Monday, March 17, 2025
Homeಜಿಲ್ಲಾ ಸುದ್ದಿಗಳು | District Newsಹಾವೇರಿ : ರೈತರ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕದಿಯುತ್ತಿದ್ದ ಖರ್ತನಾಕ್ ಕಳ್ಳರ ಬಂಧನ

ಹಾವೇರಿ : ರೈತರ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕದಿಯುತ್ತಿದ್ದ ಖರ್ತನಾಕ್ ಕಳ್ಳರ ಬಂಧನ

Haveri: Thieves who stole farmers' crops arrested

ಹಾವೇರಿ, ಮಾ.17- ರೈತರ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕಳ್ಳತನ ಮಾಡುತ್ತಿದ್ದ ಖರ್ತನಾಕ್ ಐವರು ಕಳ್ಳರನ್ನು ಸವಣೂರು ಪೊಲೀಸರು ಬಂಧಿಸಿದ್ದಾರೆ. ದುರಗಪ್ಪ ಕೊರವರ, ಗಂಗಾಧರ ಕೊಕನೂರ, ಮಾಂತೇಶ ಗದಗ, ಅಮೀತ ಗೋಸಾವಿ ಹಾಗೂ ಅಭಿಷೇಕ ನರೇಗಲ್ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ 10.27 ಲಕ್ಷ ರೂಪಾಯಿ ಮೌಲ್ಯದ ಜೋಳ, ಗೋವಿನಜೋಳ, ಸಾವಿ, ಗೋದಿ, ಕಡ್ಲಿ ಸೇರಿದಂತೆ ವಿವಿಧ ಧಾನ್ಯಗಳು ಹಾಗೂ ಕಳ್ಳತನಕ್ಕೆ ಬಳಸಿದ ಒಂದು ಬೊಲೆರೋ ಹಾಗೂ ಒಂದು ಬೈಕ್ ಜಪ್ತಿ ಮಾಡಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಹಲವು ತಿಂಗಳನಿಂದ ನಿದ್ದೆಗೆಡೆಸಿದ್ದ ಚೋರರು ಸಿಕ್ಕಿಬಿದ್ದಿರುವುದರಿಂದ ಇಲ್ಲಿನ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಇವರಿಗೆ ನಾಯಾಲಯದಲ್ಲಿ ವಕೀಲರು ವಕಾಲತ್ತು ತೆಗೆದುಕೊಳ್ಳಬಾರದು ಎಂದು ರೈತರು ಮಾನವಿ ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಹಾವೇರಿ ಜಿಲ್ಲೆಯಲ್ಲಿ ರೈತರು ಬೆಳೆದ ದವಸ ಧಾನ್ಯಗಳನ್ನು ಕಳ್ಳರು ಕದ್ದುಕೊಂಡು ಪರಾರಿ ಆಗುತ್ತಿದ್ದರು. ವರ್ಷವಿಡಿ ಕಷ್ಟಪಟ್ಟು ಬೆಳೆದಿದ್ದ ರೈತರಿಗೆ ದವಸ ಧಾನ್ಯಗಳನ್ನು ರಕ್ಷಣೆ ಮಾಡಿಟ್ಟುಕೊಳ್ಳುವುದು ದೊಡ್ಡ ಸವಾಲಾಗಿತ್ತು. ಕಳೆದ ಮಾ. 8 ರಂದು ಇದೇ ಕಳ್ಳರು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತೆವರಮೆಳ್ಳಳ್ಳಿ ಗ್ರಾಮದ ರೈತ ಶಂಕ್ರಪ್ಪ ದೊಡ್ಡಮನಿ ಎಂಬುವರಿಗೆ ಸೇರಿದ ದವಸ ಧಾನ್ಯಗಳನ್ನು ಕಳ್ಳತನ ಮಾಡಿದ್ದರು.

ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಅಂಶುಕುಮಾರ ಆರೋಪಿಗಳ ಪತ್ತೆಗಾಗಿ ಸವಣೂರು ಸಿಪಿಐ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.

ಈ ಕಳ್ಳತನ ಪ್ರಕರಣ ಪತ್ತೆಯಿಂದ ಒಟ್ಟು ಶಿಗ್ಗಾಂವಿ, ಬಂಕಾಪುರ, ಹುಲಗೂರು ಹಾಗೂ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಒಟ್ಟು ಒಂಬತ್ತು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ, ಹಾವೇರಿ ಜಿಲ್ಲೆಯ ರೈತರು ಮಾತ್ರ ಆಕ್ರೋಶ ಹೊರಹಾಕಿದ್ದಾರೆ. ದೇಶಕ್ಕೆ ಅನ್ನ ಹಾಕುವ ರೈತನಿಗೆ ಕಳ್ಳರು ಕಾಟಡುತ್ತಿದ್ದಾರೆ.

ಮನೆಯ ಮುಂದೆ ಇಟ್ಟ ಚೀಲ ಮತ್ತು ಜಮೀನಿನಲ್ಲಿದ್ದ ರಾಶಿಯ ಚೀಲವನ್ನ ಕಳ್ಳತನ ಮಾಡುತ್ತಿದ್ದಾರೆ. ಜಿಲ್ಲೆಯ ಯಾವುದೇ ವಕೀಲರು ಇವರ ಪರವಾಗಿ ವಕಾಲತ್ತು ವಹಿಸಬಾರದು. ಅವರಿಗೆ ಜಾಮೀನು ಸಹ ಕೊಡಸಬಾರದು ಎಂದು ಎಂದು ಜಿಲ್ಲಾ ವಕೀಲರ ಸಂಘಕ್ಕೆ ಮನವಿ ಮಾಡಿದ್ದಾರೆ. ಮನವಿ ಮಾಡಿದ್ದಾರೆ.

RELATED ARTICLES

Latest News