ಹಾಸನ, ಮಾ.18- ಹೆಣ್ಣಾಗಲಿ ಗಂಡಾಗಲಿ ನಮಗೊಂದು ಮಗುವಿರಲಿ ಎಂದು ಮಕ್ಕಳಾಗದ ದಂಪತಿ ಪ್ರತಿನಿತ್ಯ ಕೊರಗುತ್ತಾರೆ ಆದರೆ ಇಲ್ಲೊಬ್ಬ ನಿರ್ಧಯಿ ತಾಯಿಯೊಬ್ಬಳು ನವಜಾತ ಹೆಣ್ಣು ಶಿಶುವನ್ನು ರಾಜಕಾಲುವೆಗೆ ಎಸೆದು ಹೋಗಿರುವ ಅಮಾನವೀಯ ಘಟನೆ ಕುವೆಂಪುನಗರದಲ್ಲಿ ನಡೆದಿದೆ.
ಆಗತಾನೆ ಜನಿಸಿದ ಶಿಶುವನ್ನು ಘೋರ ಮನಸ್ಸಿನಿಂದ ಹರಿಯವ ರಾಜಾಕಾಲುವೆಯಲ್ಲಿ ಎಸೆದು ಹೋಗಿದ್ದು, ಶಿಶುವನಲ್ಲಿ ಕರಳ ಬಳ್ಳಿಯೂ ಹಾಗೆ ಇದ್ದು ಕಣ್ಣು ಬಿಡುವ ಮುನ್ನವೇ ಮಗುವರನ್ನು ಇಂಥ ದುರಂತಕ್ಕೀಡು ಮಾಡಿರುವುದು ಎಂಥವರಿಗೂ ಕರಳು ಹಿಂಡಿಬರುತ್ತದೆ.
ಕಾಲುವೆಯಲ್ಲಿ ಮಗುವಿನ ಮೃತ ದೇಹ ಕಂಡ ಸಾರ್ವಜನಿಕರು ಕೆಆರ್‌ಪುರಂ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಹೆಣ್ಣು ಮಗು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.