Wednesday, April 2, 2025
Homeರಾಜಕೀಯ | Politicsಬಿಜೆಪಿಯಿಂದ ಯತ್ನಾಳ್‌ ಉಚ್ಚಾಟನೆ : ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಆಕ್ರೋಶ

ಬಿಜೆಪಿಯಿಂದ ಯತ್ನಾಳ್‌ ಉಚ್ಚಾಟನೆ : ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಆಕ್ರೋಶ

Yatnal's expulsion from BJP: Fans' outrage on social media

ಬೆಂಗಳೂರು,ಮಾ.27- ಫೈರ್‌ ಬ್ರಾಂಡ್‌ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿರುವುದು ಅವರ ಅಭಿಮಾನಿಗಳನ್ನು ಕೆರಳಿಸಿದೆ.

ಅಲ್ಲದೆ, ಹಿಂದುತ್ವದ ಹೆಸರಿನಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದ ಅಪಾರ ಸಂಖ್ಯೆಯವರನ್ನೂ ಕೆರಳಿಸಿದೆ. ಟ್ವಿಟ್ಟರ್‌ನಲ್ಲಿ ಇವರೆಲ್ಲರೂ ತಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಹಿಂದೂಗಳಿಂದ ಬಿಜೆಪಿ, ಬಿಜೆಪಿ ಇಂದ ಹಿಂದೂಗಳಲ್ಲ. ಬಸನಗೌಡ ಯತ್ನಾಳ್‌ ಅವರನ್ನು ಹೊಂದಾಣಿಕೆ ರಾಜಕಾರಣಿಗಳು, ವಂಶಪಾರಂಪರ್ಯ ರಾಜಕಾರಣಿಗಳು ಇಂದು ತುಳಿದಿರಬಹುದು ಆದರೆ ಹಿಂದೂಗಳ ಒಗ್ಗಟ್ಟನ್ನು ತುಳಿಯಲಾಗುವುದಿಲ್ಲ ಎಂದು ಅವರು ಆಕೋಶ ಹೊರಹಾಕಿದ್ದಾರೆ. ಸನಾತನ ಎಂಬ ಟ್ವಿಟ್ಟರ್‌ ಖಾತೆಯಲ್ಲಿ ಈ ರೀತಿಯ ಟ್ವೀಟ್‌ ಬಂದಿದೆ.

ಇದಲ್ಲದೆ, ಬಿಜೆಪಿ ಕಾರ್ಯಕರ್ತರೆಲ್ಲರಿಗೂ ಕರೆ ನೀಡಲಾಗಿದ್ದು, ಸ್ವಾಭಿಮಾನಿ ಕಾರ್ಯಕರ್ತರೆಲ್ಲರೂ ಸಾಮೂಹಿಕ ರಾಜೀನಾಮೆ ನೀಡಿ ಹೊರಬರಬೇಕು. ಹಿಂದುತ್ವದ ಪರ ಇರುವ ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು ರಾಜೀನಾಮೆ ನೀಡಿ ಹೊರಬರಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕ ಸಿವಿಲ್‌ ಇಂಜಿನಿಯರ್ಸ್‌ ಅಸೋಸಿಯೇಷನ್‌ ಟ್ವಿಟ್ಟರ್‌ ಖಾತೆಯಲ್ಲಿ ಯತ್ನಾಳ್‌ ಅವರನ್ನು ಬೆಂಬಲಿಸಿ ಟ್ವೀಟ್‌ ಹಾಕಲಾಗಿದೆ. ಅದರಲ್ಲಿ, ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ, ಕೆಪಿಎಸ್‌‍ಸಿ ಭ್ರಷ್ಟರ ವಿರುದ್ಧ ನಮ ಜೊತೆ ನಿಂತಿದ್ದ ಯತ್ನಾಳ್‌ರವರಿಗೆ ನಮ ಬೆಂಬಲ ಎಂದೆಂದಿಗೂ ಇದ್ದೇ ಇರುತ್ತದೆ. ಒಂದು ಪಾರ್ಟಿ ನ್ಯಾಯದ ಪರವಾಗಿ, ನಿಲ್ಲುತ್ತಿದ್ದ ನಾಯಕನನ್ನು ಉಚ್ಚಾಟನೆ ಮಾಡಿದರೆ ಬಿಜೆಪಿ ಸರಿಯಿಲ್ಲ ಎಂದು ಎನಿಸುತ್ತಿದೆ. ಹೊಸ ಅಧ್ಯಾಯ ಶುರುವಾಗಲಿ ಬಸನಗೌಡ ಪಾಟೀಲ್‌ ಅವರದ್ದೇ ಪ್ರತ್ಯೇಕ ಬಿಜೆಪಿ ಎಂದು ಆಗ್ರಹಿಸಿದೆ.

ತಮ ಉಚ್ಛಾಟನೆ ಬಗ್ಗೆ ಪ್ರತಿಕ್ರಿಯಿಸಿರುವ ಯತ್ನಾಳ್‌, ಸತ್ಯವಂತರಿಗಿದು ಕಾಲವಲ್ಲ. ದುಷ್ಟ ಜನರಿಗೆ ಸುಭಿಕ್ಷ ಕಾಲ. ಉಪಕಾರ ಮಾಡಿದರೆ ಅಪಕರಿಸುವ ಕಾಲ. ಸಕಲವೂ ತಿಳಿದವಗೆ ದುರ್ಭಿಕ್ಷ ಕಾಲ. ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ. ಕರ್ಮಿ ಪಾತಕರಿಗೆ ಬಹು ಸೌಖ್ಯಕಾಲ. ಸತ್ಯವಂತರಿಗಿದು ಕಾಲವಲ್ಲ ಎಂಬ ಪದ್ಯವನ್ನು ಹಾಕಿದ್ದಾರೆ.

ಯತ್ನಾಳ್‌ ಅವರ ಉಚ್ಛಾಟನೆ ಆದೇಶ ಹೊರಬೀಳುತ್ತಿದ್ದಂತೆಯೇ, ಬಸನಗೌಡ ಪಾಟೀಲರ ತವರು ಕ್ಷೇತ್ರವಾದ ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅತ್ತ, ವಿಜಯೇಂದ್ರ ಅವರು, ಯಾವುದೇ ಸಂಭ್ರಮಾಚರಣೆ ಮಾಡಬಾರದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದರೂ ಅದಕ್ಕೆ ವಿಜಯಪುರದ ಕಾರ್ಯಕರ್ತರು ಓಗೊಟ್ಟಿಲ್ಲ. ಮಾಜಿ ಪಾಲಿಕೆ ಸದಸ್ಯ ಉಮೇಶ ವಂದಾಲ ನೇತೃತ್ವದಲ್ಲಿ ಸಂಭ್ರಮ ಮಾಡಿರುವ ಕಾರ್ಯಕರ್ತರು, ನಗರದ ಶಾಹುನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಿಜೆಪಿಗೆ ಅಂಟಿದ ಕಳಂಕ ತೊಲಗಿತುಎಂದು ಘೋಷಣೆ ಮಾಡಿದರು.

RELATED ARTICLES

Latest News