Saturday, March 15, 2025
Homeರಾಷ್ಟ್ರೀಯ | Nationalವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿ 143 ಮಿಲಿಯನ್‌ ಡಾಲರ್‌ ಸಂಪಾದಿಸಿದ ಭಾರತ

ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿ 143 ಮಿಲಿಯನ್‌ ಡಾಲರ್‌ ಸಂಪಾದಿಸಿದ ಭಾರತ

ISRO earns $439 mn via foreign satellite launches in 10 years: Minister

ನವದೆಹಲಿ, ಮಾ.14- ಕಳೆದ 2015 ರಿಂದ 2024 ರ ಅವಧಿಯಲ್ಲಿ ಹಲವಾರು ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತವು 143 ಮಿಲಿಯನ್‌ ಡಾಲರ್‌ ಮೌಲ್ಯದ ವಿದೇಶಿ ವಿನಿಮಯ ಆದಾಯವನ್ನು ಗಳಿಸಿದೆ ಎಂದು ವರದಿಯಾಗಿದೆ.

ಬಾಹ್ಯಾಕಾಶ ಕ್ಷೇತ್ರವನ್ನು ನೋಡಿಕೊಳ್ಳುವ ಕೇಂದ್ರ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಅವರು ಲೋಕಸಭೆಗೆ ನೀಡಿರುವ ಮಾಹಿತಿಯಲ್ಲಿ ಈ ಅಂಕಿ ಅಂಶ ಬಹಿರಂಗಗೊಂಡಿದೆ.2015 ರಿಂದ ಡಿಸೆಂಬರ್‌ 2024 ರವರೆಗೆ ಕಳೆದ ಹತ್ತು ವರ್ಷಗಳಲ್ಲಿ, ಇಸ್ರೋದ ಪಿಎಸ್‌‍ಎಲ್‌ವಿ, ಎಲ್‌ವಿಎಂ 3 ಮತ್ತು ಎಸ್‌‍ಎಸ್‌‍ಎಲ್‌ವಿ ಉಡಾವಣಾ ವಾಹನಗಳಲ್ಲಿ ಒಟ್ಟು 393 ವಿದೇಶಿ ಉಪಗ್ರಹಗಳು ಮತ್ತು ಮೂರು ಭಾರತೀಯ ಗ್ರಾಹಕ ಉಪಗ್ರಹಗಳನ್ನು ವಾಣಿಜ್ಯ ಆಧಾರದ ಮೇಲೆ ಉಡಾವಣೆ ಮಾಡಲಾಗಿದೆ ಎಂದು ಸಚಿವಾಲಯ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ.

ಭಾರತವು 2014 ರಿಂದ ಇಲ್ಲಿಯವರೆಗೆ ಅಭಿವೃದ್ಧಿ ಹೊಂದಿದ ದೇಶಗಳು ಸೇರಿದಂತೆ 34 ದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡಿದೆ.ಒಟ್ಟು 393 ವಿದೇಶಿ ಉಪಗ್ರಹಗಳಲ್ಲಿ 232 ಯುಎಸ್‌‍, 83 ಯುಕೆ, ಸಿಂಗಾಪುರ್‌ (19), ಕೆನಡಾ (8), ಕೊರಿಯಾ (5), ಲಕ್ಸೆಂಬರ್ಗ್‌ (4), ಇಟಲಿ (4), ಜರ್ಮನಿ (3), ಬೆಲ್ಜಿಯಂ (3), ಫಿನ್‌ಲ್ಯಾಂಡ್‌ (3), ಫ್ರಾನ್‌್ಸ (3), ಸ್ವಿಟ್ಜರ್ಲೆಂಡ್‌ (2), ನೆದರ್ಲ್ಯಾಂಡ್‌ (2), ಜಪಾನ್‌ (2), ಇಸ್ರೇಲ್‌ (2), ಸ್ಪೇನ್‌ (2), ಆಸ್ಟ್ರೇಲಿಯಾ (1), ಆಸ್ಟ್ರೇಲಿಯಾ (1), ಯುನೈಟೆಡ್‌ ಅರಬ್‌ ಎಮಿರೇಟ್‌್ಸ (1), ಆಸ್ಟ್ರೇಲಿಯಾ (1), ಯುಎಇ ಯ ಒಂದು ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ.

RELATED ARTICLES

Latest News