ಬೆಂಗಳೂರು, ಮಾ.26– ಕರ್ನಾಟಕ ಇತಿಹಾಸದಲ್ಲೆ ಮೊದಲಬಾರಿಗೆ 73 ವರ್ಷಗಳ ನಂತರ ಬೆಂಗಳೂರಿನಲ್ಲಿ ‘ಮಿಸ್ ಯೂನಿವರ್ಸ್ ಕರ್ನಾಟಕ-2025’ ಸೌಂದರ್ಯ ಸ್ಫರ್ಧೆಯನ್ನು ಆಯೋಜಿಸಲಾಗಿದೆ. ಮೇ.16ರಂದು ನಗರದಲ್ಲಿ ಅಂತಿಮ ಸುತ್ತಿನ ಸ್ಫರ್ಧೆ ನಡೆಯಲಿದೆ.
ಶಕ್ತಿ ಗ್ರೂಪ್ ಆಫ್ ಕಂಪನಿ ಹಾಗೂ ರೀ ಬರ್ತ್ ಸಹಭಾಗಿತ್ವದಲ್ಲಿ ಹಿರಿಯ ರೂಪದರ್ಶಿ ನಂದಿನಿ ನಾಗರಾಜ್ ಸೌದರ್ಯ ಸ್ಫರ್ಧೆ ಆಯೋಜಿಸಿದ್ದಾರೆ. ಇದರ ಭಾಗವಾಗಿ ನಗರದ ಖಾಸಗಿ ಹೋಟೆಲ್ ನಲ್ಲಿ ಸುಂದರಿಯರ ಆಯ್ಕೆಪ್ರಕ್ರಿಯೆ ನಡೆಯಿತು. ಸುಮಾರು 100ಕ್ಕೂ ಹೆಚ್ಚು ಜನ ಸ್ಫರ್ಧಿಗಳು ಪಾಲ್ಗೊಂಡಿದ್ದರು. ಅಂತಿಮವಾಗಿ 30 ಸುಂದರಿಯರು ‘ಮಿಸ್ ಯೂನಿವರ್ಸ್ ಕರ್ನಾಟಕ’ ಸೌಂದರ್ಯ ಸ್ಫರ್ಧೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಹಿರಿಯ ರೂಪದರ್ಶಿಗಳಾದ ಜನನಿ ರಾಜನ್, ಬಬಿತಾ ಪ್ರಕಾಶ್, ಕಾವ್ಯ ಸಂಜು, ಅನಿಲ್ ಶೆಟ್ಟಿ ಜ್ಯೂರಿಗಳಾಗಿ ಪಾಲ್ಗೊಂಡಿದ್ದರು.

ಸ್ಪರ್ಧೆಯ ಆಯೋಜಕಿ ನಂದಿನಿ ನಾಗರಾಜ್, ರಾಜ್ಯದ ಇತಿಹಾಸದಲ್ಲೆ ಮೊದಲಬಾರಿಗೆ 73 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ‘ಮಿಸ್ ಯೂನಿವರ್ಸ್ ಕರ್ನಾಟಕ’ ಸೌಂದರ್ಯ ಸ್ಪರ್ಧೆ ನಡೆಸುತ್ತಿರುವುದು ಸಂತಸ ತಂದಿದೆ. ಮೇ 16ರಂದು ನಗರದ ಅಂತಿಮ ಸುತ್ತಿನ ಸ್ಫರ್ಧೆ ನಡೆಯಲಿದೆ. ರಾಜ್ಯ ಸೇರಿದಂತೆ ಹೊರರಾಜ್ಯಗಳಿಂದಲೂ ಸ್ಫರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಇಲ್ಲಿ ಕಿರೀಟ ವಿಜೇತರಾದವರನ್ನು ‘ಮಿಸ್ ಇಂಡಿಯಾ’ ಸ್ಫರ್ಧೆಗೆ ಅಣಿಗೊಣಿಸಲಾಗುವುದು. ಮಿಸ್ ಇಂಡಿಯಾ ಕಿರೀಟ ನಮ್ಮದಾಗಿಸಿಕೊಳ್ಳುವುದು ನಮ್ಮ ಮುಂದಿನ ಗುರಿ ಎಂದು ತಿಳಿಸಿದರು.

ಈ ವೇಳೆ ಶಕ್ತಿ ಗ್ರೂಪ್ ಆಫ್ ಕಂಪನಿ ವ್ಯವಸ್ಥಾಪ ನಿರ್ದೇಶಕ ವೆಂಕಟೇಶ್ ಮಾತನಾಡಿ, ಮಹಿಳೆಯರು ಸ್ವಾವಲಂಭಿಯಾಗಿ ಬದುಕು ಕಟ್ಟಿಕೊಳ್ಳಲು ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ‘ಮಿಸ್ ಕರ್ನಾಟಕ ಯೂನಿವರ್ಸ್’ ಆಯೋಜನೆ ಮಾಡಲಾಗಿದೆ. ಸುಶ್ಮಿತಾಸೇನ್, ಲಾರಾದತ್ತ, ರಿಯಾ ವಿಶ್ವದ ಕಿರೀಟ ತಂದಿದ್ದಾರೆ. ಇವರು ಇಂದಿನ ಪೀಳಿಘೆಗೆ ಸ್ಫೂರ್ತಿ. ಇಂದು ಕರ್ನಾಟಕದಲ್ಲಿ ನಂದಿನಿ ನಾಗರಾಜ್ ಅವರು, ಇಲ್ಲಿನ ಪ್ರತಿಭೆಗಳನ್ನು ಗುರುತಿಸಿ ಸ್ಫರ್ಧೆಯಲ್ಲಿ ಅವಕಾಶ ನೀಡುತ್ತಿರುವುದು ಶ್ಲಾಘನೀಯ. ಶಕ್ತಿ ಗ್ರೂಪ್ ಇರದ ಭಾಗವಾಗಿ ಕೆಲಸ ಮಾಡುತ್ತಿರುವುದು ನಮಗೆ ಸಂತಸ ತಂದಿದೆ ಎಂದರು.