Tuesday, April 1, 2025
Homeರಾಜ್ಯಶಾಸಕರ ಅಮಾನತು ಅನಿವಾರ್ಯವಾಗಿತ್ತು : ಸಚಿವ ಎಚ್‌.ಕೆ.ಪಾಟೀಲ್‌

ಶಾಸಕರ ಅಮಾನತು ಅನಿವಾರ್ಯವಾಗಿತ್ತು : ಸಚಿವ ಎಚ್‌.ಕೆ.ಪಾಟೀಲ್‌

Suspension of MLAs was inevitable: Minister H.K. Patil

ಬೆಂಗಳೂರು,ಮಾ.26– ವಿಧಾನಸಭೆಯಲ್ಲಿ ಅಶಿಸ್ತು ತೋರಿದ ಶಾಸಕರ ವಿರುದ್ದ ಸಭಾಧ್ಯಕ್ಷರು ಶಿಸ್ತುಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಸಮರ್ಥಿಸಿಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿರುವ ಬಗ್ಗೆ ಚರ್ಚೆಗಳಾಗುತ್ತಿವೆ. ಆ ಬಗ್ಗೆ ಹಲವು ರಾಜಕೀಯ ಮುಖಂಡರು ಮಾತನಾಡಿದ್ದಾರೆ. ಅಮಾನತು ವಾಪಸ್‌ ಪಡೆಯಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ನಾಳಿನ ಸಚಿವ ಸಂಪುಟ ಸಭೆಯಲ್ಲೂ ಚರ್ಚಿಸಲಾಗುವುದು ಎಂದರು.

ಸಭಾಧ್ಯಕ್ಷರ ಆಡಳಿತವನ್ನು ನಾವು ಚರ್ಚೆ ಮಾಡಲು ಬರುವುದಿಲ್ಲ. ಶಾಸಕರ ಅಶಿಸ್ತಿನ ನಡವಳಿಕೆಯನ್ನು ಯಾರೂ ಕೂಡ ನಂಬಲು ಸಾಧ್ಯವಿಲ್ಲ ಎಂದರು. ಮನವಿ: ವಿಧಾನಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಾರದು.

ಅವರು ವಿಧಾನಪರಿಷತ್‌ ಹಿರಿಯ ಸದಸ್ಯರೂ ಹಾಗೂ ಸಭಾಪತಿಗಳಾಗಿದ್ದಾರೆ. ಅವರು ರಾಜೀನಾಮೆ ನೀಡಬಾರದು ಎಂದು ಮನವಿಯನ್ನು ಮಾಡುತ್ತೇನೆ ಎಂದು ಹೇಳಿದರು. ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕೆ ಹೊರತು ರಾಜೀನಾಮೆ ನೀಡುವುದು ಸೂಕ್ತವಲ್ಲ ಎಂದರು.

RELATED ARTICLES

Latest News