ಮೆಹ್ಸಾನಾ, ಮಾ.19- ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿರುವ ನಾಸಾದ ಗಗನಯಾತ್ರಿ ಸುನೀತಾ ವಿಲಿಯಮ್ಸೌಅವರ ಪೂರ್ವಜರ ಹಳ್ಳಿಯ ನಿವಾಸಿಗಳು ಇಂದು ಬೆಳಿಗ್ಗೆ ಸುನೀತಾ ಅವರ ಸಹೋದ್ಯೋಗಿ ಬುಚ್ ವಿಲೋರ್ ಅವರ ಪುನರಾಗಮದಿಂದ ಸಂಭ್ರಮಾಚರಣೆಯಲ್ಲಿ ತೊಡಗಿದರು.
ದೂರದರ್ಶನದ ಪರದೆಯಲ್ಲಿ ನೇರಪ್ರಸಾರ ವೀಕ್ಷಿಸಲು ಹಳ್ಳಿಯ ದೇವಸ್ಥಾನದಲ್ಲಿ ಜಮಾಯಿಸಿದ್ದರಿಂದ ಎಲ್ಲಾ ಕಣ್ಣುಗಳು ಸುನಿತಾ ವಿಲಿಯಮ್ಸೌ ಅವರು ಸುರಕ್ಷಿತವಾಗಿ ಭೂಮಿಗೆ ಬಂದಿಳಿದ ತಕ್ಷಣ, ನಿವಾಸಿಗಳು ಪಟಾಕಿ ಸಿಡಿಸಿ, ನೃತ್ಯಮಾಡಿ ಹರ್ ಹರ್ ಮಹಾದೇವ್ ಎಂದು ಘೋಷಣೆ ಕೂಗಿದರು.
ಸುನೀತಾ ವಿಲಿಯಮ್ಸೌ ಬಹ್ಯಾಕಾಶದಿಂದು ಬರುವಾಗಲೂ ಗ್ರಾಮಸ್ಥರು ದೇವಸ್ಥಾನದಲ್ಲಿ ಯಜ್ಞ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಮತ್ತು ಅವರ ಸುರಕ್ಷಿತ ಆವರಣದಲ್ಲಿ ಅಖಂಡ ಜ್ಯೋತಿ ಬೆಳಗಿಸಿದರು.
ಸುಮಾರು ಒಂಬತ್ತು ತಿಂಗಳಿನಿಮದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇದ್ದು ಭೂಮಿಗೆ ಮರಳಲು ಎದುರಾಗುತ್ತಿದ್ದ ಸಮಸ್ಯೆ ಆತಂಕ ಹುಟ್ಟಿಸಿತ್ತು. ಸುನೀತಾ ವಿಲಿಯಮ್ಸೌ ಅವರ ತಂದೆ ದೀಪಕ್ ಪಾಂಡ್ಯ ಅವರ ಪೂರ್ವಜರ ಮನೆ ಎಂದು ಕರೆಯಲ್ಪಡುವ ಜುಲಾಸನ್‌ನಲ್ಲಿ ಹರ್ಷದ ಹೊನಲು ತುಂಬಿದೆ.
ಸಂದಿಗ್ಧ ಪರಿಸ್ಥಿತಿಯಲ್ಲಿ ಆಕೆ ಸುರಕ್ಷಿತ ವಾಪಸಾತಿಗಾಗಿ ಅಖಂಡ ಜ್ಯೋತಿ ಅನ್ನು ಕಾಳಜಿ ವಹಿಸಿ ಗ್ರಾಮಸ್ಥರು ಆಕೆಯ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದಾರೆ ಎಂದು ಆಕೆಯ ಸೋದರಸಂಬಂಧಿ ನವೀನ್ ಪಾಂಡ್ಯ ಹೇಳಿದ್ದಾರೆ.
ದೀಪಾವಳಿ ಮತ್ತು ಹೋಳಿಯಂತೆ ಹಬ್ಬದ ವಾವರಣವನ್ನು ಸೃಷ್ಟಿಸಲು ಗ್ರಾಮಸ್ಥರು ಅವಳ ಗೌರವಾರ್ಥವಾಗಿ ಪ್ರಾರ್ಥನೆ ಪಠಣ ಮತ್ತು ಪಟಾಕಿಗಳೊಂದಿಗೆ ಭವ್ಯ ಮೆರವಣಿಗೆ ಆಯೋಜಿಸಿದ್ದಾರೆ ಎಂದು ಅವರು ಹೇಳಿದರು.
ಗ್ರಾಮದ ಶಾಲೆಯಿಂದ ಅಖಂಡ ಜ್ಯೋತಿ ಇರುವ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ನಂತರ ಅಖಂಡ ಜ್ಯೋತಿ ನಿಮಜ್ಜನ ನಡೆಯಲಿದೆ ಎಂದರು.
ಜುಲಾಸನ್‌ಗೆ ಭೇಟಿ ನೀಡಲು ಸುನೀತಾ ವಿಲಿಯಮ್ಸೌಅವರನ್ನು ಆಹ್ವಾನಿಸಲು ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ ಎಂದು ಅವರು ಹೇಳಿದರು.
ವಿಲಿಯಮ್ಸೌ ತನ್ನ ಬಾಹ್ಯಾಕಾಶ ಕಾರ್ಯಾಚರಣೆಗಳ ನಂತರ 2007 ಮತ್ತು 2013ರಲ್ಲಿ ಸೇರಿದಂತೆ ಕನಿಷ್ಠ ಮೂರು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ ಮತ್ತು 2008ರಲ್ಲಿ ಪದಭೂಷಣ ಗೌರವವನ್ನು ಪಡೆದಿದ್ದಾರೆ. ಆಕೆಯ ತಂದೆ, ಮೂಲತಃ ಜುಲಾಸನ್‌ನಿಂದ, 1957 ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು. ಒಂಬತ್ತು ಬಾಹ್ಯಾಕಾಶ ನಡಿಗೆಗಳಲ್ಲಿ 62 ಗಂಟೆಗಳನ್ನು ಪೂರ್ಣಗೊಳಿಸಿದ ಸುನೀತಾ ವಿಲಿಯಮ್ಸೌ ಈಗ ಮಹಿಳಾ ಗಗನಯಾತ್ರಿಯಾಗಿ ಬಾಹ್ಯಾಕಾಶದಲ್ಲಿ ಅತಿಹೆಚ್ಚು ಸಮಯ ಕಳೆದ ದಾಖಲೆ ಹೊಂದಿದ್ದಾರೆ.