ಮೀರತ್, ಮಾ.19- ಪ್ರಿಯಕರನ ಜೊತೆ ಸೇರಿ ಪತಿಯನ್ನು ಇರಿದು ಕೊಂದ ಪತ್ನಿ ಆತನ ದೇಹವನ್ನು ತುಂಡು ಮಾಡಿ, ಸಿಮೆಂಟ್ ತುಂಬಿದ ಡ್ರಮ್‌ನಲ್ಲಿ ಹಾಕಿ ಸೀಲ್ ಮಾಡಿಮುಚ್ಚಿಟ್ಟ ಭೀಕರ ಘಟನೆ ಉತ್ತರಪ್ರದೇಶದ ಮೀರತ್‌ನಲ್ಲಿ ನಡೆದಿದೆ. ನೌಕಾಪಡೆಯ ಉದ್ಯೋಗಿ ಸೌರಭ್ ರಜಪೂತ್ (29) ಕೊಲೆಯಾದ ವ್ಯಕ್ತಿಯಾಗಿದ್ದು, ಆತನ ಪತ್ನಿ ಮುಸ್ಕಾನ್ (27) ಮತ್ತು ಆಕೆಯ ಪ್ರಿಯಕರ ಸಾಹಿಲ್ ( 25)ನನ್ನು ಪೊಲೀಸರು ಬಂಧಿಸಿದ್ದಾರೆ.
ಬ್ರಹ್ಮಪುರಿಯ ಇಂದ್ರಾನಗರ ಹಂತ 2 ರ ಸೌರಭ್ 2016 ರಲ್ಲಿ ಗೌರಿಪುರದ ಮುಸ್ಕಾನ್ ರಸ್ತೋಗಿ ಅವರನ್ನು ಪ್ರೇಮ ವಿವಾಹವಾಗಿದ್ದರು ಅವರ ಕುಟುಂಬಗಳು ಅವರ ಸಂಬಂಧದಿಂದ ಅತೃಪ್ತರಾಗಿದ್ದರು ಇದರಿಂದಾಗಿ ದಂಪತಿಗಳು ಪ್ರತ್ಯೇಕ ವಾಗಿ ವಾಸಿಸುತ್ತಿದ್ದರು ಅವರಿಗೆ ಮಗಳು ಹುಟ್ಟಿದ್ದಳು ಇತ್ತೀಚೆಗೆ ಇಂದ್ರಾನಗರ ಹಂತ 1ದಲ್ಲಿ ಬಾಡಿಗೆ ಮನೆ ಮಾಡಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಮಾರ್ಚ್ 4 ರಂದು ಸೌರಭ್ ರಜಪೂತ್ ನಿಗೂಢವಾಗಿ ನಾಪತ್ತೆಯಾಗಿದ್ದರು ಆದರೆ ಇದರ ಬಗ್ಗೆ ಚಿಂತೆ ಇಲ್ಲದಂತೆ ಸೌರಭ್ ಅವರ ವಿಚಾರಣೆಯ ಸಮಯದಲ್ಲಿ, ಮಾರ್ಚ್ 4 ರಂದು ಸೌರಬ್‌ಗೆ ಇರಿದು ಕೊಂದಿದ್ದಾಗಿ ಇಬ್ಬರೂ ಒಪ್ಪಿಕೊಂಡರು. ನಂತರ ಇಬ್ಬರೂ ಆತನ ದೇಹವನ್ನು ಕತ್ತರಿಸಿ, ಶವಗಳನ್ನು ಡ್ರಮ್‌ನಲ್ಲಿ ಇರಿಸಿ, ಸಿಮೆಂಟ್‌ನಿಂದ ಮುಚ್ಚಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.
ಫೋನ್‌ನಿಂದ ಸಂದೇಶಗಳನ್ನು ಕಳುಹಿಸುವ ಮೂಲಕ ಮುಸ್ಕಾನ್ ಸಂಬಂಧಿಕರ ದಾರಿ ತಪ್ಪಿಸಲು ಪ್ರಯತ್ನಿಸಿದ್ದಾರೆ. ಕೊಲೆ ನಂತರ, ಅವರು ಸಾಹಿಲ್ ಅವರೊಂದಿಗೆ ಗಿರಿಧಾಮಕ್ಕೆ ವಿಹಾರಕ್ಕೆ ಹೋಗಿ ತನ್ನಪಾಡಿಗೆ ಏಗೂ ಆಗಿಲ್ಲ ಎಂಬಂತೆ ಕಾಲ ಕಳೆದಿದ್ದರು.ಕೊನೆಗೆ ಸೌರಭ್ ಕುಟುಂಬದವರು ಪೊಲೀಸರಿಗೆ ದುರು ನೀಡಿದ ನಂತರ ತನಿಖೆ ಕೈಗೊಂಡಾಗ ಈ ಭೀಕೆ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಯುತ್ತದೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.