Thursday, March 20, 2025
Homeರಾಜ್ಯರಾಜ್ಯದಲ್ಲಿ ಪ್ಲಾಸ್ಟಿಕ್‌ ನಿಷೇಧ ಕಷ್ಟ : ಸಚಿವ ಸಿ.ಸುಧಾಕರ್‌

ರಾಜ್ಯದಲ್ಲಿ ಪ್ಲಾಸ್ಟಿಕ್‌ ನಿಷೇಧ ಕಷ್ಟ : ಸಚಿವ ಸಿ.ಸುಧಾಕರ್‌

Plastic ban difficult in the state: Minister C. Sudhakar

ಬೆಂಗಳೂರು,ಮಾ.19- ರಾಜ್ಯದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧವಿದ್ದರೂ ಸಂಪೂರ್ಣವಾಗಿ ನಿಷೇಧಿಸುವುದು ಕಷ್ಟ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ವಿಧಾನಪರಿಷತ್‌ಗೆ ತಿಳಿಸಿದರು.

2025-26ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಅವರು, ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆ ನಿಷೇಧವಿದೆ. ಬಳಸುವವರಿಗೆ ಮತ್ತು ನಿಷೇದಿತ ಪ್ಲಾಸ್ಟಿಕ್‌ ಉತ್ಪಾದಿಸುವವರಿಗೆ ದಂಡ ಹಾಕುತ್ತಿದ್ದೇವೆ ಎಂದರು.

ಪ್ಲಾಸ್ಟಿಕ್‌ ಲೋಟ, ತಟ್ಟೆ, ಹಾರ ಇತ್ಯಾದಿಗಳು ಬಳಕೆಯಾಗುತ್ತಿವೆ. ಇದನ್ನು ನಿಷೇಧಿಸಲಾಗಿದೆ. ಆದರೂ ಒಂದಲ್ಲ ಒಂದು ರೀತಿಯಲ್ಲಿ ಪ್ಲಾಸ್ಟಿಕ್‌ ಬಳಕೆಯಲ್ಲಿವೆ. ಹೀಗಾಗಿ ಇದನ್ನು ಸಂಪೂರ್ಣವಾಗಿ ನಿಷೇಧ ಮಾಡಲು ಕಷ್ಟ ಸಾಧ್ಯ ಎಂದು ಹೇಳಿದರು.

RELATED ARTICLES

Latest News