆಯಲ್ಲಿ ಕಾಂಗ್ರೆಸ್‌‍ ಸದಸ್ಯ ರಾಮೋಜಿರಾವ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ಲೀಟರ್‌ ನೀರಿನ ದರವನ್ನು 10 ಪೈಸೆಗೆ ಏರಿಕೆ ಮಾಡಬೇಕೆಂದು ಬೆಂಗಳೂರು ನೀರು ಸರಬರಾಜು ಮಂಡಳಿ ಪ್ರಸ್ತಾವನೆ ಸಲ್ಲಿಸಿದೆ. ಏಕಾಏಕಿ ಇಷ್ಟು ದೊಡ್ಡ ಮಟ್ಟದ ದರವನ್ನು ಪರಿಷ್ಕರಣೆ ಮಾಡಿದರೆ ಗ್ರಾಹಕರಿಗೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ 1 ಪೈಸೆಯನ್ನು ಏರಿಕೆ ಮಾಡಲು ತೀರ್ಮಾನಿಸಿರುವುದಾಗಿ ಸಮರ್ಥಿಸಿಕೊಂಡರು.

2014ರಿಂದ ಬೆಂಗಳೂರಿನಲ್ಲಿ ನೀರಿನ ದರವನ್ನು ಪರಿಷ್ಕರಣೆ ಮಾಡಿಲ್ಲ. ಪರಿಣಾಮ ಬಿಡಬ್ಲ್ಯುಎಸ್‌‍ಎಸ್‌‍ಬಿಗೆ ಪ್ರತಿ ವರ್ಷ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಅಲ್ಲಿನ ಸಿಬ್ಬಂದಿಗೂ ವೇತನ ನೀಡಲು ಕಷ್ಟವಾಗುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸಿಬ್ಬಂದಿಗಳ ವೇತನ, ವಿದ್ಯುತ್‌ ಬಿಲ್‌, ನಿರ್ವಹಣೆ, ಪೈಪ್‌ ಅಳವಡಿಕೆ ಸೇರಿದಂತೆ ಮತ್ತಿತರ ಕೆಲಸಕಾರ್ಯಗಳಿಗೆ ಪ್ರತಿ ತಿಂಗಳು ಕೋಟ್ಯಂತರ ರೂ. ಹಣ ವ್ಯಯವಾಗುತ್ತದೆ. ನಾವು ದೂರಿನ ದರವನ್ನು ಪರಿಷ್ಕರಣೆ ಮಾಡದಿದ್ದರೆ ಇದನ್ನು ನಿರ್ವಹಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು.

2014ರಿಂದ ನೀರಿನ ದರ ಪರಿಷ್ಕರಣೆ ಆಗದ ಹಿನ್ನಲೆಯಲ್ಲಿ ಜಲಮಂಡಳಿಯವರು ಹಲವಾರು ಬಾರಿ ಪ್ರಸ್ತಾವ ಸಲ್ಲಿಸಿದ್ದರು. ಪ್ರತಿ ಲೀಟರ್‌ಗೆ 10 ಪೈಸೆಯಿಂದ 7 ಪೈಸೆವರೆಗೂ ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದ್ದರು.

ನಾವು ಒಂದು ಕಡೆ ಜಲಮಂಡಳಿ ನಿರ್ವಹಣೆ ಮತ್ತೊಂದು ಕಡೆ ಸಾರ್ವಜನಿಕರ ಹಿತವನ್ನು ಕಾಪಾಡಬೇಕು. ಹೀಗಾಗಿ ಎಲ್ಲವನ್ನು ಸರಿದೂಗಿಸಲು ಪ್ರತಿ ಲೀಟರ್‌ 1 ಪೈಸೆ ಹೆಚ್ಚಳ ಮಾಡುತ್ತಿದ್ದೇವೆ. ಸಾರ್ವಜನಿಕರು ಸ್ವಲ್ಪ ತೊಂದರೆಯಾದರೂ ಸಹಕಾರ ಕೊಡಬೇಕೆಂದು ಡಿ.ಕೆ.ಶಿವಕುಮಾರ್‌ ಮನವಿ ಮಾಡಿದರು.

RELATED ARTICLES

Latest News