Tuesday, March 18, 2025
Homeರಾಜಕೀಯ | PoliticsPFI ಏಜೆಂಟ್ ಸಿದ್ದರಾಮಯ್ಯನವರಿಂದ RSS ಪಾಠ ಕಲಿಯಬೇಕಾಗಿಲ್ಲ : ಅಶೋಕ್ ಬಹಿರಂಗ

PFI ಏಜೆಂಟ್ ಸಿದ್ದರಾಮಯ್ಯನವರಿಂದ RSS ಪಾಠ ಕಲಿಯಬೇಕಾಗಿಲ್ಲ : ಅಶೋಕ್ ಬಹಿರಂಗ

PFI agent Siddaramaiah doesn't need to learn RSS lessons: R. Ashok openly

ಬೆಂಗಳೂರು, ಮಾ.18- ಯಾರೋ ಕಟ್ಟಿದ ಹುತ್ತದಲ್ಲಿ ಬಂದು ಅಡಗಿ ಕುಳಿತುಕೊಳ್ಳುವ ಹಾವಿನ ರೀತಿ ರಾಜ್ಯದಲ್ಲಿ ಅಧಿಕಾರ ಅನುಭವಿಸುವುದು ದೊಡ್ಡದಲ್ಲ. ನಿಮಗೆ ತಾಕತ್ತಿದ್ದರೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕತ್ವ ವಹಿಸಿಕೊಂಡು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಿ ನೋಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಬಹಿರಂಗ ಸವಾಲು ಹಾಕಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಸಮಾಜವಾದದ ಹೆಸರಿನಲ್ಲಿ ರಾಜಕೀಯ ಆರಂಭಿಸಿ, ಅಹಿಂದ ಹೆಸರಿನಲ್ಲಿ ಅಧಿಕಾರ ಅನುಭವಿಸಿ, ಈಗ ಕುರ್ಚಿ ಉಳಿಸಿಕೊಳ್ಳಲು ನಕಲಿ ಗಾಂಧಿ ಕುಟುಂಬದ ಗುಲಾಮಗಿರಿ ಮಾಡುತ್ತಿರುವ ಸಿದ್ದರಾಮಯ್ಯನವರಂತಹ ಪಿ.ಎಫ್.ಐ.ಏಜೆಂಟ್ ಗಳಿಂದ ಆರ್.ಎಸ್.ಎಸ್ ಪಾಠ ಕಲಿಯಬೇಕಾಗಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

ಸ್ವಾಮಿ ಸಿದ್ದರಾಮಯ್ಯನವರೇ, ಆರ್.ಎಸ್.ಎಸ್ ಅನ್ನು ದೂಷಿಸಿದರೆ ನಕಲಿ ಗಾಂಧಿಗಳನ್ನ ಮೆಚ್ಚಿಸಿ ಇನ್ನೊಂದಷ್ಟು ದಿನ ಕುರ್ಚಿಗೆ ಅಂಟಿಕೊಂಡು ಕೂತಿರಬಹುದು ಎನ್ನುವ ಭ್ರಮೆಯಿಂದ ಹೊರಗೆ ಬನ್ನಿ. ನಿಮ್ಮ ಪಕ್ಷದವರೇ ನಿಮ್ಮ ಕುರ್ಚಿಯನ್ನ ಒದ್ದು ಕಿತ್ತುಕೊಳ್ಳುವ ದಿನ ಬಹಳ ದೂರವಿಲ್ಲ ಎಂದು ಎಚ್ಚರಿಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ, ಆರ್‌ಎಸ್ಎಸ್‌ನಂತಹ ಒಂದು ನಿಸ್ವಾರ್ಥ, ರಾಷ್ಟ್ರೀಯವಾದಿ ಸಂಘಟನೆ ಬಗ್ಗೆ ಮಾತಾಡಲು ಒಂದು ಯೋಗ್ಯತೆ ಬೇಕು. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವ ದೇಶದ್ರೋಹಿಗಳನ್ನು ಸಮರ್ಥನೆ ಮಾಡಿಕೊಳ್ಳುವ ಕಾಂಗ್ರೆಸ್‌ನವರಿಗೆ ಆ ಯೋಗ್ಯತೆ ಇಲ್ಲ ಬಿಡಿ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಅತಿಯಾದ ತುಷ್ಟಿಕರಣ ನೀತಿಯ ಪರಿಣಾಮವಾಗಿ ಇಂದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ಇದು ಅಕ್ಷರಶಃ ಸತ್ಯ. ಮುಸ್ಲಿಮರ ಋಣದಲ್ಲಿರುವ ಕಾಂಗ್ರೆಸ್ ಸರ್ಕಾರ, ಮತಾಂಧ ಶಕ್ತಿಗಳ ಮುಂದೆ ಶರಣಾಗಿದೆ, ಮೂಲಭೂತವಾದಿಗಳ ತಾಳಕ್ಕೆ ಕುಣಿಯುತ್ತಿದೆ. ಆದ್ದರಿಂದಲೇ ಇವತ್ತು ಕಾಂಗ್ರೆಸ್ ಸರ್ಕಾರಕ್ಕೆ ವಿಧಾನಸೌಧದ ಮುಂದೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದರೂ ನಿಮ್ಮ ಬ್ರದರ್ಸ್ ಅಮಾಯಕರು, ಪ್ಯಾಲೆಸ್ತೀನ್ ಧ್ವಜ ಹಾರಿಸಿದರೂ ನಿಮ್ಮ ಬ್ರದರ್ಸ್ ಅಮಾಯಕರು, ಬಾಂಬ್ ಇಟ್ಟರೂ ನಿಮ್ಮ ಬ್ರದರ್ಸ್ ಅಮಾಯಕರು.

ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ಕಲ್ಲು ತೂರಿದರೂ ನಿಮ್ಮ ಬ್ರದರ್ಸ್ ಅಮಾಯಕರು! ಪೊಲೀಸ್ ಠಾಣೆ ಸುಟ್ಟರೂ ನಿಮ್ಮ ಬ್ರದರ್ಸ್ ಅಮಾಯಕರು..! ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದರೂ ನಿಮ್ಮ ಬ್ರದರ್ಸ್ ಅಮಾಯಕರು..!ಹಿಂದೂಗಳ ಕೊಲೆ ಮಾಡಿದರೂ ನಿಮ್ಮ ಬ್ರದರ್ಸ್ ಅಮಾಯಕರು..! ಎಂದು ಟೀಕಿಸಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಭಯೋತ್ಪಾದಕರಿಂದ, ಭಯೋತ್ಪಾದಕರಿಗಾಗಿ ಭಯೋತ್ಪಾದಕರಿಗೋಸ್ಕರ. ಇದಕ್ಕಾಗಿ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ತುಷ್ಟಿಕರಣದಲ್ಲಿ ತೊಡಗಿದೆ ಎನ್ನುವುದು ಶತಸಿದ್ದ ಎಂದು ಆರೋಪಿಸಿದ್ದಾರೆ.

RELATED ARTICLES

Latest News