Tuesday, April 1, 2025
Homeರಾಷ್ಟ್ರೀಯ | Nationalಗೋಧಿ ದಾಸ್ತಾನಿನ ಮೇಲೆ ಕೇಂದ್ರ ಸರ್ಕಾರ ನಿಗಾ

ಗೋಧಿ ದಾಸ್ತಾನಿನ ಮೇಲೆ ಕೇಂದ್ರ ಸರ್ಕಾರ ನಿಗಾ

Centre asks traders, wholesales, retailers to declare wheat stock every Friday from 1 April

ನವದೆಹಲಿ,ಮಾ.26- ಕೇಂದ್ರ ಸರ್ಕಾರ ಗೋಧಿ (ದಾಸ್ತಾನು ಮೇಲೆ ನಿಗಾ ವಹಿಸಿದ್ದು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ವರ್ತಕರು ಏಪ್ರಿಲ್‌ 1ರಿಂದ ಕಡ್ಡಾಯವಾಗಿ ಗೋಧಿ ದಾಸ್ತಾನು ವಿವರ ದಾಖಲಿಸಬೇಕು ಎಂದು ಕೇಂದ್ರ ಆಹಾರ ಇಲಾಖೆ ಸೂಚನೆ ನೀಡಿದೆ.

ದೇಶದಲ್ಲಿ ಆಹಾರ ಭದ್ರತೆ ಕಲ್ಪಿಸಲು ಮತ್ತು ಅಪಪ್ರಚಾರದ ಊಹಾಪೋಹಗಳನ್ನು ತಡೆಗಟ್ಟುವ ಸಲುವಾಗಿ ಈ ಪಾರದರ್ಶಕ ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪಾರಿಗಳು/ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ದೊಡ್ಡ ವರ್ತಕರು ಮತ್ತು ಸಂಸ್ಕರಣಾಕಾರರು ಏಪ್ರಿಲ್‌ 1ರಿಂದ ಗೋಧಿ ದಾಸ್ತಾನು ಘೋಷಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಕೇಂದ್ರ ಸರ್ಕಾರ ಎಲ್ಲಾ ವರ್ಗದ ಘಟಕಗಳಿಗೆ ಗೋಧಿ ದಾಸ್ತಾನು ಮಿತಿಯನ್ನು ಇದೇ ಮಾರ್ಚ್‌ 31ಕ್ಕೆ ಅಂತ್ಯಗೊಳಿಸಲಿದ್ದು, ನಂತರ ಹೊಸದಾಗಿ ಪೋರ್ಟಲ್‌ನಲ್ಲಿ ಗೋಧಿ ದಾಸ್ತಾನು ಎಷ್ಟಿದೆ ಎಂಬುದನ್ನು ಬಹಿರಂಗಪಡಿಸಬೇಕು. ಪೋರ್ಟಲ್‌ನಲ್ಲಿ ಇನ್ನೂ ನೋಂದಣಿ ಮಾಡಿಕೊಳ್ಳದ ಘಟಕಗಳು ತ್ವರಿತವಾಗಿ ನೋಂದಾಯಿಸಿಕೊಳ್ಳಬೇಕು ಮತ್ತು ಪ್ರತಿ ಶುಕ್ರವಾರ ಗೋಧಿ ದಾಸ್ತಾನು ಬಗ್ಗೆ ಮಾಹಿತಿ ದಾಖಲಿಸಬೇಕು ಎಂದು ಸೂಚಿಸಿದೆ.

ಪೋರ್ಟಲ್‌: https://evegoils.nic.in/wsp/login ಈ ಪೋರ್ಟಲ್‌ನಲ್ಲಿ ಪ್ರಸ್ತುತ ಗೋಧಿ ದಾಸ್ತಾನು ಸ್ಥಿತಿಯನ್ನು ಘೋಷಿಸಬೇಕು ಹಾಗೂ ಮುಂದಿನ ಆದೇಶದವರೆಗೆ ಪ್ರತಿ ಶುಕ್ರವಾರ ಮಾಹಿತಿ ನವೀಕರಿಸಬೇಕು. ಎಲ್ಲಾ ಘಟಕಗಳು ಪೋರ್ಟಲ್‌ನಲ್ಲಿ ನಿಯಮಿತವಾಗಿ ಮತ್ತು ಸರಿಯಾಗಿ ದಾಸ್ತಾನು ಬಹಿರಂಗಪಡಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವಾಲಯ ತಿಳಿಸಿದೆ.

RELATED ARTICLES

Latest News