ನವದೆಹಲಿ,ನ.8- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ವರುಣ್ ಗಾಂಧಿ ಅವರ ಭೇಟಿ ರಾಜಕೀಯ ವಲಯದಲ್ಲಿ ಹಲವಾರು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಉತ್ತರ ಪ್ರದೇಶದ ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಕೇದಾರನಾಥ ದೇವಾಲಯದಲ್ಲಿ ಒಟ್ಟಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಲು ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕವಾಗಿ ಅಪರೂಪಕ್ಕೆ ಒಟ್ಟಿಗೆ ಕಾಣಿಸಿಕೊಳ್ಳುವ ಸೋದರ ಸಂಬಂಗಳ ನಡುವಿನ ಸಭೆಯು ವರುಣ್ ಗಾಂಧಿಯವರ ರಾಜಕೀಯ ಭವಿಷ್ಯದ ಬಗ್ಗೆ ಕೆಲವು ವಲಯಗಳಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಸಂಜಯ್ ಗಾಂಧಿ ಮತ್ತು ಮೇನಕಾ ಗಾಂಧಿಯವರ ಪುತ್ರ ವರುಣ್ ಗಾಂಧಿ ಇತ್ತೀಚಿನ ತಿಂಗಳುಗಳಲ್ಲಿ ಪ್ರಮುಖ ಬಿಜೆಪಿ ಸಭೆಗಳಲ್ಲಿ ಕಾಣಿಸಿಕೊಂಡಿಲ್ಲ ಮತ್ತು ಈಗ ರದ್ದಾದ ಕೃಷಿ ಕಾನೂನುಗಳು ಸೇರಿದಂತೆ ನಿರ್ಣಾಯಕ ವಿಷಯಗಳ ಕುರಿತು ಅವರ ಕಾಮೆಂಟ್‍ಗಳು ಕೆಲವೊಮ್ಮೆ ಪಕ್ಷದ ನಿಲುವಿಗೆ ಭಿನ್ನವಾಗಿವೆ.
ಮೋದಿ ವಿರುದ್ಧ ಹರಿಹಾಯ್ದ ಅಸಾದುದ್ದೀನ್ ಓವೈಸಿ
ಈ ಇಬ್ಬರು ಗಾಂಯರ ನಡುವಿನ ಸಭೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಪತ್ರಿಕಾಗೋಷ್ಠಿಯಲ್ಲಿ ವರುಣ್ ಗಾಂಯನ್ನು ಕಾಂಗ್ರೆಸ್‍ಗೆ ಸ್ವಾಗತಿಸುತ್ತೀರಾ ಎಂಬ ಪ್ರಶ್ನೆಗೆ ಕಾಂಗ್ರೆಸ್ ವಿರುದ್ಧ ಹೋರಾಡುತ್ತಿರುವ ಬಿಜೆಪಿ ಮತ್ತು ಆರ್‍ಎಸ್‍ಎಸ್ ಸಿದ್ಧಾಂತವನ್ನು ವರುಣ್ ಅಳವಡಿಸಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
ರಾಹುಲ್ ಗಾಂಧಿ ಕಳೆದ ಮೂರು ದಿನಗಳಿಂದ ಉತ್ತರಾಖಂಡದ ಕೇದಾರನಾಥದಲ್ಲಿದ್ದು, ವರುಣ್ ಗಾಂಧಿ ಮಂಗಳವಾರ ತಮ್ಮ ಕುಟುಂಬದೊಂದಿಗೆ ಶಿವನಿಗೆ ಸಮರ್ಪಿತವಾದ ದೇವಾಲಯಕ್ಕೆ ಭೇಟಿ ನೀಡಿದ್ದರು.