Friday, March 14, 2025
Homeರಾಜ್ಯಬೆಂಗಳೂರಿನ ಕಸ ವಿಲೇವಾರಿಗೆ ಡಂಪಿಂಗ್‌ ಯಾರ್ಡ್‌ ಸಮಸ್ಯೆ

ಬೆಂಗಳೂರಿನ ಕಸ ವಿಲೇವಾರಿಗೆ ಡಂಪಿಂಗ್‌ ಯಾರ್ಡ್‌ ಸಮಸ್ಯೆ

Dumping yard problem for garbage disposal in Bengaluru

ಬೆಂಗಳೂರು,ಮಾ.14- ರಾಜ್ಯದ ಹಲವು ಕಡೆ ಕಸ ವಿಲೇವಾರಿ ಮಾಡಲು ಡಂಪಿಂಗ್‌ ಯಾರ್ಡ್‌ ಸಮಸ್ಯೆಯಿದೆ ಎಂದು ನಗರಾಭಿವೃದ್ಧಿ ಸಚಿವ ಸುರೇಶ್‌ಅವರು ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ವೇದವ್ಯಾಸ ಕಾಮತ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಡಂಪಿಂಗ್‌ ಯಾರ್ಡ್‌ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಸಕಲೇಶಪುರ, ಉಲ್ಲಾಳ, ಸುಳ್ಯ ವಿಧಾನಸಭೆ ಕ್ಷೇತ್ರಗಳಲ್ಲಿರುವ ಕಸ ವಿಲೇವಾರಿ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ಗ್ರಾಮದ ಘನ ತ್ಯಾಜ್ಯ ಘಟಕದಲ್ಲಿ ಯಾವುದೇ ಕುಸಿತ ಆಗಿಲ್ಲ. 2019 ರ ಆ.6ರಂದು ಸಂಸದ ಬಾರೀ ಮಳೆಯಿಂದಾಗಿ ಈ ಘಟಕ ಹಾನಿಗೊಳಗಾಗಿತ್ತು.

ಜಮೀನುಗಳಿಗೆ, ಆಸ್ತಿ, ಪಾಸ್ತಿಗಳಿಗೆ ಹಾನಿ ಉಂಟಾಗಿತ್ತು. ಒಟ್ಟು 14,19,88,398ರೂ. ಪರಿಹಾರ ನೀಡಲಾಗಿದೆ ಎಂದು ಹೇಳಿದರು. ಕೃಷಿ ಜಮೀನಿನ ಬೆಳೆ ಮತ್ತು ಮರಗಳಿಗೆ 5, 97,14,713ರೂ. ಗಳ ಪರಿಹಾರ ನೀಡಲಾಗಿದೆ ಎಂದರು.

RELATED ARTICLES

Latest News