ವಾಷಿಂಗ್ಟನ್, ಮಾ.15- ಪ್ಯಾಲೇಸ್ತೀನ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರಣ ವೀಸಾ ರದ್ದುಗೊಳಿಸಿದ ಬಳಿಕ ಭಾರತೀಯ ವಿದ್ಯಾರ್ಥಿ ಸ್ವಯಂ ಗಡಿಪಾರಾಗಿದ್ದಾರೆ. ಹೋಮ್ಯಾಂಡ್ ಸೆಕ್ಯುರಿಟಿ ಸೆಕ್ರೆಟರಿ ಕ್ರಿಸ್ಟಿ ನೋಮ್ ಅವರು ವಿಮಾನ ನಿಲ್ದಾಣದಲ್ಲಿ ರಂಜನಿ ಶ್ರೀನಿವಾಸನ್ ಅವರ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸುವ ಯಾರಾದರೂ ದೇಶದಲ್ಲಿರಬಾರದು ಎಂದು ಹೇಳಿದ್ದಾರೆ.
ವೀಸಾ ರದ್ದುಗೊಂಡಿರುವ ರಂಜನಿ ಶ್ರೀನಿವಾಸನ್ ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಗರ ಯೋಜನೆಯಲ್ಲಿ ಡಾಕ್ಟರೇಟ್ ವಿದ್ಯಾರ್ಥಿಯಾಗಿದ್ದರು. ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸಿದ್ದಕ್ಕಾಗಿ ರಂಜನಿ ಶ್ರೀನಿವಾಸನ್ ಅವರ ವೀಸಾವನ್ನು ಮಾರ್ಚ್ 5 ರಂದು ರದ್ದುಪಡಿಸಲಾಗಿದೆ ಎಂದು ಯುಎಸ್ ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆ ತಿಳಿಸಿತ್ತು.