ಮುಂಬೈ, ಮಾ.24-ನಗರದ ವಿದ್ಯಾವಿಹಾರ್ ಪ್ರದೇಶದಲ್ಲಿನ 13 ಅಂತಸ್ತಿನ ವಸತಿ ಕಟ್ಟಡದಲ್ಲಿ ಇಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡು ಭದ್ರತಾ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ. ವಿದ್ಯಾವಿಹಾರ್ ನಿಲ್ದಾಣದ ಎದುರಿನ ನಾಥನಿ ರಸ್ತೆಯಲ್ಲಿರುವ ತಕ್ಷಶಿಲಾ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿ ಬೆಳಗಿನ ಜಾವ 4.35ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಯಲ್ಲಿನ ಐದು ಫ್ಲಾಟ್ಗಳಲ್ಲಿ ವಿದ್ಯುತ್ ಅಳವಡಿಕೆಗಳು, ಗೃಹೋಪಯೋಗಿ ವಸ್ತುಗಳು, ಮರದ ಪೀಠೋಪಕರಣಗಳು, ಎಸಿ. ಮತ್ತು ಬಟ್ಟೆಗಳಿಗೆ ಬೆಂಕಿ ತಗುಲಿದೆ ಎಂದು ಅವರು ಹೇಳಿದರು.
15 ರಿಂದ 20 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಮತ್ತು ಇಬ್ಬರು ಸೆಕ್ಯುರಿಟಿ ಗಾರ್ಡ್‌ಳು ಗಾಯಗೊಂಡಿದ್ದು, ಅವರನ್ನು ರಾಜವಾಡಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಅವರಲ್ಲಿ ಒಬ್ಬರಾದ ಉದಯ್ ಗಂಗನ್ (43) ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸತತ ಪ್ರಯತ್ನದಿಮದ ಬೆಳಿಗ್ಗೆ 7.33 ರ ಹೊತ್ತಿಗೆ ನಿಯಂತ್ರಣಕ್ಕೆ ತರಲಾಯಿತು ಎಂದು ಅಧಿಕಾರಿ ಸೇರಿಸಲಾಗಿದೆ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ತನಿಉಖೆ ಮುಂದುವರೆದಿದೆ ಎಂದು ಹೇಳಿದರು.