ನ್ಯೂಜರ್ಸಿ, ಮಾ.19- ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶದಿಂದ ಕ್ಷೇಮವಾಗಿ ಹಿಂತಿರುಗಿರುವುದಕ್ಕೆ ಅವರ ಕುಟುಂಬ ದೇವರಿಗೆ ಧನ್ಯವಾದ ಅರ್ಪಿಸಿದೆ. ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸುನೀತಾ ವಿಲಿಯಮ್ಸ್ ಅವರ ಅತ್ತಿಗೆ ಫಾಲ್ಗುಣಿ ಪಾಂಡ್ಯ ಅವರು ಅಬ್ಬಾ ನಮ್ಮ ಮನೆ ಲಕ್ಷ್ಮೀ ಕ್ಷೇಮವಾಗಿ ಹಿಂತಿರುಗಿರುವುದು ನಮ್ಮ ಕುಟುಂಬದ ಸಂತಸದ ಕ್ಷಣಗಳಲ್ಲಿ ಒಂದಾಗಿದೆ ಎಂದಿದ್ದಾರೆ.
ಸುನೀತಾ ಜತೆಗೆ ಇತರ ಗಗನಯಾತ್ರಿಗಳು ಸುರಕ್ಷಿತವಾಗಿ ಹಿಂದಿರುಗಿರುವುದಕ್ಕೂ ಅವರು ತಮ್ಮ ಸಂತಸವನ್ನಯ ವ್ಯಕ್ತಪಡಿಸಿದರು. ಎಲ್ಲವೂ ಯೋಜಿಸಿದಂತೆ ನಡೆದಿದ್ದಕ್ಕಾಗಿ ದೇವರಿಗೆ ಧನ್ಯವಾದ ಹೇಳಲು ನಮ್ಮ ಕುಟುಂಬವು ದೇವಾಲಯಕ್ಕೆ ಬಂದಿದೆ ಎಂದು ಅವರು ಹೇಳಿದರು.
ನಮ್ಮ ಕುಟುಂಬ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಮತ್ತು ಹವನವನ್ನು ಯೋಜಿಸಿದ್ದೇವೆ. ಸುನೀತಾ ಅಮೆರಿಕದಾದ್ಯಂತ ತಮ್ಮ ಕುಟುಂಬವನ್ನು ಹೊಂದಿದ್ದಾಳೆ, ಮತ್ತು ಅವಳು ಇಳಿದ ನಂತರ ನಾವೆಲ್ಲರೂ ದೇವಾಲಯಕ್ಕೆ ಬರಲು ನಿರ್ಧರಿಸಿದ್ದೆವು ಎಂದಿದ್ದಾರೆ.
ಅವರು ಸುರಕ್ಷಿತವಾಗಿ ಮರಳಿದ್ದಕ್ಕಾಗಿ ದೇವರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನನಗೆ ತುಂಬಾ ಸಂತೋಷವಾಗಿದೆಎಂದು ಫಾಲ್ಗುಣಿ ಪಾಂಡ್ಯ ಹೇಳಿದರು.