Tuesday, April 1, 2025
Homeರಾಜ್ಯಮೋದಿ ಹೆಸರಿನಲ್ಲಿ ಮುಸ್ಲಿಮರಿಗೆ ಈದ್ ಕಿಟ್ ಕೊಡುತ್ತಿದ್ದಾರೆ, ಇದು ತುಷ್ಟಿಕರಣವಲ್ಲವೇ? : ಗುಂಡೂರಾವ್

ಮೋದಿ ಹೆಸರಿನಲ್ಲಿ ಮುಸ್ಲಿಮರಿಗೆ ಈದ್ ಕಿಟ್ ಕೊಡುತ್ತಿದ್ದಾರೆ, ಇದು ತುಷ್ಟಿಕರಣವಲ್ಲವೇ? : ಗುಂಡೂರಾವ್

Eid kits to Muslims in the name of Modi, isn't this appeasement?

ಬೆಂಗಳೂರು,ಮಾ.26– ಸೌಗತ್-1 ಮೋದಿ ಹೆಸರಿನಲ್ಲಿ ಬಿಜೆಪಿಯ ವರೀಷ್ಠ ನಾಯಕರೇ ಮುಸ್ಲಿಮರಿಗೆ ಈದ್ ಕಿಟ್ ಕೊಡುತ್ತಿದ್ದಾರೆ. ಇದು ತುಷ್ಟಿಕರಣವಲ್ಲವೇ?, ಓಲೈಕೆ ರಾಜಕಾರಣವಲ್ಲವೇ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್‌ನವರು ಈದ್ ಕಿಟ್ ಕೊಟ್ಟರೆ ಬಿಜೆಪಿಯ ಪುಡಿ ನಾಯಕರು ಇಷ್ಟೊತ್ತಿಗಾಗಲೇ ಬೀದಿಗಿಳಿಯುತ್ತಿದ್ದರು. ಕಾಂಗ್ರೆಸ್ ಮುಸ್ಲಿಮರ ತುಷ್ಟಿಕರಣ ಮಾಡುತ್ತಿದೆ. ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಬೊಂಬಡ ಬಜಾಯಿಸುತ್ತಿದ್ದರು ಎಂದು ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು 32 ಲಕ್ಷ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಈದ್ ಕಿಟ್ ನೀಡಿದ್ದಾರೆ. ಪವಿತ್ರ ರಂಜಾನ್ ಸಮಯದಲ್ಲಿ ಮುಸ್ಲಿಮರಿಗೆ ಈದ್ ಕಿಟ್ ಕೊಡಲಿ. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಇದೇ ಕಾರ್ಯಕ್ರಮವನ್ನು ಕಾಂಗ್ರೆಸ್‌ನವರು ಮಾಡಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಒಮ್ಮೆ ಊಹಿಸಿಕೊಳ್ಳಿ ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News