ಜಮ್ಮು, ನ.8 (ಪಿಟಿಐ)-ಪಾಸ್‍ಪೋರ್ಟ್ ಕಾಯ್ದೆ ಉಲ್ಲಂಘನೆ ಹಾಗೂ ಮಾನವ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿಂಗ್ಯಾ ಮುಸ್ಲೀಂ ನಾಯಕರೊಬ್ಬರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ. ಬಂಧಿತ ಆರೋಪಿಯನ್ನು ಜಾಫರ್ ಆಲಂ ಎಂದು ಗುರುತಿಸಲಾಗಿದೆ.
ಈತ ರೋಹಿಂಗ್ಯಾಗಳನ್ನು ಅಕ್ರಮವಾಗಿ ಭಾರತ ಮತ್ತು ಇತರ ದೇಶಗಳಿಗೆ ರವಾನಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಬಂದ ಸುಳಿವಿನ ಮೇರೆಗೆ ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಹಲವು ಸ್ಥಳಗಳಲ್ಲಿ ಶೋಧ ನಡೆಸಿದ ಎನ್‍ಐಎ ಅಧಿಕಾರಿಗಳು ಜಾಫರ್ ಅಲಂನನ್ನು ಬಂಧಿಸಿದ್ದಾರೆ.
ಎರಡು ತಲೆ ಹಾವು, ಜಿಂಕೆ ಕೊಂಬು, ಆನೆ ದಂತ ವಶ
ಈ ದಾಳಿಗಳನ್ನು ಮ್ಯಾನ್ಮಾರ್ ವಲಸಿಗರು ವಾಸಿಸುವ ಕೊಳೆಗೇರಿಗಳಿಗೆ ಸೀಮಿತಗೊಳಿಸಲಾಗಿದೆ ಮತ್ತು ಪಾಸ್‍ಪೋರ್ಟ್ ಕಾಯ್ದೆಯ ಉಲ್ಲಂಘನೆ ಮತ್ತು ಮಾನವ ಕಳ್ಳಸಾಗಣೆಗೆ ಸಂಬಂಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಜಾಫರ್ ಆಲಂ ಅವರನ್ನು ಜಮ್ಮುವಿನ ಬತಿಂಡಿ ಪ್ರದೇಶದಲ್ಲಿನ ಅವರ ತಾತ್ಕಾಲಿಕ ನಿವಾಸದಿಂದ ಮುಂಜಾನೆ 2 ಗಂಟೆಯ ಸುಮಾರಿಗೆ ಬಂಧಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.