Saturday, March 15, 2025
Homeಕ್ರೀಡಾ ಸುದ್ದಿ | Sportsಐಪಿಎಲ್ ಹಬ್ಬಕ್ಕೆ ದಿನಗಣನೆ : ಮಾ.22ರಂದು ಕೆಕೆಆರ್ vs ಆರ್‌ಬಿ ಮುಖಾಮುಖಿ

ಐಪಿಎಲ್ ಹಬ್ಬಕ್ಕೆ ದಿನಗಣನೆ : ಮಾ.22ರಂದು ಕೆಕೆಆರ್ vs ಆರ್‌ಬಿ ಮುಖಾಮುಖಿ

IPL 2025 starts on March 22, KKR vs RCB to kick-start Indian Premier League

ನವದೆಹಲಿ,ಮಾ.15-ವಿಶ್ವದ ಶ್ರೀಮಂತ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಅಭಿಮಾನಿಗಳಲ್ಲಿ ಈಗಾಗಲೇ ಐಪಿಎಲ್ ಜ್ವರ ಶುರುವಾಗಿದೆ. ಮಾ.22ರಂದು ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಬಿ) ತಂಡಗಳು ಮುಖಾಮುಖಿಯಾಗಲಿವೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ ಅವರಂತಹ ದಿಗ್ಗಜ ಆಟಗಾರರು ಟಾಸ್ ಮಾಡಲು ಬರುತ್ತಿದ್ದ ದಿನಗಳು ಮುಗಿದಿವೆ. ಈ ಆಟಗಾರರು ತಂಡದಲ್ಲಿದ್ದರೂ ಕೂಡ ನಾಯಕತ್ವವನ್ನು ಯುವ ಆಟಗಾರರು ವಹಿಸಿಕೊಂಡಿದ್ದಾರೆ. ಮುಂಬರುವ 18ನೇ ಆವೃತ್ತಿಯಲ್ಲಿ ಹೊಸ ಮತ್ತು ಯುವ ಆಟಗಾರರು ತಂಡವನ್ನು ಮುನ್ನಡೆಸಲಿದ್ದಾರೆ.

ಮಾ.14ರಂದು ಟೀಂ ಇಂಡಿಯಾ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರನ್ನಾಗಿ ಘೋಷಿಸಲಾಗಿದ್ದು, ಈ ಮೂಲಕ ಮುಂಬರುವ ಐಪಿಎಲ್ 2025 ಆವೃತ್ತಿಗೆ ಎಲ್ಲ ಹತ್ತು ತಂಡಗಳಿಗೆ ಅಧಿಕೃತವಾದಿ ನಾಯಕರನ್ನು ಘೋಷಿಸಲಾಗಿದೆ.

ಈ ಆವೃತ್ತಿಯಲ್ಲಿ ಪ್ಯಾಟ್ ಕಮ್ಮಿನ್ಸ್ ಮಾತ್ರ ಏಕೈಕ ವಿದೇಶಿ ನಾಯಕರಾಗಿದ್ದರೆ, ಉಳಿದ ಒಂಬತ್ತು ಮಂದಿ ಭಾರತೀಯ ಆಟಗಾರರು ನಾಯಕರಾಗಿದ್ದಾರೆ. ಫೆಬ್ರುವರಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಜತ್ ಪಾಟೀದಾರ್ ಅವರನ್ನು ನಾಯಕರನ್ನಾಗಿ ನೇಮಿಸಿದ್ದು, ಆರ್‌ಸಿಬಿಯನ್ನು ಪಾಟೀದಾರ್ ಮುನ್ನಡೆಸಲಿದ್ದಾರೆ. ಆ‌ರ್ಸಿಬಿ ತಂಡದಲ್ಲೇ ವಿರಾಟ್ ಕೊಹ್ಲಿ ಇದ್ದಾರೆ.

ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ವೆಂಕಟೇಶ್ ಅಯ್ಯರ್ ಉಪನಾಯಕನಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಈ ಬಾರಿ ಲಕ್ಕೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದಾರೆ.
2024ರ ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಮೂರನೇ ಐಪಿಎಲ್ ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದ್ದಶ್ರೇಯಸ್‌ ಅಯ್ಯರ್ ಇದೀಗ ಪಂಜಾಬ್ ಕಿಂಗ್ಸ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ಫ್ರಾಂಚೈಸಿಯನ್ನು ತಮ್ಮ ಚೊಚ್ಚಲ ಐಪಿಎಲ್ ಪ್ರಶಸ್ತಿಯತ್ತ ಮುನ್ನಡೆಸಲಿದ್ದಾರೆ.
ಐಪಿಎಲ್ ಆರಂಭಿಕ ಪಂದ್ಯ ಮಾ. 22 ರಂದು ನಡೆಯಲಿದ್ದು, ಫೈನಲ್ ಪಂದ್ಯ ಮೇ 25 ರಂದು ರಂದು ನಡೆಯಲಿದೆ. ಈ ಆವೃತ್ತಿಯಲ್ಲಿ 74 ಪಂದ್ಯಗಳು 13 ಸ್ಥಳಗಳಲ್ಲಿ ನಡೆಯಲಿದ್ದು,
12 ಡಬಲ್-ಹೆಡರ್ ಪಂದ್ಯಗಳು ಸೇರಿವೆ. ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಮತ್ತು ಸಂಜೆ 7.30ಕ್ಕೆ ಪಂದ್ಯಗಳು ಪ್ರಾರಂಭವಾಗಲಿವೆ.

ಲೀಗ್ ಹಂತದ ಅಂತ್ಯದ ನಂತರ, ಪ್ಲೇಆಪ್‌ಗಳು ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿವೆ. ಹೈದರಾಬಾದ್ ಕ್ರಮವಾಗಿ ಮೇ 20 ಮತ್ತು ಮೇ 21 ರಂದು ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಅನ್ನು ಆಯೋಜಿಸಲಿದೆ. ನಂತರ ಕೋಲ್ಕತ್ತಾದಲ್ಲಿ ಮೇ. 23 ರಂದು ಕ್ವಾಲಿಫೈಯರ್ 2 ನಡೆಯಲಿದೆ.

10 ತಂಡಗಳು, 10 ನಾಯಕರು
ಕೋಲ್ಕತ್ತಾ ನೈಟ್ ರೈಡರ್ಸ್ – ಅಜಿಂಕ್ಯ ರಹಾನೆ
ಸನ್‌ ರೈಸರ್ಸ್ ಹೈದರಾಬಾದ್ ಪ್ಯಾಟ್ ಕಮ್ಮಿನ್ಸ್
ರಾಜಸ್ಥಾನ್ ರಾಯಲ್ಸ್ – ಸಂಜು ಸ್ಯಾನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು – ರಜತ್ ಪಾಟೀದಾರ್
ಚೆನ್ನೈ ಸೂಪರ್ ಕಿಂಗ್ಸ್ – ರುತುರಾಜ್ ಗಾಯಕ್ವಾಡ್
ಡೆಲ್ಲಿ ಕ್ಯಾಪಿಟಲ್ಸ್ – ಅಕ್ಷರ್ ಪಟೇಲ್
ಲಕ್ಕೋ ಸೂಪರ್ ಜೈಂಟ್ಸ್ – ರಿಷಭ್ ಪಂತ್
ಪಂಜಾಬ್ ಕಿಂಗ್ಸ್- ಶ್ರೇಯಸ್‌ ಅಯ್ಯರ್
ಗುಜರಾತ್ ಟೈಟಾನ್ಸ್ – ಶುಭಮನ್ ಗಿಲ್
ಮುಂಬೈ ಇಂಡಿಯನ್ ಹಾರ್ಧಿಕ್ ಪಾಂಡ್ಯ

RELATED ARTICLES

Latest News